For Quick Alerts
  ALLOW NOTIFICATIONS  
  For Daily Alerts

  50 ಜನರ ನಡುವೆ ಸೆಕ್ಸ್ ಸೀನ್ ಮಾಡುವುದು ಹೇಗೆ?: ಮುಜುಗರದ ದೃಶ್ಯ ನೆನಪಿಸಿಕೊಂಡ ಪೂಜಾ ಬೇಡಿ

  |

  ಬಾಲಿವುಡ್‌ನ ಸೀರಿಯಲ್ ಕಿಸ್ಸರ್ ಯಾರು ಎಂದರೆ ಥಟ್ಟನೆ ಬರುವ ಹೆಸರು ಇಮ್ರಾನ್ ಹಶ್ಮಿ ಅವರದು. ಆದರೆ ಅವರಿಗಿಂತಲೂ ಮೊದಲೇ 90ರ ದಶಕದಲ್ಲಿ ಕಿಸ್ಸರ್ ಬಾಯ್ ಆಗಿದ್ದವರು, ಬಾಲಿವುಡ್‌ನ ಈಗಿನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್. ಆ ಸಮಯದಲ್ಲಿ 'ಖಯಾಮತ್ ಸೆ ಖಯಾಮತ್ ತಕ್', 'ದಿಲ್', 'ಜೋ ಜೀತಾ ವಹಿ ಸಿಕಂದರ್', 'ಇಷ್ಕ್' ಮುಂತಾದ ರೊಮ್ಯಾಂಟಿಂಕ್ ಸಿನಿಮಾಗಳಿಂದ ಅವರನ್ನು ಚಾಕೋಲೇಟ್ ಬಾಯ್ ಎಂದೇ ಗುರುತಿಸಲಾಗಿತ್ತು.

  ನಮಗೂ ಕೂಡ ಭಯವಾಗಿದೆ ಎಂದ ಸಲ್ಮಾನ್ ಖಾನ್ | Salman Khan | Filmibeat Kannada

  ತಮ್ಮ ಪಾದಾರ್ಪಣೆಯ 'ಖಯಾಮತ್ ಸೆ ಖಯಾಮತ್ ತಕ್' ಸಿನಿಮಾದಿಂದ ಇತ್ತೀಚಿನ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದವರೆಗೂ ಅಮೀರ್ ಖಾನ್ ಬಹುತೇಕ ಸಿನಿಮಾಗಳಲ್ಲಿ ಕಿಸ್ಸಿಂಗ್ ಸೀನ್ ಹೊಂದಿದ್ದರು. ಅದರಲ್ಲಿಯೂ ಕರಿಷ್ಮಾ ಕಪೂರ್ ಜತೆಗೆ 'ರಾಜಾ ಹಿಂದೂಸ್ತಾನಿ' ಚಿತ್ರದಲ್ಲಿದ್ದ ಚುಂಬನ ದೃಶ್ಯ ಈಗಲೂ ಜನಪ್ರಿಯತೆ ಉಳಿಸಿಕೊಂಡಿದೆ. ಆ ದೃಶ್ಯದ ಬಗ್ಗೆ ಕರಿಷ್ಮಾ ಇತ್ತೀಚೆಗೆ ಮಾತನಾಡಿದ್ದರು. ಆದರೆ ಅದಕ್ಕಿಂತಲೂ ಅಮೀರ್‌ಗೆ ಹೆಚ್ಚು ಕಷ್ಟಕೊಟ್ಟ ಮುತ್ತಿನ ದೃಶ್ಯ ಯಾವುದು ಗೊತ್ತೇ? ಮುಂದೆ ಓದಿ...

  ಅಬ್ಬಾ ಆ ಕಿಸ್ಸಿಂಗ್ ಸೀನ್ ಸಾಕಾಗೋಗಿತ್ತು: ಅಮೀರ್ ಖಾನ್‌ ಚುಂಬನದ ದೃಶ್ಯ ನೆನೆದು ನಡುಗಿದ ಕರಿಷ್ಮಾಅಬ್ಬಾ ಆ ಕಿಸ್ಸಿಂಗ್ ಸೀನ್ ಸಾಕಾಗೋಗಿತ್ತು: ಅಮೀರ್ ಖಾನ್‌ ಚುಂಬನದ ದೃಶ್ಯ ನೆನೆದು ನಡುಗಿದ ಕರಿಷ್ಮಾ

