ಸಲ್ಮಾನ್ ಖಾನ್ ಗೆ ಹೀರೋಯಿನ್ ಆದ ಕನ್ನಡದ ಹುಡುಗಿ
ನಟ ಸಲ್ಮಾನ್ ಖಾನ್ ಅಭಿನಯದ 'ದಬಾಂಗ್ 3' ಸಿನಿಮಾದಲ್ಲಿ ಕನ್ನಡ ನಟ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಸಲ್ಮಾನ್ ಮತ್ತೊಂದು ಸಿನಿಮಾದಲ್ಲಿ ಕನ್ನಡದ ನಟಿ ಹೀರೋಯಿನ್ ಆಗಿದ್ದಾರೆ.
ಕನ್ನಡದವರೇ ಆದ ಪೂಜಾ ಹೆಗ್ಡೆ ಈಗ ಸಲ್ಮಾನ್ ಖಾನ್ ಸಿನಿಮಾಗೆ ನಾಯಕಿ ಆಗಿದ್ದಾರೆ. 'ಕಿಕ್ 2' ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿ ಆಗಿದ್ದಾರೆ. ಪೂಜಾ ಹೆಗ್ಡೆ ಜೊತೆಗೆ ಜಾಕ್ವಲೀನ್ ಫರ್ನಾಂಡೀಸ್ ಹಾಗೂ ಕೃತಿ ಸನೂನ್ ಹೆಸರುಗಳು ಕೂಡ ಈ ಸಿನಿಮಾಗೆ ಕೇಳಿ ಬಂದಿವೆ. ಆದರೆ, ಈ ಇಬ್ಬರು ನಟಿಯರಿಗೆ ಪೈಪೋಟಿ ನೀಡಿ ಪೂಜಾ ಆಯ್ಕೆ ಆಗಿದ್ದಾರಂತೆ.
ಪೂಜಾ ಹೆಗ್ಡೆ ಸದ್ಯ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ಸ್ಟಾರ್ ಗಳ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಅಕ್ಷಯ್ ಕುಮಾರ್ ನಟನೆಯ 'ಹೌಸ್ ಫುಲ್ 4'ನಲ್ಲಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದರು.

ಹೃತ್ತಿಕ್ ರೋಷನ್, ಅಕ್ಷಯ್ ಕುಮಾರ್ ನಂತರ ಬಾಕ್ಸ್ ಆಫೀಸ್ ಕಿಂಗ್ ಸಲ್ಮಾನ್ ಖಾನ್ ಜೊತೆಗೆ ಪೂಜಾ ಹೆಗ್ಡೆ ತೆರೆ ಹಂಚಿಕೊಳ್ಳುತ್ತಿದ್ದಾರೆ. 2015 ನಲ್ಲಿ 'ಕಿಕ್' ಸಿನಿಮಾ ಬಂದಿದ್ದು, ಅದರಲ್ಲಿ ಜಾಕ್ವಲೀನ್ ಫರ್ನಾಂಡೀಸ್ ನಾಯಕಿ ಆಗಿದ್ದರು. ಈ ಸಿನಿಮಾಗೆ ಪೂಜಾ ಜೋಡಿ ಆಗುತ್ತಿದ್ದಾರೆ.
ಸಲ್ಮಾನ್ ಖಾನ್ 'ದಬಾಂಗ್ 3' ನಂತರ 'ರಾಧೆ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ನಂತರ 'ಕಿಕ್ 2' ತೆರೆಗೆ ಬರುತ್ತಿದೆ.


Click it and Unblock the Notifications











