For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗ ತೊರೆದ ಅಸಲಿ ಕಾರಣ ಬಿಚ್ಚಿಟ್ಟ ನಟಿ ಪೂಜಾ ಬೇಡಿ

  |

  90ರ ದಶಕದ ಬಾಲಿವುಡ್ ನ ಖ್ಯಾತ ನಟಿಯಾಗಿ ಮೆರೆದಿದ್ದ ಪೂಜಾ ಬೇಡಿ ಉತ್ತುಂಗದಲ್ಲಿರುವಾಗಲೇ ಬಣ್ಣದ ಲೋಕದಿಂದ ದೂರ ಸರಿದಿದ್ದರು. ಪೂಜಾ ಚಿತ್ರರಂಗದಲ್ಲಿ ಕೆಲವೇ ಕೆಲವು ವರ್ಷಗಳು ಮಾತ್ರ ಸಕ್ರೀಯರಾಗಿದ್ದರೂ ಸಹ ಬಹು ಬೇಡಿಕೆಯ ನಟಿಯಾಗಿ ಖ್ಯಾತಿಗಳಿಸಿದ್ದರು. ಪೂಜಾ ಬೇಡಿ ನಟಿಸಿದ ಸಿನಿಮಾಗಳ ಸಂಖ್ಯೆ ಕಡಿಮೆ ಆದರೂ ಕಡಿಮೆ ಅವಧಿಯಲ್ಲೇ ಪ್ರಸಿದ್ಧಿ ಪಡೆದುಕೊಂಡಿದ್ದರು.

  ಉತ್ತುಂಗದಲ್ಲಿ ಇರುವಾಗಲೇ ಪೂಜಾ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಬಣ್ಣದ ಲೋಕದಿಂದ ದೂರ ಸರಿದರು. ಪೂಜಾ ದಿಢೀರ್ ಮಾಯವಾಗಿದ್ದು ಅವರ ಅಭಿಮಾನಿಗಳಿಗೂ ಅಚ್ಚರಿ ಮೂಡಿಸಿತ್ತು. 1994ರಲ್ಲಿ ಪೂಜಾ ಬೇಡಿ, ಫರ್ಹಾನ್ ಇಬ್ರಾಹಿಂ ಅವರನ್ನು ಮದುವೆಯಾದರೂ. ಆದರೆ ಮದುವೆ ಬಳಿಕ ಪೂಜಾ ಮತ್ತೆ ಬಣ್ಣದ ಲೋಕದಲ್ಲಿ ಕಾಣಿಸಿಕೊಂಡಿಲ್ಲ. ಚಿತ್ರರಂಗದಿಂದ ದಿಢೀರ್ ಕಣ್ಮರೆಯಾದ ಬಗ್ಗೆ ನಟಿ ಪೂಜಾ ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ...

  ಮಾಜಿ ಪತಿ ಮನೆಯವರ ಕಾರಣ ಸಿನಿಮಾ ತೊರೆದೆ- ಪೂಜಾ

  ಮಾಜಿ ಪತಿ ಮನೆಯವರ ಕಾರಣ ಸಿನಿಮಾ ತೊರೆದೆ- ಪೂಜಾ

  ಸದ್ಯ ಪತಿಯಿಂದ ದೂರ ಆಗಿರುವ ಪೂಜಾ, ಮಾಜಿ ಪತಿ ಫರ್ಹಾನ್ ಮನೆಯವರ ಕಾರಣ ಸಿನಿಮಾರಂಗದಿಂದ ದೂರ ಸರಿದಿರುವುದಾಗ ಹೇಳಿದ್ದಾರೆ. ಫರ್ಹಾನ್ ಮನೆಯ ಸಂಪ್ರದಾಯದಿಂದ ಬಣ್ಣದ ಲೋಕದಿಂದ ದೂರ ಸರಿಯಬೇಕಾಯಿತು ಎಂದಿದ್ದಾರೆ. ಮದುವೆಯಾದರೆ ಸಿನಿಮಾದಲ್ಲಿ ನಟಿಸುವ ಹಾಗಿಲ್ಲ ಎಂದು ಪತಿ ಹಾಕಿದ ಷರತ್ತಿನ ಮೇರೆಗೆ ಗೃಹಿಣಿಯಾದೆ ಎಂದು ಪೂಜಾ ಹೇಳಿದ್ದಾರೆ.

  ಬೆತ್ತಲೆ ತಿರುಗುವುದು ತಪ್ಪು ಎನ್ನುವುದಾದರೆ ನಾಗಾ ಸಾಧುಗಳನ್ನು ಬಂಧಿಸಿ: ಪೂಜಾ ಬೇಡಿಬೆತ್ತಲೆ ತಿರುಗುವುದು ತಪ್ಪು ಎನ್ನುವುದಾದರೆ ನಾಗಾ ಸಾಧುಗಳನ್ನು ಬಂಧಿಸಿ: ಪೂಜಾ ಬೇಡಿ

  ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲ ಎಂದರು- ಪೂಜಾ

  ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲ ಎಂದರು- ಪೂಜಾ

  'ಚಿತ್ರರಂಗದಲ್ಲಿ ನಾನು ತುಂಬಾ ಖುಷಿ ಪಟ್ಟಿದ್ದೆ. ಬಳಿಕ ಮದುವೆಯಾದೆ. ನನ್ನ ಮಾಜಿ ಪತಿ ಮದುವೆಯಾದರೆ ಸಿನಿಮಾದಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಏಕೆಂದರೆ ಅವರ ಕುಟುಂಬದವರು ತುಂಬಾ ಸಂಪ್ರದಾಯವಾದಿಯಾಗಿದ್ದರು' ಎಂದಿದ್ದಾರೆ.

