ಬಾಡಿಗೆ ಜೋಪಡಿಯಿಂದ ಬೃಹತ್ ಬಂಗ್ಲೆ: ಖ್ಯಾತ ಗಾಯಕಿಯ ಸ್ಪೂರ್ತಿದಾಯಕ ಜರ್ನಿ

ಬಾಲಿವುಡ್ ನಲ್ಲಿ ಹೆಸರು ಮಾಡಲು ದಿನಕ್ಕೆ ಸಾವಿರಾರು ಮಂದಿ ಮುಂಬೈ ಗೆ ಬರುತ್ತಾರೆ. ಆದರೆ ಬಾಲಿವುಡ್ ನಲ್ಲಿ ಹೆಸರು ಮಾಡುವುದು, ಇಂಡಸ್ಟ್ರೀಯಲ್ಲಿ ಛಾಪು ಮೂಡಿಸುವುದು ಸುಲಭದ ಕೆಲಸವಲ್ಲ. ಅದರಲ್ಲಿಯೂ ಯುವತಿಯರಿಗಂತೂ ಇದು ಬಹು ಕಷ್ಟದ ಪಯಣ.

ಯಾವುದೇ ಹಿನ್ನೆಲೆ ಇಲ್ಲದೆ, ಬಡ ಕುಟುಂಬದ ಬಂದು ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿದವರು ಬೆರಳಿಕೆಯಷ್ಟೆ. ಇದೇ ಸಾಲಿಗೆ ಸೇರಿದವರು ಬಾಲಿವುಡ್‌ನ ಖ್ಯಾತ ಗಾಯಕಿ ನೇಹಾ ಕಕ್ಕರ್.

ಬಾಲಿವುಡ್‌ ನ ಖ್ಯಾತ ಹಿನ್ನೆಲೆ ಗಾಯಕಿ ನೇಹಾ ಕಕ್ಕರ್ ಸಿನಿಮಾ ಹಿನ್ನೆಲೆ ಇಲ್ಲದ ಬಡತನದ ಕುಟುಂಬದಿಂದ ಬಂದು, ಇಂದು ಬಾಲಿವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಅವರ ಬಾಲಿವುಡ್ ಜರ್ನಿ ಕೋಟ್ಯಂತರ ಜನರಿಗೆ ಸ್ಪೂರ್ತಿ.

ಜೀವನದ ಎರಡು ಘಟ್ಟಗಳನ್ನು ತೋರುವ ಚಿತ್ರಗಳು

ಜೀವನದ ಎರಡು ಘಟ್ಟಗಳನ್ನು ತೋರುವ ಚಿತ್ರಗಳು

ನೇಹಾ ಕಕ್ಕರ್ ಅವರು ಇಂದು ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದು, ನೇಹಾ ಕಕ್ಕರ್ ಜೀವನದ ಎರಡು ಕೊನೆಗಳನ್ನು ಈ ಎರಡು ಚಿತ್ರಗಳೂ ಸ್ಪಷ್ಟವಾಗಿ ತೋರಿಸುತ್ತಿದೆ.

ನೇಹಾ ಕಕ್ಕರ್ ಹುಟ್ಟಿ ಬೆಳೆದ ಬಾಡಿಗೆ ಮನೆ

ನೇಹಾ ಕಕ್ಕರ್ ಹುಟ್ಟಿ ಬೆಳೆದ ಬಾಡಿಗೆ ಮನೆ

ನೇಹಾ ಕಕ್ಕರ್ ಹುಟ್ಟಿ ಬೆಳೆದ ಒಂದು ಕೊಠಡಿಯ ಬಾಡಿಗೆ ಮನೆಯ ಚಿತ್ರವನ್ನು ಹಾಗೂ ಇಂದು ನೇಹಾ ಕಕ್ಕರ್ ಮತ್ತು ಕುಟುಂಬ ನೆಲೆಸಿರುವ ಬೃಹತ್ ಬಂಗಲೆಯ ಚಿತ್ರವನ್ನು ನೇಹಾ ಹಂಚಿಕೊಂಡಿದ್ದಾರೆ.

ಎರಡೂ ಚಿತ್ರಗಳ ಕುರಿತು ಭಾವನಾತ್ಮಕ ಸಂದೇಶ

ಎರಡೂ ಚಿತ್ರಗಳ ಕುರಿತು ಭಾವನಾತ್ಮಕ ಸಂದೇಶ

ಎರಡೂ ಚಿತ್ರಗಳ ಕುರಿತು ಭಾವನಾತ್ಮಕ ಸಂದೇಶ ಬರೆದಿರುವ ನೇಹಾ ಕಕ್ಕರ್, 'ನಾನು ಹುಟ್ಟಿ ಬೆಳೆದ ಬಾಡಿಗೆ ಮನೆ ಇದು. ಇದರಲ್ಲಿ ಇದ್ದುದ್ದು ಒಂದೇ ಕೋಣೆ. ಟೇಬಲ್ ಒಂದನ್ನು ಇಟ್ಟು ಅದನ್ನೇ ಅಡಿಗೆ ಮನೆ ಮಾಡಿಕೊಂಡಿದ್ದೆವು'' ಎಂದು ಅಂದಿನ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ನೇಹಾ ಕಕ್ಕರ್ ಗೆ ಇಬ್ಬರು ಸಹೋದರರಿದ್ದಾರೆ

