ಬಾಲಿವುಡ್ ನಟ ಫರಾಜ್ ಖಾನ್ ಆರೋಗ್ಯದಲ್ಲಿ ಚೇತರಿಕೆ

ಬಾಲಿವುಡ್ ನಟ ಫರಾಜ್ ಖಾನ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ನಟಿ-ನಿರ್ದೇಶಕಿ ಪೂಜಾ ಭಟ್ ಮಾಹಿತಿ ನೀಡಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಫರಾಜ್ ಖಾನ್, ಕಳೆದ ಹತ್ತು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯುನಲ್ಲಿ ದಾಖಲಾಗಿರುವ ನಟ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದರು. ಈಗ, ಅವರ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡು ಬಂದಿದೆ ಎಂದು ಮಾಹಿತಿ ಲಭ್ಯವಾಗಿದೆ.

ಫರಾಜ್ ಖಾನ್ ಅವರ ಚಿಕಿತ್ಸಾ ವೆಚ್ಚ ಭರಿಸಲು ಕುಟುಂಬಕ್ಕೆ ಕಷ್ಟವಾಗಿದ್ದ ಕಾರಣ, ನಿಧಿ ಸಂಗ್ರಹಕ್ಕೆ ಮುಂದಾಗಿತ್ತು. ಸುಮಾರು 25 ಲಕ್ಷ ಹಣ ಬೇಕಿತ್ತು ಎಂದು ಫರಾಜ್ ಖಾನ್ ಸಹೋದರ ವೆಬ್‌ಸೈಟ್‌ವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದರು.

Pooja Bhatt Said that Faraaz Khan Health is showing improvement

ಫರಾಜ್ ಖಾನ್ ಅನಾರೋಗ್ಯ ವಿಚಾರ ತಿಳಿದ ಸಲ್ಮಾನ್ ಖಾನ್, ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿದ್ದರು ಎಂದು ಪೂಜಾ ಭಟ್ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದರು. ಸಲ್ಮಾನ್ ಖಾನ್ ನೆರವಿನ ನಡುವೆಯೂ ನಿಧಿ ಸಂಗ್ರಹ ಮಾಡುತ್ತಿರುವುದಾಗಿ ತಿಳಿಸಿದ್ದರು.

ಈ ಬಗ್ಗೆ ಅಕ್ಟೋಬರ್ 22 ರಂದು ಟ್ವೀಟ್ ಮಾಡಿರುವ ಪೂಜಾ ಭಟ್ ''ಫರಾಜ್ ಖಾನ್ ಆರೋಗ್ಯದ ದೃಷ್ಟಿಯಿಂದ ನೀವೆಲ್ಲರು ತೋರಿದ ಪ್ರೀತಿ ಮತ್ತು ಮಾಡಿದ ಸಹಾಯಕ್ಕೆ ಕೃತಜ್ಞತೆಗಳು. 25,00,000 ರೂಪಾಯಿ ಬೇಕಿತ್ತು. ಅದರಲ್ಲಿ 14,45,747 ಸಂಗ್ರಹವಾಗಿದೆ'' ಎಂದು ಮಾಹಿತಿ ನೀಡಿದ್ದಾರೆ.

Pooja Bhatt Said that Faraaz Khan Health is showing improvement

ಫರಾಜ್ ಖಾನ್ ಕುರಿತು

Recommended Video

ಮಗು ಹುಟ್ಟಿದ ಕೂಡಲೇ ಮೇಘನಾ ಆಸೆ ಈಡೇರಿಸಿದ್ದು ಈ ವೈದ್ಯರು | Filmibeat Kannada

ನಟ ಯೂಸೂಫ್ ಖಾನ್ ಅವರ ಪುತ್ರ ಫರಾಜ್ ಖಾನ್ 1989ರಲ್ಲಿ 'ಮೈನೇ ಪ್ಯಾರ್ ಕಿಯಾ' ಚಿತ್ರಕ್ಕೆ ನಾಯಕರಾಗಿ ಆಯ್ಕೆಯಾಗಿದ್ದರು. ಚಿತ್ರೀಕರಣ ಸಹ ಆರಂಭವಾಗಿತ್ತು. ನಂತರ ಆ ಜಾಗಕ್ಕೆ ಸಲ್ಮಾನ್ ಖಾನ್ ಬಂದರು. 1996ರಲ್ಲಿ 'ಫರೀಬ್' ಚಿತ್ರದಲ್ಲಿ ನಟಿಸಿದರು. ರಾಣಿ ಮುಖರ್ಜಿ ಜೊತೆ 'ಮೆಹಂದಿ' ಸಿನಿಮಾ ಮಾಡಿದರು.

More from Filmibeat

English summary
Actress and Director Pooja Bhatt said that Faraaz Khan Health is showing improvement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X