twitter
    For Quick Alerts
    ALLOW NOTIFICATIONS  
    For Daily Alerts

    ಮತ್ತೆ ಥಿಯೇಟರ್ ಅಂಗಳಕ್ಕೆ ಮೋದಿ ಬಯೋಪಿಕ್ ಸಿನಿಮಾ

    |

    ಕನ್ನಡ ಚಿತ್ರರಂಗದಲ್ಲಿ ಹಳೆಯ ಚಿತ್ರಗಳ ಮರುಬಿಡುಗಡೆಯ ಪರ್ವ ಆರಂಭವಾಗಿದೆ. ಇದೇ ತಂತ್ರವನ್ನು ಈಗ ಬಾಲಿವುಡ್ ಮಂದಿ ಸಹ ಅನುಕರಣೆ ಮಾಡಲು ಮುಂದಾಗಿದ್ದಾರೆ. ಅಕ್ಟೋಬರ್ 15ರಂದು ಚಿತ್ರಮಂದಿರಗಳು ತೆರೆಯುವ ಹಿನ್ನೆಲೆ ಹಳೆಯ ಚಿತ್ರಗಳನ್ನು ರಿ ರಿಲೀಸ್ ಮಾಡಲು ಬಾಲಿವುಡ್ ನಿರ್ಧರಿಸಿದ್ದಾರೆ.

    ಸದ್ಯದ ಮಾಹಿತಿ ಪ್ರಕಾರ ಲಾಕ್‌ಡೌನ್ ಅವಧಿ ಮುಗಿದ ಬಳಿಕ ಹಿಂದಿಯಲ್ಲಿ ಮೊದಲ ಸಿನಿಮಾ ಬಿಡುಗಡೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಕುರಿತು ಮೂಡಿ ಬಂದಿದ್ದ ''ಪಿಎಂ ನರೇಂದ್ರಮೋದಿ'' ಸಿನಿಮಾ ಅಕ್ಟೋಬರ್ 15 ರಂದು ಮತ್ತೆ ಥಿಯೇಟರ್‌ಗೆ ಬರ್ತಿದೆ.

    ಏಳು ದಿನದಲ್ಲಿ 'ಪಿಎಂ ಮೋದಿ' ಸಿನಿಮಾ ಗಳಿಸಿದ ಹಣವೆಷ್ಟು?ಏಳು ದಿನದಲ್ಲಿ 'ಪಿಎಂ ಮೋದಿ' ಸಿನಿಮಾ ಗಳಿಸಿದ ಹಣವೆಷ್ಟು?

    ಈ ಕುರಿತು ಚಿತ್ರತಂಡ ಅಧಿಕೃತ ಘೋಷಣೆ ಮಾಡಿದ್ದು, ಹೊಸ ಪೋಸ್ಟರ್ ಸಹ ರಿಲೀಸ್ ಮಾಡಿದೆ. ಈ ಸುದ್ದಿಯನ್ನು ಬಿಟೌನ್ ಖ್ಯಾತ ಚಿತ್ರ ವಿಶ್ಲೇಶಕ ತರಣ್ ಆದರ್ಶ್ ಹಂಚಿಕೊಂಡಿದ್ದಾರೆ.

    PM Narendra Modi Movie will re-release on October 15th

    ಇನ್ನುಳಿದಂತೆ ಓಮಂಗ್ ಕುಮಾರ್ ನಿರ್ದೇಶನ ಮಾಡಿದ್ದ ಈ ಚಿತ್ರ ಮೇ 19, 2019ರಲ್ಲಿ ಬಿಡುಗಡೆಯಾಗಿತ್ತು. ಸುಮಾರು 8 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದ ಈ ಚಿತ್ರ 14 ಕೋಟಿ ಗಳಿಸಿತ್ತು.

    ಮೋದಿ ಪಾತ್ರದಲ್ಲಿ ವಿವೇಕ್ ಒಬೆರಾಯ್ ನಟಿಸಿದ್ದರು. ಅಮಿತ್ ಶಾ ಪಾತ್ರದಲ್ಲಿ ಮನೋಜ್ ಜೋಶಿ, ಬೊಮ್ಮನ್ ಹಿರಾನಿ ರತನ್ ಟಾಟಾ, ಅಂಜನ್ ಶ್ರೀವಸ್ತವ್ ಅವರು ವಾಜಪೇಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

    English summary
    PM Narendra Modi starring Vivek Oberoi in title role, will re-release in cinemas next week.
    Monday, October 12, 2020, 10:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X