ಅಕ್ರಮ ಸಂಬಂಧವಿರುವ ವಿಚಾರ ಗೊತ್ತಾದರೂ ಕೂಡ ನನ್ನ ಹೆಂಡತಿ ನನಗೆ ಡಿವೋರ್ಸ್ ಕೊಡಲಿಲ್ಲ ; ಕಣ್ಣೀರು ಹಾಕಿದ 63 ವರ್ಷದ ನಟ
ಅರೆಂಜ್ ಮ್ಯಾರೇಜ್ ಆಗಿರಲಿ.. ಲವ್ ಮ್ಯಾರೇಜ್ ಆಗಿರಲಿ.. ಸಂಬಂಧದಲ್ಲಿ ಪರಸ್ಪರ ಪ್ರೀತಿ-ವಿಶ್ವಾಸ ಇರಬೇಕು. ಆಗಲೇ ದಾಂಪತ್ಯ ಜೀವನ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ. ಆದರೆ.. ಬದಲಾದ ಈ ಕಾಲದಲ್ಲಿ. ಬದುಕಲು ದೊರೆತ ಅಸಂಖ್ಯ ಅವಕಾಶಗಳು, ವ್ಯಕ್ತಿ ಸ್ವಾತಂತ್ರ್ಯ .. ಹೊಂದಾಣಿಕೆ ಕೊರತೆ .. ದೈಹಿಕ ಅತೃಪ್ತಿ .. ಪ್ರೀತಿಯ ಕೊರತೆ ..
ಹೀಗೆ ಮುಂತಾದ ಕಾರಣಗಳಿಂದ ಹಲವರು ಮದುವೆಯ ನಂತರ ಅನೈತಿಕ ಸಂಬಂಧಕ್ಕೆ ಹಾತೊರೆಯುತ್ತಿದ್ದಾರೆ. ವೈವಾಹಿಕ ಸಂಬಂಧದಲ್ಲಿ ಸಿಗದಿದ್ದನ್ನು ಹೊರಗಡೆ ಹುಡುಕುವ ಮನೋಭಾವ ಬೆಳೆಸಿಕೊಳ್ಳುತ್ತಾರೆ . ಆದರೆ ಈ ಪೈಕಿ ಕಾಲಾನಂತರ ಕೆಲವರಿಗೆ ಪಾಪ ಪ್ರಜ್ಞೆ ಕಾಡಲು ಶುರುವಾಗುತ್ತೆ.

ಅಕ್ರಮ ಸಂಬಂಧದ ವಿಚಾರ ಗೊತ್ತಾಗದೆ ಇದ್ದರೆ, ಸಂಗಾತಿಗೆ ನೋವೇ ಆಗಲ್ಲ ಎಂಬ ಭ್ರಮೆಯಲ್ಲಿ ಇವರು ಇರುತ್ತಾರಾದರೂ ಮನದ ಮೂಲೆಯಲ್ಲಿ ತಪ್ಪಿತಸ್ಥ ಎನ್ನುವ ಭಾವನೆ ಬೇರೂರಿರುತ್ತೆ. ಆಗ ಬದುಕು ಭಾರ ಎಂದು ಅನಿಸಲು ಶುರುವಾಗುತ್ತೆ. ಪಿಯೂಷ್ ಮಿಶ್ರಾ ಅವರ ವಿಚಾರದಲ್ಲಿ
ಕೂಡ ಇದೇ ಆಗಿತ್ತು.
ಹೌದು, ಪಿಯೂಷ್ ಮಿಶ್ರಾ.. ಬಾಲಿವುಡ್‌ನ ಹಿರಿಯ ಕಲಾವಿದ. ಕೇವಲ ನಟ ಮಾತ್ರ ಅಲ್ಲ ಅಪ್ರತಿಮ ಗಾಯಕ ಕೂಡ ಹೌದು ಪಿಯೂಶ್ ಮಿಶ್ರಾ. ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ವಿದ್ಯಾರ್ಥಿಯಾದ ಪಿಯೂಷ್ ಮಿಶ್ರಾ ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ನಿರ್ದೇಶನದ ಕ್ಷೇತ್ರದಲ್ಲಿಯೂ ಹೆಸರು ಮಾಡಿದ್ದಾರೆ. ರಂಗಭೂಮಿಯಲ್ಲಿ ಕೂಡ ಮಿಂಚಿದ್ದಾರೆ.
