ನಟ ಸಲ್ಮಾನ್ ಖಾನ್ ಜೊತೆ ಕರಾವಳಿ ಸುಂದರಿಯ ರೋಮ್ಯಾನ್ಸ್, ಯಾರದು?

Recommended Video

ಸ್ಟಾರ್ ನಟರ ಪಾಲಿಗೆ ಲಕ್ಕಿ ನಾಯಕಿ ಪೂಜಾ| Pooja Hegde | Salman Khan | KABHI EID KABHI DIWALI

ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಸದ್ಯ 'ರಾಧೆ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ರಾಧೆ ಸಿನಿಮಾದ ಸಾಕಷ್ಟು ಚಿತ್ರೀಕರಣ ಮುಗಿಸಿರುವ ಸಲ್ಮಾನ್ ಆಗಲೆ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ. ಹೌದು, 'ಕಭಿ ಈದ್ ಕಭಿ ದಿವಾಲಿ' ಸಿನಿಮಾದಲ್ಲಿಯೂ ಸಲ್ಮಾನ್ ನಿರತರಾಗಿದ್ದಾರೆ.

ಟೈಟಲ್ ಮೂಲಕವೆ ಅಭಿಮಾನಿಗಳ ಗಮನ ಸೆಳೆಯುತ್ತಿರುವ ಈ ಸಿನಿಮಾಗೆ ಈಗ ನಾಯಕಿ ಫಿಕ್ಸ್ ಆಗಿದ್ದಾರೆ. ವಿಶೇಷ ಅಂದರೆ ಸಲ್ಮಾನ್ ಖಾನ್ ಜೊತೆ ಕನ್ನಡತಿ, ಕರಾವಳಿ ಸುಂದರಿ ಪೂಜಾ ಹೆಗ್ಡೆ ರೋಮ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬಾಲಿವುಡ್ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ. ಮುಂದೆ ಓದಿ..

ಸಲ್ಮಾನ್ ಗೆ ಪೂಜಾ ನಾಯಕಿ

ಸಲ್ಮಾನ್ ಗೆ ಪೂಜಾ ನಾಯಕಿ

"ಸಲ್ಮಾನ್ ಖಾನ್ ಗೆ ನಟಿ ಪೂಜಾ ಹೆಗ್ಡೆ ನಾಯಕಿಯಾಗುವುದು ಬಹುತೇಕ ಖಚಿತ" ಎಂದು ಬರೆದುಕೊಂಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತ ಸಖತ್ ಬ್ಯುಸಿಯಾಗಿರುವ ಪೂಜಾ, ಬಾಲಿವುಡ್ ನಲ್ಲಿ ಅಪರೂಪಕ್ಕೊಂದು ಸಿನಿಮಾ ಮಾಡಿದರು ಸೂಪರ್ ಆಗುತ್ತೆ. ಅಭಿಮಾನಿಗಳ ಹಾಟ್ ಫೇವರಿಟ್ ನಟಿಯಾಗಿರುವ ಪೂಜಾ ಈಗ ಸಲ್ಮಾನ್ ಜೊತೆ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

ತೆಲುಗು ನಟರ ಪಾಲಿನ ಲಕ್ಕಿ ನಾಯಕಿ

ತೆಲುಗು ನಟರ ಪಾಲಿನ ಲಕ್ಕಿ ನಾಯಕಿ

ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುತ್ತಿರುವ ಪೂಜಾ ಸ್ಟಾರ್ ನಟರ ಪಾಲಿಗೆ ಲಕ್ಕಿ ನಾಯಕಿಯಾಗಿದ್ದಾರೆ. ಪೂಜಾ ಅಭಿನಯದ ತೆಲುಗಿನ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಅಲ್ಲದೆ ಬಾಕ್ಸ್ ಆಫೀಸ್ ನಲ್ಲಿಯೂ ಕೋಟಿ ಕೊಟಿ ಕಲೆಕ್ಷನ್ ಮಾಡಿವೆ. ಪೂಜಾ ಸದ್ಯ ಪ್ರಭಾಸ್ ಗೆ ನಾಯಕಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ಈಗ ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಅಂತಾನೆ ಖ್ಯಾತಿಗಳಿಸಿರುವ ಸಲ್ಮಾನ್ ಜೊತೆಗೆ ನಾಯಕಿಯಾಗುವ ದೊಡ್ಡ ಅವಕಾಶ ಹುಡುಕಿಕೊಂಡು ಬಂದಿದೆ.

ಬಾಲಿವುಡ್-ದಕ್ಷಿಣ ಭಾರತ ಎರಡೂ ಕಡೆ ಪೂಜಾ ಬ್ಯುಸಿ

ಬಾಲಿವುಡ್-ದಕ್ಷಿಣ ಭಾರತ ಎರಡೂ ಕಡೆ ಪೂಜಾ ಬ್ಯುಸಿ

ಪೂಜಾ ದಕ್ಷಿಣ ಭಾರತ ಮತ್ತು ಬಾಲಿವುಡ್ ಎರಡು ಕಡೆ ಮಿಂಚುತ್ತಿದ್ದಾರೆ. ಈ ಮೊದಲು ಅಕ್ಷಯ್ ಕುಮಾರ್ ಅಭಿನಯದ ಹೌಸ್ ಫುಲ್-4 ಸಿನಿಮಾದ ಮೂಲಕ ಬಾಲಿವುಡ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಈಗ ಮತ್ತೆ ಸಲ್ಮಾನ್ ಜೊತೆ ರೋಮ್ಯಾನ್ಸ್ ಮಾಡಲು ಸಿದ್ಧರಾಗಿದ್ದಾರೆ.

ಫರ್ಹಾದ್ ಸಂಜಿ ನಿರ್ದೇಶನದ ಸಿನಿಮಾ

ಫರ್ಹಾದ್ ಸಂಜಿ ನಿರ್ದೇಶನದ ಸಿನಿಮಾ

ಕಭಿ ಈದ್ ಕಭಿ ದಿವಾಲಿ ಸಿನಿಮಾ ಫರ್ಹಾದ್ ಸಂಜಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರಕ್ಕೆ ಸಾಜಿದ್ ನಾಡಿಯಾವಾಲ ಬಂಡವಾಳ ಹೂಡುತ್ತಿದ್ದಾರೆ. ಹೌಸ್ ಫುಲ್-4 ಸಿನಿಮಾ ಕೂಡ ಸಾಜಿದ್ ನಾಡಿಯಾವಾಲ ನಿರ್ಮಾಣದಲ್ಲಿ ಮೂಡಿಬಂದ ಸಿನಿಮಾವಾಗಿದೆ. ಪೂಜಾ ಎರಡನೆ ಬಾರಿಗೆ ಶಾಜಿದ್ ಜೊತೆ ಕೆಲಸ ಮಾಡುತ್ತಿದ್ದಾರೆ.

More from Filmibeat

English summary
Actress Pooja Hegde romance with Actor Salman Khan in Kabhi Ed and Khabi Diwali movie. Pooja Hegde is busy with Telugu Actor Prabhas starrer new film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X