For Quick Alerts
  ALLOW NOTIFICATIONS  
  For Daily Alerts

  ತಮನ್ನಾ-ವಿರಾಟ್ ಕೊಹ್ಲಿ ವಿರುದ್ಧ ದೂರು: ಬಂಧನಕ್ಕೆ ಒತ್ತಾಯ

  |

  ನಟಿ ತಮನ್ನಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಸಂಕಷ್ಟ ಎದುರಾಗಿದೆ. ಇಬ್ಬರ ವಿರುದ್ಧ ಚೆನ್ನೈನ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ.

  ಸಾರ್ವಜನಿಕರು ಜೂಜಾಡುವಂತೆ ನಟಿ ತಮನ್ನಾ ಹಾಗೂ ವಿರಾಟ್ ಕೊಹ್ಲಿ ಪ್ರೇರೇಪಣೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದ್ದು, ಇಬ್ಬರನ್ನೂ ಬಂಧಿಸಬೇಕು ಎಂದು ಪಿಐಎಲ್‌ನಲ್ಲಿ ಒತ್ತಾಯಿಸಲಾಗಿದೆ.

  ಹಿರಿಯ ಪೊಲೀಸ್ ಅಧಿಕಾರಿಯನ್ನು ಮನಸಾರೆ ಹೊಗಳಿದ ಯೋಗರಾಜ್ ಭಟ್ಹಿರಿಯ ಪೊಲೀಸ್ ಅಧಿಕಾರಿಯನ್ನು ಮನಸಾರೆ ಹೊಗಳಿದ ಯೋಗರಾಜ್ ಭಟ್

  ತಮನ್ನಾ ಹಾಗೂ ವಿರಾಟ್ ಕೊಹ್ಲಿ ಆನ್‌ಲೈನ್ ಜೂಜಿನ ಜಾಹೀರಾತಿನ ಪ್ರಮುಖ ರಾಯಭಾರಿಗಳಾಗಿದ್ದಾರೆ. ಹಾಗಾಗಿ ಇಬ್ಬರ ವಿರುದ್ಧವೂ ಪಿಐಎಲ್‌ ಸಲ್ಲಿಸಲಾಗಿದೆ.

  ಆನ್‌ಲೈನ್ ಜೂಜಿನ ಪ್ರಚಾರ ರಾಯಭಾರಿಗಳು

  ಆನ್‌ಲೈನ್ ಜೂಜಿನ ಪ್ರಚಾರ ರಾಯಭಾರಿಗಳು

  ವಿರಾಟ್ ಕೋಹ್ಲಿ ಹಾಗೂ ತಮನ್ನಾ ಅವರುಗಳು ಎಂಪಿಎಲ್‌ ಎಂಬ ಆನ್‌ಲೈನ್ ಜೂಜಿನ ಪ್ರಚಾರ ರಾಯಭಾರಿಗಳಾಗಿದ್ದು, 'ಜೂಜು ಆಡಿ ಹಣ ಗಳಿಸಿ' ಎಂದು ಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಅವರ ವಿರುದ್ಧ ಚೆನ್ನೈನ ಮಡ್ರಾಸ್ ಹೈಕೋರ್ಟ್‌ನಲ್ಲಿ ಪಿಐಎಸ್ ಸಲ್ಲಿಕೆಯಾಗಿದೆ.

  'ಆರ್ಟಿಕಲ್ 21 ರ ಉಲ್ಲಂಘನೆ'

  'ಆರ್ಟಿಕಲ್ 21 ರ ಉಲ್ಲಂಘನೆ'

  ಭಾರತದಲ್ಲಿ ಜೂಜು ಅಪರಾಧ. ಹಾಗಿದ್ದಾಗ ಆನ್‌ಲೈನ್ ಜೂಜು ಆಡಲು ಪ್ರೇರಿಪಿಸುತ್ತಿರುವುದು ಸಹ ಅಪರಾಧ. ಇದು ಸಂವಿಧಾನದ 21 ನೇ ವಿಧಿಯ ಉಲ್ಲಂಘನೆಯಾಗಿದೆ, ಹಾಗಾಗಿ ಆ ಇಬ್ಬರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಲಾಗಿದೆ.

  ರಮ್ಮೀ ಕಾರಣಕ್ಕೆ ಸುದೀಪ್‌ರನ್ನು ಟೀಕಿಸಿದ ಅಹೋರಾತ್ರಗೆ ಅಭಿಮಾನಿಗಳ ಬೆದರಿಕೆರಮ್ಮೀ ಕಾರಣಕ್ಕೆ ಸುದೀಪ್‌ರನ್ನು ಟೀಕಿಸಿದ ಅಹೋರಾತ್ರಗೆ ಅಭಿಮಾನಿಗಳ ಬೆದರಿಕೆ

  ಮುಂದಿನ ವಾರ ಅರ್ಜಿ ವಿಚಾರಣೆ

  ಮುಂದಿನ ವಾರ ಅರ್ಜಿ ವಿಚಾರಣೆ

  ಯುವಕರು ಈ ಆನ್‌ಲೈನ್ ಜೂಜಿನ ಚಟಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿದ್ದಾರೆ ಎಂದು ಪಿಐಎಲ್‌ನಲ್ಲಿ ಹೇಳಲಾಗಿದ್ದು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಂದಿನ ವಾರ ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ ಹೇಳಿದೆ.

  ಕರ್ನಾಟದಲ್ಲಿ ಆನ್‌ಲೈನ್ ಅಭಿಯಾನ

  ಕರ್ನಾಟದಲ್ಲಿ ಆನ್‌ಲೈನ್ ಅಭಿಯಾನ

  ಕರ್ನಾಟಕದಲ್ಲಿ ಸಹ ನಟ ಸುದೀಪ್ ಅವರು ಆನ್‌ಲೈನ್ ರಮ್ಮಿ ಜಾಹೀರಾತಿನ ರಾಯಭಾರಿ ಆಗಿದ್ದರು. ನಟಿ ರಶ್ಮಿಕಾ ಮಂದಣ್ಣ ಸಹ ರಮ್ಮಿ ಆಟದ ಪ್ರಚಾರ ಮಾಡಿದ್ದರು. ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಸಹ ಆನ್‌ಲೈನ್ ಜೂಜಿನ ಪ್ರಚಾರ ರಾಯಭಾರಿ ಆಗಿದ್ದಾರೆ. ಇವರ ವಿರುದ್ಧವೂ ಕೆಲವು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಿದ್ದಾರೆ.

  English summary
  PIL filed in Madras high court against Virat Kohli and Tamannaah Bhatia for promoting online gambling.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X