  ಅಮೀರ್-ಪೂಜಾ ಚುಂಬನ ದೃಶ್ಯ

  ಅಮೀರ್-ಪೂಜಾ ಚುಂಬನ ದೃಶ್ಯ

  1992ರಲ್ಲಿ ಬಿಡುಗಡೆಯಾದ 'ಜೋ ಜೀತಾ ವೊಹಿ ಸಿಕಂದರ್' ಚಿತ್ರ ಅಮೀರ್ ಖಾನ್ ಅವರ ಸಾರ್ವಕಾಲಿಕ ಹಿಟ್ ಸಿನಿಮಾಗಳಲ್ಲಿ ಒಂದು. 'ಪೆಹ್ಲಾ ನಶಾ'ದಂತಹ ಹಾಡು ಈಗಲೂ ಜನರ ಬಾಯಲ್ಲಿ ನಲಿದಾಡುತ್ತಿದೆ. ಈ ಸಿನಿಮಾ ಹಾಡು ಹಾಗೂ ಕಥೆಯ ಕಾರಣಕ್ಕೆ ಮಾತ್ರವಲ್ಲದೆ, ಕಿಸ್ಸಿಂಗ್ ದೃಶ್ಯದಿಂದಲೂ ಜನಪ್ರಿಯ. ಅಮೀರ್‌ಗೆ ನಾಯಕಿಯಾಗಿ ನಟಿಸಿದ್ದ ಪೂಜಾ ಬೇಡಿ ತಮ್ಮ ಹಾಟ್‌ನೆಸ್‌ ಮತ್ತು ಕಿಲ್ಲರ್ ಲುಕ್‌ನಿಂದ ಪಡ್ಡೆ ಹುಡುಗರ ಹೃದಯದಲ್ಲಿ ಕಿಚ್ಚು ಹೊತ್ತಿಸಿದ್ದರು. ಈ ಸಿನಿಮಾದ ಚುಂಬನ ಸನ್ನಿವೇಶವಂತೂ ಪ್ರೇಕ್ಷಕರ ಹೃದಯದ ಬಡಿತ ಹೆಚ್ಚಿಸುವಂತೆ ಮಾಡಿತ್ತು.

  ಆತಂಕ್ ಹಿ ಆತಂಕ್ ಚಿತ್ರ

  ಆತಂಕ್ ಹಿ ಆತಂಕ್ ಚಿತ್ರ

  'ಜೋ ಜೀತಾ ವಹಿ ಸಿಕಂದರ್' ಅಲ್ಲದೆ 1995ರಲ್ಲಿ 'ಆತಂಕ್ ಹಿ ಆತಂಕ್' ಚಿತ್ರದಲ್ಲಿಯೂ ಪೂಜಾ ಬೇಡಿ ಜತೆ ಕಿಸ್ಸಿಂಗ್ ದೃಶ್ಯದಲ್ಲಿ ಅಭಿನಯಿಸುವ ಅವಕಾಶ ಅಮೀರ್‌ಗೆ ಸಿಕ್ಕಿತ್ತು. ರಜನಿಕಾಂತ್, ಜೂಹಿ ಚಾವ್ಲಾ ಮತ್ತು ಅರ್ಚನಾ ಜೋಗ್ಲೇಕರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಸಿನಿಮಾ ಇದು.

  ಕರಿಷ್ಮಾ ಕಪೂರ್ 'ಸ್ಟಾರ್' ಆಗಿದ್ದು ನನ್ನಿಂದಾಗಿ ಎಂದ ಜೂಹಿ ಚಾವ್ಲಾಕರಿಷ್ಮಾ ಕಪೂರ್ 'ಸ್ಟಾರ್' ಆಗಿದ್ದು ನನ್ನಿಂದಾಗಿ ಎಂದ ಜೂಹಿ ಚಾವ್ಲಾ

  50 ಜನರು ಸುತ್ತಲೂ ಇರುವಾಗ...

  50 ಜನರು ಸುತ್ತಲೂ ಇರುವಾಗ...

  'ಆತಂಕ್...' ಚಿತ್ರದಲ್ಲಿ ಮಳೆಯಲ್ಲಿ ನೆನೆಯುವಾಗ ಚುಂಬಿಸುವ ದೃಶ್ಯದಲ್ಲಿ ನಟಿಸಬೇಕಿತ್ತು. ಹಸಿಬಿಸಿ ದೃಶ್ಯದಲ್ಲಿ ನಟಿಸುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಮುಖ್ಯವಾಗಿ ನಿಮ್ಮ ಸುತ್ತಲೂ 50 ಜನರು ಇರುವಾಗ ಸೆಕ್ಸ್ ಸೀನ್ ಒಂದರಲ್ಲಿ ಭಾಗವಹಿಸುವುದು ನಿಜಕ್ಕೂ ಮುಜುಗರದ ಸಂಗತಿ' ಎಂದು ಪೂಜಾ ಬೇಡಿ ಹೇಳಿಕೊಂಡಿದ್ದಾರೆ.