  ಏನೇ ಕೆಲಸ ಮಾಡಿದರೂ 100 ಪರ್ಸೆಂಟ್ ಹಾಕಬೇಕು

  ಏನೇ ಕೆಲಸ ಮಾಡಿದರೂ 100 ಪರ್ಸೆಂಟ್ ಹಾಕಬೇಕು

  'ನನ್ನ ತಾಯಿ ಕೂಡ ನನಗೆ ಯಾವಾಗಲು ಹೇಳುತ್ತಿದ್ದರು. ನೀನು ಏನೇ ಕೆಲಸ ಮಾಡಿದರೂ 100 ಪರ್ಸೆಂಟ್ ಕೊಡಬೇಕು ಅಂತ, ಹಾಗಾಗಿ ನಾನು ಗೃಹಿಣಿ ಮತ್ತು ಹೆಂಡತಿಯಾಗಲು ನಿರ್ಧರಿಸಿದೆ. ನನ್ನ ಪಯಣ ಬಿಟ್ಟು ಹೊಸ ಪಯಣ ಪ್ರಾರಂಭಿಸಿದೆ' ಎಂದಿದ್ದಾರೆ.

  ಅತ್ಯುತ್ತಮ ಹೆಂಡತಿಯಾಗಿದ್ದೇನೆ

  ಅತ್ಯುತ್ತಮ ಹೆಂಡತಿಯಾಗಿದ್ದೇನೆ

  'ಚಿಕ್ಕವರಿದ್ದಾಗ ಭಿನ್ನವಾಗಿ ಯೋಚಿಸುತ್ತೀರಿ ಸರಿ. ಇಂದು ನಾನು ವಿಭಿನ್ನ ರೀತಿಯ ಆಯ್ಕೆ ಮಾಡುತ್ತೇನೆ. ಆ ಸಮಯದಲ್ಲಿ ನಾನು ಸರಿಯಾದ ಆಯ್ಕೆ ಮಾಡಿದ್ದೇನೆ ಎನ್ನುವ ಖುಷಿ ಇದೆ. ನಾನು ಪವಿತ್ರ ಮದುವೆಗಾಗಿ ಎಲ್ಲವನ್ನೂ ಬಿಟ್ಟುಕೊಟ್ಟೆ ಮತ್ತು ಅತ್ಯುತ್ತಮ ಹೆಂಡತಿಯಾಗಿದ್ದೇನೆ' ಎಂದಿದ್ದಾರೆ.

  2003ರಲ್ಲಿ ಪತಿಯಿಂದ ದೂರ ಆದ ಪೂಜಾ

  2003ರಲ್ಲಿ ಪತಿಯಿಂದ ದೂರ ಆದ ಪೂಜಾ

  1994ರಲ್ಲಿ ಫರ್ಹಾನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಪೂಜಾ ಬೇಡಿ 2003ರಲ್ಲಿ ಪತಿಯಿಂದ ದೂರ ಆದರು. ಪೂಜಾ ಮತ್ತು ಫರ್ಹಾನ್ ದಂಪತಿಗೆ ಅಲಿಯಾ ಮಗಳಿದ್ದಾರೆ. ವಿಚ್ಛೇದನದ ಬಳಿಕ ಪೂಜಾ ಕಿರುತೆರೆಯಲ್ಲಿ ಬ್ಯುಸಿಯಾದರು. ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡಿದ್ದರು. ಡಾನ್ಸ್ ಶೋ ಸೇರಿದಂತೆ ಅನೇಕ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

  Sonu Sood ಈಗ ಕೆಲವರ ಪಾಲಿನ ದೇವರು | Filmibeat Kannada
  ಪೂಜಾ-ಫರ್ಹಾನ್ ಮಗಳು ಚಿತ್ರರಂಗಕ್ಕೆ ಎಂಟ್ರಿ

  ಪೂಜಾ-ಫರ್ಹಾನ್ ಮಗಳು ಚಿತ್ರರಂಗಕ್ಕೆ ಎಂಟ್ರಿ

  ಮಗಳು ಅಲಯಾ ಕಳೆದ ವರ್ಷ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಚಿತ್ರದಲ್ಲೇ ಅತ್ಯುತ್ತಮ ನಟಿ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಗೆದ್ದು ಬೀಗಿದ್ದರು. ಇನ್ನು ಪೂಜಾ ಬೇಡಿ ಅನೇಕ ವರ್ಷಗಳ ಬಳಿಕ ಕಾಮಿಡಿ ಕಪಲ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

  English summary
  Actress Pooja Bedi quit film for Ex Husband father's conservative, She says gave up everything for holy matrimony.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X