For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಕೊಲೆಗೆ ಸಂಚು ರೂಪಿಸಿದ್ದ ಶಾರ್ಪ್ ಶೂಟರ್ ಬಂಧನ

  |

  ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದ ಶಾರ್ಪ್ ಶೂಟರ್‌ನನ್ನು ಹರ್ಯಾಣ ಪೊಲೀಸರು ಬಂಧಿಸಿದ್ದಾರೆ.

  ಜನವರಿ ತಿಂಗಳಲ್ಲಿ ಸಲ್ಮಾನ್ ಖಾನ್ ಹತ್ಯೆ ಮಾಡಲು ಸಂಚು ರೂಪಿಸಿದ್ದ, ಅದಕ್ಕಾಗಿ ಮುಂಬೈನ ಬಾಂದ್ರಾದಲ್ಲಿರುವ ಸಲ್ಲು ಮನೆಯ ಸುತ್ತಾಮುತ್ತ ಸುತ್ತಾಡಿ ಚಲನವಲನ ಗಮಿಸಿದ್ದ ಎಂದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ.

  ಸಲ್ಮಾನ್ ಖಾನ್ ಚಿತ್ರಗಳಿಗೆ ರೆಹಮಾನ್ ಏಕೆ ಸಂಗೀತ ನೀಡುವುದಿಲ್ಲ?: ಕಾರಣ ಬಹಿರಂಗ

  ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಈ ಶಾರ್ಪ್ ಶೂಟರ್‌ನ್ನು ಸಲ್ಲು ಹತ್ಯೆಗೆ ಕಳುಸಿದ್ದ ಎಂದು ತಿಳಿದು ಬಂದಿದೆ. ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ಸೇಡಿಗೆ ಬಿದ್ದಿದ್ದ ಲಾರೆನ್ಸ್ ಬಿಷ್ಣೋಯಿ, ಸಲ್ಮಾನ್ ಖಾನ್ ಕೊಲ್ಲಲು ಶೂಟರ್‌ನನ್ನು ನೇಮಕ ಮಾಡಿದ್ದ.

  ಲಾಕ್‌ಡೌನ್ ಜಾರಿಯಾದ ಕಾರಣ ಶಾರ್ಪ್ ಶೂಟರ್ ಪ್ಲಾನ್ ವಿಫಲವಾಯಿತು ಎಂದು ಪೊಲೀಸ್ ವಿಚಾರಣೆ ವೇಳೆ ಭಯಾನಕ ಸುದ್ದಿ ಹೊರಬಿದ್ದಿದೆ. ಈ ವಿಷಯ ತಿಳಿದ ಬಳಿಕ ಸಲ್ಮಾನ್ ಖಾನ್ ಮನೆಗೆ ಮುಂಬೈ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ

  ಫರಿದಾಬಾದ್‌ನ ಜೋಡಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ರಾಹುಲ್‌ನನ್ನು ಆಗಸ್ಟ್ 15 ರಂದು ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸದಂತೆ ವಿಚಾರಣೆ ಮಾಡುವ ವೇಳೆ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದನ್ನು ಬಾಯ್ಬಿಟ್ಟಿದ್ದಾನೆ.

  ಅಂದ್ಹಾಗೆ, ಸಲ್ಮಾನ್ ಖಾನ್ ಹತ್ಯೆ ಸಂಚು ರೂಪಿಸಿರುವ ಘಟನೆ ಇದೇ ಮೊದಲಲ್ಲ. ಇದಕ್ಕೂ ಮುಂಚೆ ಹಲವು ಬಾರಿ ಸಲ್ಲು ಕೊಲೆಗೆ ಯತ್ನ ಮಾಡಲಾಗಿದೆ. 2018ರಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಸದಸ್ಯನಾಗಿದ್ದ ಸಂಪತ್ ನೆಹ್ರಾ ಸಹ ಸಲ್ಮಾನ್ ಖಾನ್ ಮನೆಯ ಸುತ್ತ ಓಡಾಡಿ ವಿಡಿಯೋ ಚಿತ್ರಕರಿಸಿದ್ದ. ಸಲ್ಮಾನ್ ಖಾನ್‌ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನ್ನು ಸಹ ಸ್ಮರಿಸಬಹುದು.

  English summary
  A sharpshooter of the Lawrence Bishnoi gang was planning to assassinate superstar Salman Khan, the haryana police confirmed Tuesday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X