Just In
Don't Miss!
- News
ರಸ್ತೆ ಮೇಲೆ ಒಕ್ಕಣೆ ಮಾಡುವ ರೈತರ ಮೇಲೆ ಕ್ರಿಮಿನಲ್ ಕೇಸು!
- Sports
ಆ ಒಂದು ಕರೆ ನನ್ನಲ್ಲಿ ಆತ್ಮ ವಿಶ್ವಾಸ ತುಂಬಿತ್ತು: 5 ವಿಕೆಟ್ ಕಿತ್ತ ಸಿರಾಜ್ ಭಾವುಕ ಪ್ರತಿಕ್ರಿಯೆ
- Finance
ಕಸದ ಗುಂಡಿ ಪಾಲಾದ ರು. 1971 ಕೋಟಿಯ ಬಿಟ್ ಕಾಯಿನ್ ಗೆ ಮತ್ತೆ ಹುಡುಕಾಟ
- Automobiles
ಹೊಸ ಲೊಗೊದೊಂದಿಗೆ ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿವೆ ಕಿಯಾ ಮೋಟಾರ್ಸ್ ಕಾರುಗಳು
- Lifestyle
ಕೋವಿಡ್ 19 ಲಸಿಕೆ: ಕೋವಿಡ್ಶೀಲ್ಡ್, ಕೊವಾಕ್ಸಿನ್ ಅಡ್ಡಪರಿಣಾಮಗಳು
- Education
IRCTC Recruitment 2021: ಗ್ರೂಪ್ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ಲಾಸ್ಟಿಕ್ ಸರ್ಜರಿ ತಂದ ಎಡವಟ್ಟು: ಹೆಂಗಿದ್ದ ನಟಿ ಹೆಂಗಾಗಿದ್ದಾರೆ ನೋಡಿ.!
ತುಟಿ, ಮೂಗು, ಕೆನ್ನೆ, ಎದೆ ಸರಿಪಡಿಸಿಕೊಳ್ಳಲು ತಾರೆಯರು ಆಗಾಗ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವುದು ಕಾಮನ್. ಶ್ರೀದೇವಿಯಿಂದ ಹಿಡಿದು ಸಮಂತಾವರೆಗೂ ಅನೇಕ ನಟಿಯರು ಮುಖ ಮೂತಿಗೆ ಕತ್ತರಿ ಹಾಕಿಸಿಕೊಂಡು ಸದ್ದು ಮಾಡಿದ್ದಾರೆ.
ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ತಮ್ಮ ದೇಹದ ಅಂಗಾಂಗಗಳ ಹೊಳಪು, ಮೈಮಾಟವನ್ನ ಅನೇಕರು ವೃದ್ಧಿಸಿಕೊಂಡಿರಬಹುದು. ಆದ್ರೆ, ಸರ್ಜರಿ ಮಾಡಿಸಿಕೊಂಡ ಬಳಿಕ ಕಸಿವಿಸಿಗೊಂಡವರೂ ಇದ್ದಾರೆ.! ಇದಕ್ಕೆ ಉತ್ತಮ ನಿದರ್ಶನ ಆಯೆಷಾ ಟಾಕಿಯಾ.

ಹಂಗಿದ್ದ ನಟಿ ಹಿಂಗಾಗಿದ್ದಾರೆ!
ಹಿಂದಿಯ 'ಟಾರ್ಜನ್: ದಿ ವಂಡರ್ ಕಾರ್', ತೆಲುಗಿನ 'ಸೂಪರ್' ಚಿತ್ರಗಳನ್ನ ನೋಡಿರುವವರಿಗೆ ಆಯೆಷಾ ಟಾಕಿಯಾ ಪರಿಚಯ ಇದ್ದೇ ಇರುತ್ತೆ. ಅಂದು ಆಯಾಷಾ ಹೇಗಿದ್ದರು ಅಂತ ನೀವೆಲ್ಲ ನೋಡಿದ್ದೀರಾ. ಇಂದು ಆಯೆಷಾ ಹೇಗಾಗಿದ್ದಾರೆ ಅಂತ ನೀವೇ ನೋಡಿ...
[ಚಿತ್ರರಂಗಕ್ಕೆ ಆಯೇಷಾ ಟಕಿಯಾ ವಿದಾಯ?]

ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರಾ ಆಯೆಷಾ.?
ಆಯೆಷಾ ರವರ ತುಟಿಗಳು 'ತೊಂಡೆ ಹಣ್ಣಿ'ನಂತೆ ಉಬ್ಬಿರುವುದನ್ನು ನೋಡಿ, ಆಯೆಷಾ ಕತ್ರಿ ಪ್ರಯೋಗಕ್ಕೆ ಒಳಗಾಗಿರುವ ಬಗ್ಗೆ ಬಿಟೌನ್ ನಲ್ಲಿ ಗುಲ್ಲೆದ್ದಿದೆ.

ಹೊಸ ಲುಕ್ ಬಗ್ಗೆ ಪಾಸಿಟೀವ್ ಕಾಮೆಂಟ್ಸ್ ಇಲ್ಲ
ಆಯೆಷಾ ರವರ ದಪ್ಪ ತುಟಿಗಳು, ಊದಿರುವ ಕೆನ್ನೆ ನೋಡಿ ಸಿನಿರಸಿಕರು ಮೂಗು ಮುರಿದಿದ್ದಾರೆ. ಮೊದಲಿನ ಆಯೆಷಾ ಚೆಂದ ಎಂಬ ಅಭಿಪ್ರಾಯ ಹಲವೆಡೆ ವ್ಯಕ್ತವಾಗಿದೆ

ಮತ್ತೆ ಬಣ್ಣ ಹಚ್ಚಲಿದ್ದಾರೆ ಆಯೆಷಾ
ಎಲ್ಲವೂ ಪ್ಲಾನ್ ಪ್ರಕಾರ ನಡೆದರೆ ಸದ್ಯದಲ್ಲೇ ಆಯೆಷಾ ಮತ್ತೆ ಬಣ್ಣ ಹಚ್ಚಲಿದ್ದಾರೆ. ಆಯೆಷಾ ಎರಡು ಸಿನಿಮಾಗಳನ್ನ ಒಪ್ಪಿಕೊಳ್ಳುವ ಸಾಧ್ಯತೆ ಇದೆ.

ತಾಯಿ ಆದ್ಮೇಲೆ ಮಾಯವಾಗಿದ್ದ ಆಯೆಷಾ
2009ರಲ್ಲಿ ಫರ್ಹಾನ್ ಅಜ್ಮಿ ರವರನ್ನ ಮದುವೆ ಆದ ಆಯೆಷಾಗೆ ಮಿಕೈಲ್ ಅಜ್ಮಿ ಎಂಬ ಪುತ್ರನಿದ್ದಾನೆ. ತಾಯಿ ಆದ ಮೇಲೆ ನಟನೆಯಿಂದ ದೂರ ಉಳಿದಿದ್ದ ಆಯೆಷಾ ಈಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುವ ಸಾಧ್ಯತೆ ಇದೆ.[ಐ ಆಮ್ ಎ ಕೋಂಪ್ಲಾನ್ ಗರ್ಲ್ ಗೆ ಗಂಡು ಮಗು!]