Pooja Bhatt: ತಂದೆ ಜೊತೆ ಮಗಳ ಲಿಪ್‌ಲಾಕ್.. ದಶಕಗಳ ಬಳಿಕ ಸ್ಪಷ್ಟನೆ ನೀಡಿದ ನಟಿ

ದಶಕಗಳ ಹಿಂದೆ ಬಾಲಿವುಡ್‌ನಲ್ಲಿ ನಡೆದ ಒಂದು ಫೋಟೊಶೂಟ್ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಇದ್ಯಾವ ಸಂಸ್ಕೃತಿ ಎಂದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. 33 ವರ್ಷಗಳ ಹಿಂದೆ ತಮ್ಮ ತಂದೆ, ನಿರ್ದೇಶಕ ಮಹೇಶ್ ಭಟ್ ಜೊತೆ ಕಿಸ್ ಮಾಡಿದ್ದ ಫೋಟೊ ಬಗ್ಗೆ ಕೊನೆಗೂ ಪೂಜಾ ಭಟ್ ಮೌನ ಮುರಿದಿದ್ದಾರೆ.

90ರ ದಶಕದಲ್ಲಿ ಫೋಟೊಶೂಟ್‌ನಲ್ಲಿ ಕ್ಲಿಕ್ಕಿಸಿದ್ದ ಈ ಫೋಟೊ ಸ್ಟಾರ್‌ಡಸ್ಟ್ ಮ್ಯಾಗಜೀನ್‌ ಕವರ್‌ ಪೇಜ್‌ನಲ್ಲಿ ಪ್ರಕಟವಾಗಿತ್ತು. ತಂದೆ- ಮಗಳು ಹೀಗೆ ಯಾವತ್ತೂ ಕಿಸ್ ಮಾಡಲ್ಲ, ಇದು ಅಸಹಜ ಎಂದು ಕೆಲವರು ವಾದಿಸಿದ್ದರು. ಆ ಕಾಲಕ್ಕೆ ಇದು ಭಾರೀ ಟೀಕೆಗೆ ಗುರಿಯಾಗಿತ್ತು.

Pooja Bhatt finally opens up about her infamous kiss picture with dad Mahesh Bhatt

ತಂದೆಯ ತೊಡೆ ಮೇಲೆ ಕೂತು ಪೂಜಾ ಲಿಪ್‌ ಕಿಸ್ ಮಾಡುತ್ತಿರುವ ಫೋಟೊ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಬಳಿಕ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದ ಮಹೇಶ್ ಭಟ್ "ಪೂಜಾ ಒಂದು ವೇಳೆ ನನ್ನ ಮಗಳಾಗದೇ ಇದ್ದಿದ್ದರೆ, ನಾನು ಆಕೆಯನ್ನು ಮದುವೆ ಆಗುತ್ತಿದ್ದೆ" ಎಂದು ಹೇಳಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದರು.

ಅಂದಹಾಗೆ ಪೂಜಾ ಭಟ್, ನಿರ್ದೇಶಕ ಮಹೇಶ್ ಭಟ್ ಅವರ ಮೊದಲ ಪತ್ನಿ ಕಿರಣ್ ಭಟ್ ಮಗಳು. 1989ರಲ್ಲಿ ಮಹೇಶ್ ಭಟ್ ನಿರ್ದೇಶನದ 'ಡ್ಯಾಡಿ' ಸಿನಿಮಾ ಮೂಲಕ ಪೂಜಾ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಆಗ ಆಕೆಯ ವಯಸ್ಸು ಕೇವಲ 17 ವರ್ಷ. ಆ ಚಿತ್ರದಲ್ಲೂ ತಂದೆ ಮಗಳ ಸಂಬಂಧದ ಕುರಿತ ಕತೆ ಇದ್ದಿದ್ದು ವಿಚಿತ್ರ. ದಶಕಗಳ ಬಳಿಕ ಆ ಫೋಟೊ ಬಗ್ಗೆ ಪೂಜಾ ಭಟ್ ಮಾತನಾಡಿದ್ದು "ನನಗೆ ಆ ಫೋಟೊಶೂಟ್‌ನಲ್ಲಿ ಭಾಗಿ ಆಗಿದ್ದಕ್ಕೆ ಯಾವುದೇ ವಿಷಾದವಿಲ್ಲ. ಆ ಸಮಯದಲ್ಲಿ ನಮ್ಮ ಉದ್ದೇಶ ಒಳ್ಳೆಯದೇ ಆಗಿತ್ತು, ನೋಡುವವರು ಕೆಟ್ಟದಾಗಿ ಅರ್ಥ ಮಾಡಿಕೊಂಡಿದ್ದರು" ಎಂದಿದ್ದಾರೆ.