''ಗ್ಯಾಂಗ್ಸ್ ಆಫ್ ವಾಸೇಪುರ್''.. ''ಗುಲಾಲ್''.. ''ದಿ ಲೆಜೆಂಡ್ ಆಫ್ ಭಗತ್ ಸಿಂಗ್''.. ''ಲಫಂಗೇ ಪರಿಂದೇ''.. ''ಮಕ್ಬೂಲ್''.. ''ತಮಾಶಾ''.. ''ದಿಲ್ ಸೇ''.. ಇವರ ಕೆಲ ಪ್ರಖ್ಯಾತ ಸಿನಿಮಾಗಳು. ಇಂಥಾ ಪಿಯೂಷ್ ಮಿಶ್ರಾ ಸದ್ಯ ಬದುಕಿನ ಕಥೆ ಹೇಳಿದ್ದಾರೆ. ನನ್ನ ಪತ್ನಿಗೆ 15 ವರ್ಷ ಮೋಸ ಮಾಡಿದೆ ಎಂದು ಕಣ್ಣೀರು ಹಾಕಿದ್ದಾರೆ.
''ಶುಭಾಂಕರ್ ಮಿಶ್ರಾ'' ಅವರಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಪಿಯೂಷ್ ಮಿಶ್ರಾ, ನಾನು ಸುಧಾರಿಸಿದ್ದು ನನ್ನಲ್ಲಿ ಬದಲಾವಣೆಗಳಾಗಿದ್ದು ಈಗೀಗ ಅಷ್ಟೇ ಎಂದು ಹೇಳಿದ್ದಾರೆ. ಹಿಂದೆ ನಾನು ಹೀಗೆ ಇರಲಿಲ್ಲ ಎಂದು ಹೇಳಿರುವ ಪಿಯೂಷ್ ಮಿಶ್ರಾ ಮದುವೆ ಎನ್ನುವುದೇ ದೊಡ್ಡ ಜವಾಬ್ದಾರಿ ಆದರೆ ನಾನು ಆ ಜವಾಬ್ದಾರಿಯಿಂದ ವಿಮುಖನಾಗಿದ್ದೆ ಎಂದು ಹೇಳಿದ್ದಾರೆ.

ಅವಳು ನನ್ನ ಹೆಂಡತಿ ಎನ್ನುವ ಸತ್ಯ ನನಗೆ ಮನವರಿಕೆಯಾಗಲು ಹದಿನೈದು ವರ್ಷಗಳೇ ಬೇಕಾದವು ಎಂದು ಹೇಳಿರುವ ಪಿಯೂಷ್ ಮಿಶ್ರಾ, ಮೊದಲು ನಾನು ಅವಳು ಕೇವಲ ಅಡುಗೆ ಮಾಡುವವಳು, ನನ್ನ ಮಕ್ಕಳಿಗೆ ಜನ್ಮ ನೀಡಿದವಳು, ಮನೆಯನ್ನು ನೋಡಿಕೊಂಡು ಹೋಗುವ ಮಹಿಳೆ ಮಾತ್ರ ಎಂದುಕೊಂಡಿದ್ದೆ ಎಂದು ಹೇಳಿದ್ದಾರೆ. ಇದರಾಚೆ ಅವಳ ಮೇಲೆ ನನ್ನಲ್ಲಿ ಯಾವ ಭಾವನೆಯೂ ಇರಲಿಲ್ಲ ಎಂದಿದ್ದಾರೆ.
