twitter
    For Quick Alerts
    ALLOW NOTIFICATIONS  
    For Daily Alerts

    'ಪಿಎಂ ಮೋದಿ' ಸಿನಿಮಾ ಬಿಡುಗಡೆಗೆ ದೆಹಲಿ ಹೈ ಕೋರ್ಟ್ ಗ್ರೀನ್ ಸಿಗ್ನಲ್

    |

    ಪ್ರಧಾನಿ ನರೇಂದ್ರ ಮೋದಿ ಅವರ ಬಯೋಪಿಕ್ ಸಿನಿಮಾ ಬಿಡುಗಡೆ ಮಾಡಬಾರದೆಂದು ವಕೀಲ ಸುಜೀತ್ ಕುಮಾರ್ ದೆಹಲಿ ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈ ಕೋರ್ಟ್ ಸಿನಿಮಾ ರಿಲೀಸ್ ಮಾಡಲು ಅನುಮತಿ ನೀಡಿದೆ.

    ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

    ಲೋಕಸಭಾ ಚುನಾವಣೆ ಸಮೀಪ ಬರುತ್ತಿರುವುದರಿಂದ ನರೇಂದ್ರ ಮೋದಿ ಬಯೋಪಿಕ್ ರಿಲೀಸ್ ಆಗಬಾರದು, ಇದು ನೀತಿ ಸಂಹಿತೆ ಉಲ್ಲಂಘನೆ ಮಾಡಿದಂತೆ ಚುನಾವಣೆ ಮುಗಿಯುವವರೆಗೂ ಸಿನಿಮಾ ಬಿಡುಗಡೆ ಆಗಬಾರದೆಂದು ವಕೀಲರು ವಿರೋಧ ಮಾಡಿದ್ದರು.

    ಆದ್ರೆ, ಸಿನಿಮಾದಲ್ಲಿ ಮೋದಿ ಬಗ್ಗೆ ಮಾತ್ರ ಇದೆ, ಬಿಜೆಪಿ ಬಗ್ಗೆ ಇಲ್ಲ ಎನ್ನುವ ಕಾರಣಕ್ಕೆ ಕೋರ್ಟ್ ರಿಲೀಸ್ ಗೆ ಅನುಮತಿ ನೀಡಿದೆ. ಈ ಮೂಲಕ 'ಪಿಎಂ ನರೇಂದ್ರ ಮೋದಿ' ಸಿನಿಮಾ ಮೊದಲೇ ನಿರ್ಧರಿಸಿರುವಂತೆ ಇದೇ ತಿಂಗಳು ಏಪ್ರಿಲ್ 5ಕ್ಕೆ ದೇಶದಾದ್ಯಂತ ರಿಲೀಸ್ ಆಗುತ್ತಿದೆ.

    PM Narendra Modi movie gets green signal from Delhi court

    ನಿರ್ದೇಶಕ ಓಮಂಗ್ ಕುಮಾರ್ ಸಾರಥ್ಯದಲ್ಲಿ ಮೂಡಿಬಂದ ಪಿಎಂ ನರೇಂದ್ರ ಮೋದಿ ಜೀವನಾಧಾರಿತ ಕತೆಯಲ್ಲಿ ಮೋದಿ ಪಾತ್ರವನ್ನು ನಟ ವಿವೇಕ್ ಓಬೆರಾಯ್ ನಿಭಾಯಿಸಿದ್ದಾರೆ. ಈಗಾಗಲೆ ಟ್ರೈಲರ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಮೋದಿ ಸಿನಿಮಾ ಹೇಗಿರಲಿದೆ ಎನ್ನುವುದು ಇದೇ ಏಪ್ರಿಲ್ 5ಕ್ಕೆ ಗೊತ್ತಾಗಲಿದೆ.

    English summary
    PM Narendra Modi movie gets green signal from Delhi court. Advocate sujith kumar filed PIL against movie's release.
    Monday, April 1, 2019, 18:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X