16 ರ ವಯಸ್ಸಿಂದ ಮದ್ಯ ವ್ಯಸನಿಯಾಗಿದ್ದ ನಟಿ ಕುಡಿತ ಬಿಟ್ಟ ಕತೆ ಹಂಚಿಕೊಂಡಿದ್ದಾರೆ

ಮಹೇಶ್ ಭಟ್ ಪುತ್ರಿ, ಆಲಿಯಾ ಭಟ್ ಅಕ್ಕ ಪೂಜಾ ಭಟ್ 90 ರ ದಶಕದಲ್ಲಿ ಸಾಕಷ್ಟು ಖ್ಯಾತಿಯಲ್ಲಿದ್ದ ನಟಿ.

ಈಗ ಹೆಚ್ಚು ಸಿನಿಮಾಗಳಲ್ಲಿ ನಟಿಸದ ಪೂಜಾ ಭಟ್, ತಮ್ಮ ಕುಡಿತದ ಚಟದ ಬಗ್ಗೆ ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣದ ಮೂಲಕ ಕುಡಿತದ ವಿರುದ್ಧ ಸಂದೇಶಗಳನ್ನು ಸಹ ನೀಡುತ್ತಿರುತ್ತಾರೆ.

ಶ್ರೀಮಂತ ಕುಟುಂಬದ ನಟಿ ಪೂಜಾ ಭಟ್ ತನ್ನ 16 ನೇ ವಯಸ್ಸಿನಲ್ಲಿಯೇ ಕುಡಿತ ಆರಂಭಿಸಿದ್ದರಂತೆ. ಬರು-ಬರುತ್ತಾ ಕುಡಿತ ಎಂಬುದು ಅವರ ಜೀವನದ ಭಾಗವಾಗಿಯೇ ಹೋಗಿತ್ತು. ಮದ್ಯ ಸೇವಿಸದೆ ಜೀವಿಸುವುದೇ ಕಷ್ಟ ಎಂಬ ಸ್ಥಿತಿಗೆ ತಲುಪಿದ್ದರಂತೆ ನಟಿ ಪೂಜಾ ಭಟ್.

29 ವರ್ಷ ಕುಡಿತದ ದಾಸಿಯಾಗಿದ್ದ ಪೂಜಾ

29 ವರ್ಷ ಕುಡಿತದ ದಾಸಿಯಾಗಿದ್ದ ಪೂಜಾ

1988 ರಲ್ಲಿ ಮದ್ಯ ಸೇವನೆ ಪ್ರಾರಂಭಿಸಿದ ನಟಿ ಪೂಜಾ ಹೆಗ್ಡೆ, ಮದ್ಯ ಸೇವನೆ ಬಿಟ್ಟಿದ್ದು, ಐದು ವರ್ಷದ ಹಿಂದೆ 2017 ರಲ್ಲಿ. ಅಂದರೆ ಬರೋಬ್ಬರಿ 29 ಕುಡಿತದ ದಾಸಿಯಾಗಿದ್ದರು ನಟಿ ಪೂಜಾ ಭಟ್. ಆಂಗ್ಲೋ ಇಂಡಿಯನ್ ಕುಟುಂಬದ ಪೂಜಾ ಭಟ್ ವೈನ್ ನಿಂದ ಕುಡಿತ ಪ್ರಾರಂಭಿಸಿ, ನಂತರ ಪ್ರತಿದಿನವೂ ಕುಡಿತ ಇಲ್ಲದೆ ಇರಲಾಗದ ಸ್ಥಿತಿಗೆ ತಲುಪಿದ್ದರಂತೆ.