"ದುರಾದೃಷ್ಟವಶಾತ್ ಆ ಫೋಟೊಗಳನ್ನು ನೋಡಿ ಕೆಲವರು ಬೇರೇನೋ ಅರ್ಥ ಮಾಡಿಕೊಂಡಿದ್ದರು. ಆ ಫೋಟೊಗಳ ಬಗ್ಗೆ ಟೀಕೆ ವ್ಯಕ್ತವಾದಾಗ ನಟ ಶಾರುಖ್ ಖಾನ್ ಹೇಳಿದ ಮಾತುಗಳು ನೆನಪಾಗುತ್ತಿದೆ. ಮಕ್ಕಳು ಚಿಕ್ಕಂದಿನಲ್ಲಿ ತಂದೆ, ತಾಯಿಯನ್ನು ಮುತ್ತು ಕೇಳುತ್ತಾರೆ. ಜನ ತಮಗೆ ತೋಚಿದ್ದು ಹೇಳುತ್ತಾರೆ. ಪರವಾಗಿಲ್ಲ, ಮಕ್ಕಳು ಎಷ್ಟೇ ಬೆಳದರೂ ಪೋಷಕರು ಅವರನ್ನು ಚಿಕ್ಕವರಾಗಿಯೇ ಕಾಣುತ್ತಾರೆ ಎಂದು ಹೇಳಿದ್ದರು. ನಿಜ ಹೇಳಬೇಕು ಅಂದ್ರೆ ಈ ವಯಸ್ಸಲ್ಲೂ ನಮ್ಮ ತಂದೆ ನನ್ನನ್ನು ಚಿಕ್ಕ ಮಗುವಿನ ರೀತಿ ನೋಡುತ್ತಾರೆ" ಎಂದಿದ್ದಾರೆ.

"ಈ ಫೋಟೊಶೂಟ್‌ ನಡೆದ ಸಮಯದಲ್ಲಿ ನನಗೆ ಈ ಸಮಾಜ ಬಗ್ಗೆ ಹೆಚ್ಚೇನು ಗೊತ್ತಿರಲಿಲ್ಲ ಎಂದಿದ್ದಾರೆ. ಯಾವುದೇ ಘಟನೆ ನಡೆದರೂ ಜನ ತಮಗೆ ಅನ್ನಿಸಿದ ರೀತಿ ಮಾತನಾಡುತ್ತಾರೆ. ಅದು ಸಹಜವೇ ಬಿಡಿ. ತಂದೆ-ಮಗಳು ಬಾಂಧವ್ಯವನ್ನು ಅವರು ಬೇರೆ ರೀತಿ ನೋಡಿದರೆ ಯಾರೇ ಆದರೂ ಏನು ಮಾಡಲು ಸಾಧ್ಯ" ಎಂದಿದ್ದಾರೆ. ಸಿದ್ದಾರ್ಥ್ ಕನ್ನನ್ ಸಂದರ್ಶನದಲ್ಲಿ ಈ ವಿಚಾರವನ್ನು ಪೂಜಾ ಭಟ್ ಹಂಚಿಕೊಂಡಿದ್ದಾರೆ.

2003ರಲ್ಲಿ ಮುಂಬೈ ಮೂಲದ ಉದ್ಯಮಿ ಮನೀಷ್ ಮಖೀಜಾ ಕೈ ಹಿಡಿದಿದ್ದ ನಟಿ ಪೂಜಾ ಭಟ್ 2014ರಲ್ಲಿ ವಿಚ್ಛೇದನ ಪಡೆದಿದ್ದರು. ಇತ್ತೀಚಿನ ವರ್ಷಗಳಲ್ಲಿ ವಯೋಸಹಜ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೇ ವರ್ಷ ನಡೆದ ಬಿಗ್‌ಬಾಸ್ ಹಿಂದಿ ಓಟಿಟಿ ಸೀಸನ್-2ರಲ್ಲಿ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು. ಫಿನಾಲೆವರೆಗೂ ಮನೆಯಲ್ಲಿದ್ದ ಪೂಜಾ 4ನೇ ರನ್ನರ್ ಅಪ್ ಎನಿಸಿಕೊಂಡಿದ್ದರು. 59 ದಿನಗಳ ಕಾಲ ಬಿಗ್‌ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು.

ಸಡಕ್, ಜನೂನ್, ದಿಲ್ ಹೈ ಕಿ ಮಾನ್ತ ನಹಿನ್, ಪ್ರೇಮ್ ದಿವಾನೆ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಪೂಜಾ ಬಣ್ಣ ಹಚ್ಚಿದ್ದಾರೆ. ಕಳೆದ ವರ್ಷ ಬಂದ 'ಚುಪ್' ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಇನ್ನು ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿಯೂ ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದಾರೆ.

More from Filmibeat

English summary
Actress Pooja Bhatt recalls Viral lip Kiss Photoshoot With father Mahesh Bhatt
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X