ಗ್ರೀನ್-ಪಿಂಕ್ ಲಂಗ ದಾವಣಿ ತೊಟ್ಟು ನವಿಲಂತೆ ನಲಿದ ನಟಿ ಪೂಜಾ ಹೆಗ್ಡೆ: ಬೆಲೆ ಕೇಳಿದರೇ ಸುಸ್ತಾಗುವುದು ಗ್ಯಾರಂಟಿ!

ಫ್ಯಾಷನ್ ಇಂಡಸ್ಟ್ರಿ ಮತ್ತು ಚಿತ್ರರಂಗಕ್ಕೆ ಅವಿನಾಭಾವ ಸಂಬಂಧ. ನಟ ನಟಿಯರು ಏನೇ ತೊಟ್ಟರು ಸುದ್ದಿಯಾಗುವುದು ಖಂಡಿತ. ಅವರ ಡ್ರೆಸ್, ಅದರ ಕಲರ್ ಕಾಂಬಿನೇಷನ್, ಆ ಬಟ್ಟೆಯ ಬೆಲೆ ಹೀಗೆ ಎಲ್ಲವೂ ಚರ್ಚೆಯಾಗುತ್ತದೆ. ಅದೇ ಬಟ್ಟೆಯನ್ನು ಕಾಪಿ ಮಾಡುವವರು ಇದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ನಟಿ ಪೂಜಾ ಹೆಗ್ಡೆಯ ಲಂಗ ದಾವಣಿ ಲುಕ್ ವೈರಲ್ ಆಗುತ್ತಿದೆ.

ಬಾಲಿವುಡ್, ಟಾಲಿವುಟ್‌ನಲ್ಲಿ ಸಕತ್ ಬ್ಯುಸಿ ಇರುವ ನಟಿ ಪೂಜಾ ಹೆಗ್ಡೆ ತಮ್ಮ ಫ್ಯಾಷನ್ ಸೆನ್ಸ್‌ನಿಂದ ಸಕತ್ ವೈರಲ್ ಆಗುತ್ತಿರುತ್ತಾರೆ. ಮಾಡ್ರನ್ ಡ್ರೆಸ್, ಸಾಂಪ್ರದಾಯಿಕ ಡ್ರೆಸ್, ಮಿನಿ ಸ್ಕರ್ಟ್ ಯಾವುದೇ ಇರಲಿ. ಎಲ್ಲಾ ಬಟ್ಟೆಯಲ್ಲಿ ತುಂಬಾ ಅಂದವಾಗಿ ಕಾಣಿಸುತ್ತಾರೆ. ಈಗ ಅವರು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿರುವ ಫೋಟೋಗಳಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

Pooja Hegde Looks Stunning in Peacock Green and Pink Half Silk Saree: It costs Rs 1.39 Lakh

ಲಂಗ - ದಾವಣಿಯಲ್ಲಿ ನಟಿ ಪೂಜಾ ಹೆಗ್ಡೆ

ಪೂಜಾ ಹೆಗ್ಡೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಆಕ್ಟಿವ್ ಆಗಿರಿತ್ತಾರೆ. ಗ್ಲಾಮರಸ್ ಫೋಟೋಗಳ ಜೊತೆಗೆ ಸಾಂಪ್ರದಾಯಿಕ ಡ್ರೆಸ್‌ನಲ್ಲಿ ಹಲವು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಗ್ರೀನ್ ಮತ್ತು ಪಿಂಕ್ ಲಂಗ - ದಾವಣಿ ಧರಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮದುವೆ ಸೀಸನ್‌ನಲ್ಲಿ ಅವರ ಈ ಲುಕ್ ಸಕತ್ ವೈರಲ್ ಆಗುತ್ತಿದೆ. ದುಬಾರಿ ಬೆಲೆಯ ಡ್ರೆಸ್ ಲುಕ್‌ನಲ್ಲಿ ಪೂಜಾ ಹೆಗ್ಡೆ ಸಕತ್ ರಾಯಲ್ ಆಗಿ ಕಾಣಿಸುತ್ತಿದ್ದಾರೆ. ಗ್ರೀನ್ ಬ್ಲೌಸ್ ಮತ್ತು ದಾವಣೆ, ಪಿಂಕ್ ಲೆಹಂಗಾ ಧರಿಸಿದ್ದಾರೆ. ವಿ ನೆಕ್ ಬ್ಲೌಸ್, ಪಿಂಕ್ ಲೆಹಂಗಾಗೆ ಹಸಿರು ಅಂಚು ಇದ್ದು ಸಕತ್ ಲುಕ್ ನೀಡುತ್ತಿದೆ. ಇನ್ನು ದಾವಣಿ ಕೂಡ ಗ್ರೀನ್ ಕಲರ್ ಆಗಿದ್ದು ಬಟ್ಟೆಗೆ ಗ್ರಾಂಡ್ ಲುಕ್ ನೀಡಿದೆ.

