ಅವತ್ತು ಸೊಂಟ, ಹೊಕ್ಕಳು ನೋಡ್ತಾರೆ ಅಂತಿದ್ಲು.. ಈಗ ಏನ್ ತೋರಿಸ್ತಿದ್ದಾಳೆ; ಪೂಜಾ ಹೆಗ್ಡೆ ಫುಲ್ ಟ್ರೋಲ್

ಸೆಲೆಬ್ರೆಟಿಗಳು ಮಾತನಾಡುವಾಗ ನೂರು ಬಾರಿ ಯೋಚಿಸಿ ಮಾತನಾಡಬೇಕು. ಕೊಂಚ ಯಾಮಾರಿದ್ರು ಬಳಿಕ ಟ್ರೋಲ್ ಎದುರಿಸಬೇಕಾಗುತ್ತದೆ. ಇದು ಸೋಶಿಯಲ್ ಮೀಡಿಯಾ ಜಮಾನ. ಯಾವ ಫೋಟೊ, ವೀಡಿಯೋ, ಹೇಳಿಕೆ ಯಾವಾಗ ವೈರಲ್ ಆಗುತ್ತದೆ ಗೊತ್ತಾಗಲ್ಲ. ಯಾವತ್ತೋ ಆಡಿದ ಮಾತು ಮತ್ತೆ ಬಂದು ಕಾಡುತ್ತದೆ. ಸದ್ಯ ನಟಿ ಪೂಜಾ ಹೆಗ್ಡೆ ವಿಚಾರದಲ್ಲಿ ಇದು ನಿಜವಾಗುತ್ತಿದೆ.

ಪೂಜಾ ಹೆಗ್ಡೆ ಪೋಷಕರು ಉಡುಪಿ ಮೂಲದವರು. ಆದರೆ ಪೂಜಾ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಅದಕ್ಕೆ ತಕ್ಕಂತೆ ಆಕೆಯ ಲೈಫ್ ಸ್ಟೈಲ್ ಇರುತ್ತದೆ. ಆಗಾಗ್ಗೆ ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆ ಕದಿಯುತ್ತಾರೆ. ದಕ್ಷಿಣದ ಸಿನಿಮಾಗಳಲ್ಲಿ ಅಷ್ಟೇನು ಹಸಿಬಿಸಿ ದೃಶ್ಯಗಳಲ್ಲಿ ಪೂಜಾ ಕಾಣಿಸಿಕೊಂಡಿಲ್ಲ. ಬಾಲಿವುಡ್ ಸಿನಿಮಾಗಳಲ್ಲಿ ಮೈಚಳಿ ಬಿಟ್ಟು ನಟಿಸುತ್ತಾ ಬರ್ತಿದ್ದಾರೆ. 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಚಿತ್ರದಲ್ಲಿ ವರುಣ್ ಧವನ್ ಜೋಡಿಯಾಗಿ ಮಿಂಚಿದ್ದಾರೆ. 'ತೇರಾ ಹೋ ಜಾನ್' ಎಂದು ಶುರುವಾಗುವ ಕಲರ್‌ಫುಲ್ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

Pooja Hegde s Old Remark Resurfaces as beachwear Photos Spark Social Media Backlash

ಬಿಂದಾಸ್ ಸಾಂಗ್‌ನಲ್ಲಿ ವೆರೈಟಿ ವೆರೈಟಿ ಕಾಸ್ಟ್ಯೂಮ್ಸ್‌ನಲ್ಲಿ ಪೂಜಾ ಹೆಗ್ಡೆ ಮಿಂಚಿದ್ದಾರೆ. ಬಿಕಿನಿ ತೊಟ್ಟು ಅದರ ಮೇಲೆ ಜೀನ್ಸ್ ಶಾರ್ಟ್ಸ್‌ ಧರಿಸಿ ಬಟನ್ ಬಿಚ್ಚಿ ಕಾಣಿಸಿಕೊಂಡಿದ್ದಾರೆ. ಸಾಂಗ್ ವೈರಲ್ ಆಗುತ್ತಿದ್ದಂತೆ ಅದೇ ಕಾಸ್ಟ್ಯೂಮ್‌ನಲ್ಲಿ ಕ್ಲಿಕ್ಕಿಸಿದ ಒಂದಷ್ಟು ಫೋಟೊ, ವಿಡಿಯೋಗಳನ್ನು ಪೂಜಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅದು ಸಖತ್ ವೈರಲ್ ಆಗ್ತಿದೆ. ಪಡ್ಡೆ ಹುಡುಗರು ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

