For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಖ್ಯಾತ ಗಾಯಕ ಮೊಹಮ್ಮದ್ ಅಜೀಜ್ ನಿಧನ

  |

  ಬಾಲಿವುಡ್ ನ ಖ್ಯಾತ ಹಿನ್ನೆಲೆ ಗಾಯಕ ಮೊಹಮ್ಮದ್ ಅಜೀಜ್ (64) ಹೃದಯಾಘಾತದಿಂದ ಮಂಗಳವಾರ ಸಂಜೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

  ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಅಜೀಜ್ ಅವರು ಮುಂಬೈಗೆ ಆಗಮಿಸಿದ್ದರು. ಮುಂಬೈ ಏರ್ಪೋರ್ಟ್ ಗೆ ಆಗಮಿಸುತ್ತಿದ್ದಂತೆ ಅವರ ಆರೋಗ್ಯ ಏರುಪೇರಾಯಿತು. ಕ್ಯಾಬ್ ನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಯಾಕೋ ಆರೋಗ್ಯ ಸರಿಯಾಗಿಲ್ಲ ಎಂದು ಡ್ರೈವರ್ ಗೆ ಹೇಳಿದ್ದಾರೆ.

  ನಂತರ ಲೀಲಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆಸ್ಪತ್ರೆ ತಲುಪುದರೊಳಗಾಗಿ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 1954ರಲ್ಲಿ ಕೋಲ್ಕತಾದಲ್ಲಿ ಜನಿಸಿದ್ದ ಅವರ ಅಂತಿಮ ಸಂಸ್ಕಾರವನ್ನು ಮುಂಬೈನಲ್ಲಿಯೇ ಬುಧವಾರ ನೆರವೇರಿಸಲಾಗುತ್ತಿದೆ.

  80, 90ರ ದಶಕದಲ್ಲಿ ಹಲವು ಹಿಟ್ ಗೀತೆಗಳನ್ನ ಹಾಡಿದ್ದ ಅಜೀಜ್, ಇಂಡಸ್ಟ್ರಿಯಲ್ಲಿ ಎರಡನೇ 'ಮೊಹಮ್ಮದ್ ರಫಿ' ಎಂದೇ ಖ್ಯಾತಿಗಳಿಸಿಕೊಂಡಿದ್ದರು. ಹಿಂದಿ, ಬೆಂಗಾಳಿ, ಒಡಿಶಾ ಭಾಷೆಯಲ್ಲು ಹಾಡುಗಳನ್ನ ಹಾಡಿದ್ದಾರೆ.

  ಅಮಿತಾಭ್ ಬಚ್ಚನ್, ಗೋವಿಂದ್, ರಿಷಿ ಕಪೂರ್, ಮಿಥುನ್ ಚಕ್ರವರ್ತಿ ಅಂತಹ ಸ್ಟಾರ್ ನಟರ ಚಿತ್ರಗಳಿಗೆ ತಮ್ಮ ಕಂಠಸಿರಿ ಹರಿಸಿದ್ದಾರೆ. ಲತಾ ಮಂಗೇಶ್ಕರ್, ಆಶಾ ಬೋಸ್ಲೆ, ಕವಿತಾ ಕೃಷ್ಣಮೂರ್ತಿ ಅಂತ ಗಾಯಕಿಯರ ಜೊತೆ ಹಾಡಿದ್ದಾರೆ.

  ಅಮಿತಾಭ್ ಬಚ್ಚನ್ ಅವರ ಹಲವು ಚಿತ್ರಗಳಲ್ಲಿ ಹಾಡಿದ್ದ ಇವರಿಗೆ, ಬಚ್ಚನ್ ಅಭಿನಯದ 'ಮರ್ದ್' ಚಿತ್ರದ ಮೂಲಕ ಮೊದಲ ಬ್ರೇಕ್ ಸಿಕ್ಕಿತ್ತು. ಕನ್ನಡದಲ್ಲಿ ಡಾ ರಾಜ್ ಕುಮಾರ್ ಹಾಗೂ ಪಿಬಿ ಶ್ರೀನಿವಾಸ್ ಮೂರ್ತಿ ಅವರ ಜೋಡಿ ಹೇಗೆ ಜನಪ್ರಿಯವಾಗಿತ್ತೋ ಅದೇ ರೀತಿ ಬಿಟೌನ್ ನಲ್ಲಿ, ಅಮಿತಾಭ್ ಚಿತ್ರಗಳಿಗೆ ಅಜೀಜ್ ಅವರೇ ಹಾಡಬೇಕು ಎನ್ನುವಷ್ಟು ಗುರುತಿಸಿಕೊಂಡಿದ್ದರು.

  ಅಜೀಜ್ ಅವರು ಸುಮಾರು 20 ಸಾವಿರಕ್ಕೂ ಅಧಿಕ ಹಾಡುಗಳನ್ನ ವಿವಿಧ ಭಾಷೆಯಲ್ಲಿ ಹಾಡಿದ್ದಾರೆ. ಭಜನೆ ಗೀತೆಗಳು, ಭಕ್ತಿಗೀತೆಗಳು, ಸಿನಿಮಾ ಹಾಡುಗಳು ಮೂಲಕ ಅಭಿಮಾನವನ್ನ ಗಳಿಸಿದ್ದಾರೆ.

  English summary
  Veteran Bollywood playback singer Mohammad Aziz died in Mumbai at the age of 64 on Tuesday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X