Pooja Hegde Looks Stunning in Peacock Green and Pink Half Silk Saree: It costs Rs 1.39 Lakh

ಬರೋಬ್ಬರಿ 1.39 ಲಕ್ಷ ಬೆಲೆಯ ಲಂಗ-ದಾವಣಿ

ನಟಿ ಪೂಜಾ ಹೆಗ್ಡೆ ಧರಿಸಿದ ಈ ಡ್ರೆಸ್ ಅನ್ನು ಹಲವರು ಶಾಪಿಂಗ್ ಸೈಟ್‌ಗಳಲ್ಲಿ ಹುಡುಕುತ್ತಿದ್ದಾರೆ. ಅವರಿಗಾಗಿ ಈ ಮಾಹಿತಿ. ಇದು ದುಬಾರಿ ದರದ ಉಡುಗೆ. ಪೂಜಾ ಹೆಗ್ಡೆ ಧರಿಸಿರುವ ಈ ಔಟ್‌ಫಿಟ್ ಅನ್ನು "ರಾ ಮ್ಯಾಂಗೊ" ಬ್ರಾಂಡ್‌ ತಯಾರಿಸಿದೆ. ಇದರ ಬೆಲೆ 1.39 ಲಕ್ಷ ರೂಪಾಯಿ ಇದೆ.

ಸೆಲೆಬ್ರಿಟಿ ಫ್ಯಾಶನ್ ಸ್ಟೈಲಿಸ್ಟ್ ತಾನ್ಯಾ ಘರ್ವಿ ಅವರು ಡ್ರೆಸ್ ಡಿಸೈನ್ ಮಾಡಿದ್ದಾರೆ. ಈ ಡ್ರೆಸ್‌ ಜೊತೆಗೆ ಚಿನ್ನದ ಡೈಮಂಡ್ ಚೋಕರ್ ನೆಕ್ಲೇಸ್, ಸ್ಟೇಟ್ಮೆಂಟ್ ಕಿವಿಯೋಲೆಗಳು ಮತ್ತು ಕುಂದನ್ ಬಳೆಗಳ ಜೊತೆ ಮ್ಯಾಚಿಂಗ್ ಮಾಡಿದ್ದಾರೆ ನಟಿ ಪೂಜಾ ಹೆಗ್ಡೆ. ಪಿಂಕ್ ಐಶ್ಯಾಡೋ, ಲೈಟ್ ಐಲೈನರ್, ಮಸ್ಕರಾ, ಸೂಕ್ಷ್ಮವಾದ ಹೈಲೈಟರ್, ಕಾಂತಿಯುತ ಮೈಬಣ್ಣ ಮತ್ತು ನ್ಯೂಡ್ ಲಿಪ್‌ಸ್ಟಿಕ್ ಜೊತೆಗೆ ತಮ್ಮ ಮೇಕ್ಅಪ್ ಪೂರ್ತಿ ಮಾಡಿದ್ದಾರೆ.

ಕೆಲಸ ವಿಷಯಕ್ಕೆ ಬಂದರೆ ಪೂಜಾ ಹೆಗ್ಡೆ ಬಾಲಿವುಡ್ ನಟ ಶಾಹಿದ್ ಕಪೂರ್ ಅವರೊಂದಿಗೆ ಮುಂದಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ರೋಶನ್ ಆಂಡ್ರ್ಯೂಸ್ ನಿರ್ದೇಶನದ ಮುಂಬರುವ ಹಿಂದಿ ಆಕ್ಷನ್ ಥ್ರಿಲ್ಲರ್ "ದೇವ" ಚಿತ್ರದಲ್ಲಿ ಪರದೆಯನ್ನು ಹಂಚಿಕೊಳ್ಳಲಿದ್ದಾರೆ. ಅವರ ಹಳೆಯ ಸಿನಿಮಾಗಳು ಸಾಲು ಸಾಲು ಸೋಲುಗಳನ್ನು ಕಂಡ ಕಾರಣ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

More from Filmibeat

English summary
Actress Pooja Hegde looks stunning in half saree.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X