ಫರಾಜ್ ಖಾನ್ ಸಾವಿಗೆ ಸಂತಾಪ ಸೂಚಿಸಿದ ಪೂಜಾ ಭಟ್
ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಿವುಡ್ ಫರಾಜ್ ಖಾನ್ ಇಂದು ಸಾವನ್ನಪ್ಪಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಫರಾಜ್ ಖಾನ್ ತಿಂಗಳಿಗೂ ಹೆಚ್ಚಿನ ಸಮಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿಗಾಗಿ ಹೋರಾಟ ನಡೆಸುತ್ತಿದ್ದರು.
ಫರಾಜ್ ಖಾನ್ ನಿಧನಕ್ಕೆ ಬಾಲಿವುಡ್ ನಟಿ, ನಿರ್ದೇಶಕಿ ಪೂಜಾ ಭಟ್ ಸಂತಾಪ ಸೂಚಿಸಿದ್ದಾರೆ. ''ಫರಾಜ್ ಖಾನ್ ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂಬ ಸುದ್ದಿಯನ್ನು ತುಂಬಾ ಭಾರವಾರ ಹೃದಯದಿಂದ ಹೇಳುತ್ತಿದ್ದೇನೆ, ನನಗೆ ನಂಬಿಕೆ ಇದೆ, ಅವರಿಗೆ ಒಳ್ಳೆಯ ಸ್ಥಾನ ಸಿಕ್ಕಿದೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
''ಅವರಿಗೆ ಅತಿ ಅಗತ್ಯ ಸಮಯದಲ್ಲಿ ನೀವು ಮಾಡಿದ ಸಹಾಯಕ್ಕಾಗಿ ನಾನು ಕೃತಜ್ಞತೆ ಹೊಂದಿದ್ದೇನೆ. ಅವರು ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ'' ಎಂದು ಮನವಿ ಮಾಡಿದ್ದಾರೆ.

ಅಂದ್ಹಾಗೆ, ಫರಾಜ್ ಖಾನ್ ಅವರಿಗೆ ಆಸ್ಪತ್ರೆಯೆ ಚಿಕಿತ್ಸೆ ವೆಚ್ಚ ಭರಿಸುವ ಸಾಧ್ಯವಾಗದ ಸಮಯದಲ್ಲಿ, ಅವರ ಪರವಾಗಿ ಪೂಜಾ ಭಟ್ ಸಹ ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದರು. ನಂತರ ಸಲ್ಮಾನ್ ಖಾನ್ ಸಹಾಯ ಮಾಡಿದರು ಎಂದು ಪೂಜಾ ಭಟ್ ಅವರೇ ಮಾಹಿತಿ ನೀಡಿದ್ದರು.
ಹೀಗೆ, ಫರಾಜ್ ಖಾನ್ ಆಸ್ಪತ್ರೆಗೆ ದಾಖಲಾದ ಸಂದರ್ಭದಿಂದಲೂ ಅವರ ಕುರಿತು ಮಾಹಿತಿಯನ್ನು ಪೂಜಾ ಭಟ್ ಅವರೇ ನೀಡುತ್ತಿದ್ದರು. ದುರಾದೃಷ್ಟವಶಾತ್ ಅಂದ್ರೆ, ಫರಾಜ್ ಖಾನ್ ಇನ್ನಿಲ್ಲ ಎಂಬ ವಾರ್ತೆಯನ್ನು ಸಹ ಅವರೇ ನೀಡಬೇಕಾಯಿತು.


Click it and Unblock the Notifications