ದಕ್ಷಿಣದ ಸಿನಿಮಾಗಳಲ್ಲಿ ನಟನೆಗಿಂತ ನಟಿಯರ ಹೊಕ್ಕಳು, ಸೊಂಟ ನೋಡಲು ಫ್ಯಾನ್ಸ್ ಬಯಸುತ್ತಾರೆ ಎನ್ನುವ ಅರ್ಥದಲ್ಲಿ ಪೂಜಾ ಹೆಗ್ಡೆ ಮಾತನಾಡಿದ್ದರು. ಇಲ್ಲಿನ ಸಿನಿಮಾಗಳಲ್ಲಿ ನಟಿಸಿ ಕೋಟಿ ಕೋಟಿ ಸಂಭಾವನೆ ಪಡೆಯುವ ನಟಿ ಈ ರೀತಿ ಕಾಮೆಂಟ್ ಮಾಡೋದು ಸರೀನಾ? ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. 5 ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಆಕೆ ನೀಡಿದ್ದ ಹೇಳಿಕೆ ಈಗ ವೈರಲ್ ಮತ್ತೆ ಆಗ್ತಿದೆ. ಬಿಕಿನಿ ತೊಟ್ಟು ಸೊಂಟ, ಹೊಕ್ಕಳು ತೋರಿಸುತ್ತಾ ಪೋಸ್ ಕೊಟ್ಟಿರುವುದು ನೋಡಿ ಹೇಳೋದು ಒಂದು, ಮಾಡೋದು ಒಂದು ಎಂದು ಟ್ರೋಲ್ ಮಾಡುತ್ತಿದ್ದಾರೆ.

ಬಾಲಿವುಡ್ ಸಿನಿಮಾಗಳಲ್ಲೇ ಪೂಜಾ ಹೆಚ್ಚು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ದಕ್ಷಿಣದ ಸಿನಿಮಾಗಳಲ್ಲಿ ಒಳ್ಳೆ ಅವಕಾಶಗಳೇ ಸಿಕ್ಕಿದೆ. ಹಾಗಿರುವಾಗ ಅಂದು ಆಕೆ ಹೇಳಿದ್ದು ಸರಿಯಲ್ಲ. ಒಂದು ವೇಳೆ ಅದು ಸರಿ ಎನ್ನುವುದಾದರೆ ಈಗ ಬಾಲಿವುಡ್ ಸಿನಿಮಾಗಳಲ್ಲಿ ಸೊಂಟ, ಹೊಕ್ಕಳು ತೋರಿಸೋದು ಯಾಕೆ? ಎಂದು ಪ್ರಶ್ನಿಸುತ್ತಿದ್ದಾರೆ. ಪೂಜಾ ಎಷ್ಟೇ ಗ್ಲಾಮರಸ್ ಆಗಿ ನಟಿಸಿದರೂ ಆರಕ್ಕೇರದ ಮೂರಕ್ಕಿಳಿಯದ ನಟಿಯಾಗಿ ಉಳಿದುಬಿಟ್ಟಿದ್ದಾರೆ. ಸದ್ಯ ವಿಜಯ್ ಜೊತೆ 'ಜನನಾಯಗನ್' ಚಿತ್ರದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.

ಡೇವಿಡ್ ಧವನ್ ನಿರ್ದೇಶನದ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಸಿನಿಮಾ ಜೂನ್ 5ರಂದು ತೆರೆಗೆ ಬರಲಿದೆ. ಇನ್ನುಳಿದಂತೆ ತಮಿಳಿನ 'ಕಾಂಚನಾ -4' ಚಿತ್ರದಲ್ಲಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ದುಲ್ಕರ್ ಸಲ್ಮಾನ್ ಜೊತೆಗೂ ಒಂದು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ತಾಪ್ಸಿ ಪನ್ನು ಕೂಡ ದಕ್ಷಿಣದ ಸಿನಿಮಾಗಳ ಬಗ್ಗೆ ಇದೇ ರೀತಿಯ ಕಾಮೆಂಟ್ ಮಾಡಿದ್ದರು. ದಕ್ಷಿಣದ ಸಿನಿಮಾಗಳಲ್ಲಿ ನಟಿಯರ ಹೊಕ್ಕಳು ತೋರಿಸಲು ಕಾಯುತ್ತಿರುತ್ತಾರೆ, ಅದು ಯಾಕೆ ಅಂತ ಗೊತ್ತಿಲ್ಲ ಎಂದಿದ್ದರು. ಈ ಬಗ್ಗೆ ಸಾಕಷ್ಟು ಟೀಕೆ ಎದುರಿಸುವಂತಾಗಿತ್ತು.

Read more about: pooja hegde hindi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X