ಮಹೇಶ್ ಭಟ್ ಒಂದು ಮಾತಿನಿಂದ ಕುಡಿತ ಬಿಟ್ಟ ಪೂಜಾ

ಮಹೇಶ್ ಭಟ್ ಒಂದು ಮಾತಿನಿಂದ ಕುಡಿತ ಬಿಟ್ಟ ಪೂಜಾ

ಆದರೆ ಒಮ್ಮೆ ತಮ್ಮ ತಂದೆ ಮಹೇಶ್ ಭಟ್ ಜೊತೆ, ಮೊಬೈಲ್ ನಲ್ಲಿ ಚಾಟ್‌ ಮಾಡುತ್ತಿರಬೇಕಾದರೆ, 'ನೀನು ನನ್ನನ್ನು ಪ್ರೀತಿಸುವುದಾದರೆ, ನಿನ್ನನ್ನೂ ನೀನು ಪ್ರೀತಿಸಬೇಕು ಏಕೆಂದರೆ ನೀನು-ನಾನು ಒಂದೇ' ಎಂದರಂತೆ. ಇದು ಪೂಜಾ ಭಟ್ ಮನಸ್ಸಿನ ಮೇಲೆ ಭಾರಿ ಪರಿಣಾಮ ಬೀರಿದೆ.

ವೈದ್ಯರ, ಮಾನಸಿಕ ತಜ್ಞರ ಸಹಕಾರ ಪಡೆದ ನಟಿ

ವೈದ್ಯರ, ಮಾನಸಿಕ ತಜ್ಞರ ಸಹಕಾರ ಪಡೆದ ನಟಿ

ಕೂಡಲೇ ವೈದ್ಯರ, ಮಾನಸಿಕ ತಜ್ಞರ ಸಲಹೆ ಪಡೆದು ಕುಡಿತ ಬಿಟ್ಟರಂತೆ ಪೂಜಾ ಭಟ್. ಇದೀಗ ಪೂಜಾ ಭಟ್ ಕುಡಿತ ಬಿಟ್ಟು ಐದು ವರ್ಷವಾಯಿತು. ಆದರೂ ಆಗೊಮ್ಮೆ-ಈಗೊಮ್ಮೆ ಕುಡಿಯಬೇಕು ಎನಿಸುತ್ತದಂತೆ. ಆಗೆಲ್ಲಾ ಮನೆಯ ಮುಂದಿನ ಗಾರ್ಡನ್‌ನಲ್ಲಿ ಓಡಾಡುತ್ತಾ ಜೋರಾಗಿ ಉಸಿರಾಡುತ್ತಾರಂತೆ, ಆಗ ಆ ಆಸೆ ಕಮರಿಹೋಗುತ್ತದೆಯಂತೆ.

Recommended Video

ಬಾಕ್ಸರ್ ಮುಂದೆ ಘರ್ಜಿಸಲಿದ್ದಾರೆ ಉಪೇಂದ್ರ | Filmibeat Kannada
ಬಾಲಿವುಡ್‌ನ ಹಲವು ಮಂದಿ ಮದ್ಯ ವ್ಯಸನಿಗಳಾಗಿದ್ದಾರೆ

ಬಾಲಿವುಡ್‌ನ ಹಲವು ಮಂದಿ ಮದ್ಯ ವ್ಯಸನಿಗಳಾಗಿದ್ದಾರೆ

ಪೂಜಾ ಭಟ್ ಈ ಹಿಂದೆ ಹೇಳಿದ್ದಂತೆ, ಆಕೆಯ ತಂದೆ ಮಹೇಶ್ ಭಟ್ ಸಹ ವಿಪರೀತ ಮದ್ಯ ವ್ಯಸನಿಯಂತೆ. ತಂದೆ ಮದ್ಯ ವ್ಯಸನಿಯಾಗಿದ್ದಾಗ ಆ ಹವ್ಯಾಸ ಮಕ್ಕಳಿಗೆ ಬರುವುದು ವಿಶೇಷವಲ್ಲ ಎಂದಿದ್ದರು. ನಟಿ ಆಲಿಯಾ ಭಟ್ ಗೆ ಕುಡಿತದ ಅಭ್ಯಾಸವಿದೆ ಎನ್ನಲಾಗುತ್ತದೆ. ಬಾಲಿವುಡ್‌ನ ಹಲವು ಮಂದಿ ಮದ್ಯ ವ್ಯಸನಿಗಳಾಗಿದ್ದಾರೆ. ನಟ ರಣಬೀರ್ ಕಪೂರ್, ತಮ್ಮ ಮದ್ಯ ವ್ಯಸನದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು.

More from Filmibeat

English summary
Actress and producer Pooja Bhatt Told Story That How She Overcome Alcoholism. She is alcoholic for 29 years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X