ಭಾವನನೆಗಳೇ ನನ್ನಲ್ಲಿ ಬತ್ತಿ ಹೋಗಿದ್ದವು ಎಂದು ಹೇಳಿರುವ ಪಿಯೂಷ್ ಮಿಶ್ರಾ ಸಮಾಜ ವಿರೋಧಿ ವ್ಯಕ್ತಿಯಾಗಿದ್ದೆ ಎಂದು ಹೇಳಿದ್ಧಾರೆ. ನಮ್ಮ ಮದುವೆಯನ್ನು ಉಳಿಸಿಕೊಳ್ಳಲು ನನ್ನ ಪತ್ನಿ ಪ್ರಿಯಾ ಮಾಡಿದ ಪ್ರಯತ್ನ ತುಂಬಾನೇ ದೊಡ್ಡದು ಎಂದು ಹೇಳಿರುವ ಪಿಯೂಷ್ ಮಿಶ್ರಾ ಅವಳು ನನ್ನನ್ನು ಪ್ರೀತಿಸಿದಳು, ನನಗೋಸ್ಕರ ತನ್ನ ಹೆತ್ತವರನ್ನೇ ಎದುರು ಹಾಕಿಕೊಂಡಳು, ನನ್ನನ್ನು ಮದುವೆಯಾದಳು, ನನಗೆ ಅಕ್ರಮ ಸಂಬಂಧಗಳಿರುವ ವಿಚಾರ ಗೊತ್ತಾದ ನಂತರವೂ ಕೂಡ ನಿನ್ನನ್ನೂ ನಾನು ಯಾವತ್ತು ಬಿಡುವುದಿಲ್ಲ ಎಂದು ಹೇಳಿದಳು ಎಂದು ಹೇಳಿದ್ದಾರೆ. ಅವಳ ಈ ದೊಡ್ಡತನವೇ ನನ್ನನ್ನೂ ಬದಲಿಸಿದ್ದು, ನಮ್ಮ ಸಂಸಾರವನ್ನು ಉಳಿಸಿದ್ದು ಎಂದು ಹೇಳಿದ್ದಾರೆ. ಭಾವುಕರಾಗಿದ್ದಾರೆ.
ಮುಂದುವರೆದು ನನ್ನ ಅಕ್ರಮ ಸಂಬಂಧ, ನಾನು ಎಸಗಿದ ದಾಂಪತ್ಯ ದ್ರೋಹದ ಕುರಿತು ಎಲ್ಲವನ್ನೂ ನನ್ನ ಹೆಂಡತಿಗೆ ನಾನು ನನ್ನ ತಪ್ಪಿನ ಅರಿವಾದಾಗ ಹೇಳಿದೆ ಎಂದು ಹೇಳಿರುವ ಪಿಯೂಷ್ ಮಿಶ್ರಾ ಆಗ ನಾವು ಇಬ್ಬರು ಅಪ್ಪಿಕೊಂಡೆವು, ಕಣ್ಣೀರು ಹಾಕಿದೆವು ಎಂದು ಹೇಳಿದ್ಧಾರೆ. ಸತ್ಯ ಹೊರ ಹಾಕಿದ ನಂತರ ನಮ್ಮ ಬಾಂಧವ್ಯ ಇನ್ನೂ ಗಟ್ಟಿಯಾಯ್ತು ಎಂದು ಹೇಳಿದ್ದಾರೆ.
ಅಂದ್ಹಾಗೇ ಪಿಯೂಷ್ ಮಿಶ್ರಾ ಅವರು ಪ್ರತಿಭಾನ್ವಿತ ವಾಸ್ತುಶಿಲ್ಪಿ ಪ್ರಿಯಾ ನಾರಾಯಣನ್ ಅವರನ್ನು 1995 ರಲ್ಲಿ ಮದುವೆಯಾಗಿದ್ದರು. ಇವರ ಪ್ರೀತಿಯ ಸಂಕೇತವಾಗಿ ಜೋಶ್ ಮತ್ತು ಜೈ ಎಂಬ ಇಬ್ಬರು ಮಕ್ಕಳು ಇವರಿಗಿದ್ದಾರೆ. ಸದ್ಯ ಪಿಯೂಷ್ ಮಿಶ್ರಾ ಅವರ ಈ ಮಾತುಗಳ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.


Click it and Unblock the Notifications