  ಅರ್ಧ ಗಂಟೆ ಸುಮ್ಮನೆ ಕುಳಿತಿದ್ದೆವು

  ಅರ್ಧ ಗಂಟೆ ಸುಮ್ಮನೆ ಕುಳಿತಿದ್ದೆವು

  'ಶೂಟಿಂಗ್ ಮುಗಿದ ಬಳಿಕ ನಾನು ಮತ್ತು ಅಮೀರ್ ಖಾನ್ ಕೊಠಡಿಯೊಂದರಲ್ಲಿ ಸುಮಾರು 30 ನಿಮಿಷ ಒಂದೂ ಮಾತನಾಡದೆ ಸುಮ್ಮನೆ ಕುಳಿತಿದ್ದೆವು. ನಮ್ಮಿಬ್ಬರಿಗೂ ಆ ದೃಶ್ಯ ಬಹಳ ಕಿರಿಕಿರಿಯುಂಟುಮಾಡಿತ್ತು. ಕೊನೆಗೆ ಅಮೀರ್ ಖಾನ್ ಮೌನ ಮುರಿದು ಚೆಸ್ ಆಡಲು ಬಯಸಿದ್ದೀರಾ ಎಂದು ಕೇಳಿದರು. ಹೌದು ಎಂದೆ' ಎಂದು ಪೂಜಾ ತಿಳಿಸಿದ್ದಾರೆ.

  ಸಿನಿಮಾದಲ್ಲಿ ದೃಶ್ಯಕ್ಕೆ ಕತ್ತರಿ

  ಸಿನಿಮಾದಲ್ಲಿ ದೃಶ್ಯಕ್ಕೆ ಕತ್ತರಿ

  ಈ ದೃಶ್ಯದ ಚಿತ್ರೀಕರಣದ ವೇಳೆ ರೀಟೇಕ್‌ಗೆ ಹೇಳಿದಾಗ ಇಬ್ಬರೂ ಅದಕ್ಕೆ ಒಪ್ಪಿಕೊಳ್ಳಲಿಲ್ಲವಂತೆ. ಕೊನೆಗೆ ಸಿನಿಮಾದಿಂದಲೇ ಆ ದೃಶ್ಯವನ್ನು ತೆಗೆದು ಹಾಕಲಾಗಿತ್ತು. ಇಬ್ಬರೂ ಒಲ್ಲದ ಮನಸಿನಿಂದಲೇ, ಬಹಳ ಮುಜುಗರದಿಂದ ಚುಂಬನ ದೃಶ್ಯದಲ್ಲಿ ಪಾಲ್ಗೊಂಡಿದ್ದರು. ಆದರೆ ಪ್ರೇಕ್ಷಕರಿಗೆ ಅದನ್ನು ಕಾಣುವ ಭಾಗ್ಯ ಸಿಗಲಿಲ್ಲ.

  ರಾಜಾ ಹಿಂದೂಸ್ತಾನಿಯ ದೃಶ್ಯ

  ರಾಜಾ ಹಿಂದೂಸ್ತಾನಿಯ ದೃಶ್ಯ

  ನಟಿ ಕರಿಷ್ಮಾ ಕಪೂರ್ ಇತ್ತೀಚೆಗೆ 'ರಾಜಾ ಹಿಂದೂಸ್ತಾನಿ' ಚಿತ್ರದ ಚುಂಬನ ದೃಶ್ಯವನ್ನು ನೆನಪಿಸಿಕೊಂಡಿದ್ದರು. ಊಟಿಯಲ್ಲಿನ ನಡುಗುವ ಚಳಿಯಲ್ಲಿ ಮಳೆಯಲ್ಲಿ ನೆನೆದು ಜೋರಾಗಿ ತಿರುಗುವ ಫ್ಯಾನ್‌ನ ಮುಂದೆ ಚಿತ್ರೀಕರಿಸಬೇಕಾಗಿದ್ದ ದೃಶ್ಯ ಈಗಲೂ ನಡುಕ ಹುಟ್ಟಿಸುತ್ತದೆ ಎಂದು ಕರಿಷ್ಮಾ ಹೇಳಿದ್ದರು.

  English summary
  Bollywood actress Pooje Bedi has recalled an awkward moment of kissing scene with Aamir Khan in Aatank Hi Aatank movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X