ಸಲ್ಮಾನ್ ಜೊತೆ ನಟಿಸಲು ಭಾರೀ ಮೊತ್ತದ ಸಂಭಾವನೆಗೆ ಬೇಡಿಕೆ ಇಟ್ಟ ನಟಿ ಪೂಜಾ

ತೆಲುಗು ಮತ್ತು ಬಾಲಿವುಡ್ ಎರಡೂ ಚಿತ್ರರಂಗದಲ್ಲೂ ಭಾರೀ ಬ್ಯುಸಿ ಇರುವ ನಟಿ ಪೂಜಾ ಹೆಗ್ಡೆ ಈಗ ಏಕ್ದಂ ಸಂಭಾವನೆ ಏರಿಸಿಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಅಂದ್ಹಾಗೆ ಚಿತ್ರರಂಗದಲ್ಲಿ ಒಂದು ಸಿನಿಮಾ ಹಿಟ್ ಆಗುತ್ತಿದ್ದಂತೆ ನಟಿಮಣಿಯರು ಸಂಭಾವನೆ ಏರಿಸಿಕೊಳ್ಳುವುದು ಸಹಜ.

ಆದರೆ ಪೂಜಾ ಇತ್ತೀಚಿಗಷ್ಟೆ ಸಂಭಾವನೆ ಏರಿಸಿಕೊಂಡು ಸುದ್ದಿಯಾಗಿದ್ದರು. ಅಲಾ ವೈಕುಂಠಪುರಮಂಲೋ ಸಿನಿಮಾದ ನಂತರ ಪೂಜಾ ಹೆಚ್ಚು ಸಂಭಾವನೆ ಬೇಡಿಕೆ ಇಡುತ್ತಿದ್ದಾರೆ ಎನ್ನುವ ಮಾತುಗಳು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು. ಮತ್ತೆ ಸಂಭಾವನೆ ಏರಿಕೆ ವಿಚಾರವಾಗಿ ಚರ್ಚೆಯಲ್ಲಿದ್ದಾರೆ. ಸಲ್ಮಾನ್ ಖಾನ್ ಸಿನಿಮಾಗಾಗಿ ಪೂಜಾ ದುಪ್ಪಟ್ಟು ಸಂಭಾವನೆ ಹೆಚ್ಚಿಸಿಕೊಂಡಿದ್ದಾರಂತೆ. ಮುಂದೆ ಓದಿ..

ಅಲಾ ವೈಕುಂಠಪುರಮುಲೋ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು?

ಅಲಾ ವೈಕುಂಠಪುರಮುಲೋ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು?

ಕನ್ನಡತಿ ಪೂಜಾ ಹೆಗಡೆ ಖ್ಯಾತಿಗಳಿಸಿದ್ದು ತೆಲುಗು ಚಿತ್ರರಂಗದಲ್ಲಿ. ಸದ್ಯ ತೆಲುಗು ಚಿತ್ರರಂಗದ ಸ್ಟಾರ್ ನಟರ ಜೊತೆ ತೆರೆಹಂಚಿಕೊಳ್ಳುತ್ತಿರುವ ಪೂಜಾ ಬಾಲಿವುಡ್ ನಲ್ಲಿಯೂ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ರಿಲೀಸ್ ಆದ ಅಲ್ಲು ಅರ್ಜುನ್ ಅಭಿನಯದ ತೆಲುಗಿನ ಅಲ ವೈಕುಂಠಪುರಮುಲೋ ಸಿನಿಮಾಗೆ ಪೂಜಾ 2 ಕೋಟಿ ಸಂಭಾವನೆ ಪಡೆದಿದ್ದರಂತೆ.

ಹೌಸ್ ಫುಲ್-4 ಚಿತ್ರಕ್ಕೆ 1.5 ಕೋಟಿ ಸಂಭಾವನೆ

ಹೌಸ್ ಫುಲ್-4 ಚಿತ್ರಕ್ಕೆ 1.5 ಕೋಟಿ ಸಂಭಾವನೆ

ಕೊನೆಯದಾಗಿ ಪೂಜಾ ಬಾಲಿವುಡ್ ನಲ್ಲಿ ಹೌಸ್ ಫುಲ್-4 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಹೌಸ್ ಫುಲ್ ಸಿನಿಮಾ ಕೂಡ ದೊಡ್ಡ ಮಟ್ಟಿಗೆ ಸಕ್ಸಸ್ ತಂದು ಕೊಟ್ಟಿತ್ತು. ಈ ಚಿತ್ರಕ್ಕೆ ಪೂಜಾ 1.5 ಸಂಭಾವನೆ ಪಡೆದಿದ್ದಂತೆ. ಚಿತ್ರಕ್ಕೆ ಸಾಜಿದ್ ನಾದಿಯವಾಲ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿತ್ತು.

ಸಲ್ಮಾನ್ ಖಾನ್ ಸಿನಿಮಾಗೆ ಭಾರಿ ಸಂಭಾವನೆ ಬೇಡಿಕೆ

ಸಲ್ಮಾನ್ ಖಾನ್ ಸಿನಿಮಾಗೆ ಭಾರಿ ಸಂಭಾವನೆ ಬೇಡಿಕೆ

ಪೂಜಾ ಹೆಗ್ಡೆ ಬಾಲಿವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ ಕಬಿ ಈದ್ ಕಬಿ ದೀಪಾವಳಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಮೊದಲ ಬಾರಿಗೆ ಸಲ್ಲು ಜೊತೆ ಕಾಣಿಸಿಕೊಳ್ಳುತ್ತಿರುವ ಪೂಜಾ ದುಪ್ಪಟ್ಟು ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಈ ಚಿತ್ರಕ್ಕಾಗಿ ಪೂಜಾ ಬರೋಬ್ಬರಿ 4 ಕೋಟಿ ಸಂಭಾವನೆ ಪಡೆದಿದ್ದಾರಂತೆ. ವಿಶೇಷ ಅಂದರೆ ಹೌಸ್ ಫುಲ್-4 ಸಿನಿಮಾ ನಿರ್ಮಾಣ ಮಾಡಿದ್ದ ಸಾಜಿದ್ ನಾದಿಯವಾಲ ಈ ಸಿನಿಮಾಗೂ ಬಂಡವಾಳ ಹೂಡುತ್ತಿದ್ದಾರೆ.

ತೆಲುಗಿನಲ್ಲಿ 2.5 ಸಂಭಾವನೆ ಪಡೆಯುತ್ತಿದ್ದಾರೆ

ತೆಲುಗಿನಲ್ಲಿ 2.5 ಸಂಭಾವನೆ ಪಡೆಯುತ್ತಿದ್ದಾರೆ

ಅಲ್ಲು ಅರ್ಜುನ್ ಅಭಿನಯದ ಅಲ ವೈಕುಂಠಪುರಮುಲೋ ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ಪೂಜಾ ತೆಲುಗಿನಲ್ಲಿ 2 ಕೋಟಿಯಿಂದ 2.5 ಕೋಟಿಗೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪೂಜಾ ಅಭಿನಯದ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಹಿಟ್ ಆಗುತ್ತಿವೆ. ತೆಲುಗು ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುತ್ತಿರುವ ಪೂಜಾ ಸದ್ಯ ಪ್ರಭಾಸ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Actress Pooja Hegde hike her remuneration for salman khan's Kabhi Eid Kabhi Diwali.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X