ನೇಹಾ ಕಕ್ಕರ್ ಗೆ ಇಬ್ಬರು ಸಹೋದರರಿದ್ದಾರೆ

ನೇಹಾ ಕಕ್ಕರ್ ಅವರಿಗೆ ಒಬ್ಬ ಸಹೋದರ ಮತ್ತು ಒಬ್ಬ ಸಹೋದರಿ ಇದ್ದಾರೆ. ಅಪ್ಪ ಅಮ್ಮನ ಜೊತೆಗೆ ಅದೇ ಒಂದು ಕೊಠಡಿಯ ಬಾಡಿಗೆ ಮನೆಯಲ್ಲಿ ಐದೂ ಜನ ಹಲವು ವರ್ಷ ತಮ್ಮ ಜೀವನ ಸವೆಸಿದ್ದಾರೆ.

ದೊಡ್ಡ ಬಂಗಲೆಯ ಚಿತ್ರವನ್ನೂ ಹಂಚಿಕೊಂಡಿದ್ದಾರೆ

ದೊಡ್ಡ ಬಂಗಲೆಯ ಚಿತ್ರವನ್ನೂ ಹಂಚಿಕೊಂಡಿದ್ದಾರೆ

ನೇಹಾ ಕಕ್ಕರ್ ಅವರು ಇಂದು ಕುಟುಂಬದ ಜೊತೆಗೆ ದೊಡ್ಡ ಬಂಗಲೆಯ ಚಿತ್ರವನ್ನೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಂದು ಕಾಲದಲ್ಲಿ ಒಂದು ಕೊಠಡಿಯ ಬಾಡಿಗೆ ಮನೆಯಲ್ಲಿದ್ದ ಅದೇ ರಿಶಿಕೇಶ ನಗರದಲ್ಲಿ ಇಂದು ದೊಡ್ಡ ಬಂಗಲೆಯಲ್ಲಿ ವಾಸವಿದ್ದೇನೆ. ಇದಕ್ಕೆಲ್ಲಾ ನನ್ನ ಪೋಷಕರು, ಹಿತೈಷಿಗಳು ಅಭಿಮಾನಿಗಳು ಹಾಗೂ ಆ ದೇವರು ಕಾರಣ ಎಂದು ನೇಹಾ ಕಕ್ಕರ್ ಹೇಳಿದ್ದಾರೆ.

ಇಂಡಿಯನ್ ಐಡಲ್‌ನಲ್ಲಿ ಸ್ಪರ್ಧಿಯಾಗಿದ್ದರು ನೇಹಾ

ಇಂಡಿಯನ್ ಐಡಲ್‌ನಲ್ಲಿ ಸ್ಪರ್ಧಿಯಾಗಿದ್ದರು ನೇಹಾ

ಇಂಡಿಯನ್ ಐಡಲ್‌ ನಲ್ಲಿ ಸ್ಪರ್ಧಿಯಾಗಿ ಹಾಡಲು ಪ್ರಾರಂಭಿಸಿದ್ದ ನೇಹಾ ಕಕ್ಕರ್ ಅವರು ಆರಂಭದ ದಿನಗಳಲ್ಲಿ ಸಣ್ಣ-ಸಣ್ಣ ಶೋಗಳಲ್ಲಿಯೂ ಹಾಡುತ್ತಿದ್ದರು. ನಂತರ ಕೆಲವು ಸಿನಿಮಾಗಳಿಗೆ ಹಿನ್ನೆಲೆ ದನಿ ನೀಡಿದರು. ಕಾಮಿಡಿ ಶೋ ಗಳಲ್ಲಿಯೂ ಅಭಿನಯಿಸಿದ್ದರು. ನಂತರ ಅವರ ಶ್ರಮಕ್ಕೆ ಮನ್ನಣೆ ಸಿಗುತ್ತಾ ಹೋಗಿ ಇಂದು ಬಹುದೊಡ್ಡ ಬಾಲಿವುಡ್ ಹಿನ್ನೆಲೆ ಗಾಯಕಿ ಆಗಿದ್ದಾರೆ. ಐದು ವರ್ಷದ ಹಿಂದೆ ಅವರು ತಾಯಂದಿರ ದಿನಕ್ಕಾಗಿ ಹಾಡಿದ್ದ 'ತು ಕಿತನೀ ಅಚ್ಛೀ ಹೇ' ಹಾಡನ್ನು ಜನ ಇನ್ನೂ ಮರೆತಿಲ್ಲ.

More from Filmibeat

English summary
Bollywood famous play back singer Neha Kakkar's inspirational journey in Bollywood will make fans eyes wet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X