ನನ್ನನ್ನು ಬೇರೊಬ್ಬರ ಜೊತೆ ಮಲಗಿಸಿ ಸೊನಾಕ್ಷಿ ನಾಯಕಿಯಾದಳು! ನಟಿಯ ಆಘಾತಕಾರಿ ಹೇಳಿಕೆ

ನಟಿ ಸೋನಾಕ್ಷಿ ಸಿಂಹ ಬಾಲಿವುಡ್‌ನ ಬೇಡಿಕೆಯ ನಟಿಯರಲ್ಲಿ ಒಬ್ಬರು. ಕಳೆದ 12 ವರ್ಷಗಳಿಂದಲೂ ಚಿತ್ರರಂಗದಲ್ಲಿರುವ ಸೊನಾಕ್ಷಿ ಬಾಲಿವುಡ್ ಪ್ರವೇಶ ಮಾಡಿದ್ದೆ ಸಲ್ಮಾನ್ ಖಾನ್ ಸಿನಿಮಾ ಮೂಲಕ.

ಸೊನಾಕ್ಷಿ ನಟಿಸಿದ ಮೊದಲ ಸಿನಿಮಾ 'ದಬಂಗ್' ಸೂಪರ್ ಡೂಪರ್ ಹಿಟ್ ಆಗಿತ್ತು. ಆ ಸಿನಿಮಾದಲ್ಲಿ ಸೊನಾಕ್ಷಿ ನಟನೆ ಎಲ್ಲರ ಗಮನ ಸೆಳೆದಿತ್ತು. ಉತ್ತಮ ನಟನೆಯ ಜೊತೆಗೆ ಸೌಂದರ್ಯವನ್ನೂ ಹೊಂದಿದ್ದ ಸೊನಾಕ್ಷಿ ಆ ನಂತರ ಹಿಂತಿರುಗಿ ನೋಡಿದ್ದಿಲ್ಲ.

ಆದರೆ ಈಗ ನಟಿ, ಮಾಜಿ ಬಿಗ್‌ಬಾಸ್ ಸ್ಪರ್ಧಿ ಪೂಜಾ ಮಿಶ್ರಾ, ಸೊನಾಕ್ಷಿ ಸಿನ್ಹಾ ಮೊದಲ ಸಿನಿಮಾದ ಅವಕಾಶವನ್ನು ಪಡೆದಿದ್ದು, ತಮ್ಮನ್ನು ಹೀನವಾಗಿ ಬಳಸಿಕೊಂಡು ಎಂಬ ಆರೋಪವನ್ನು ಮಾಡಿದ್ದಾರೆ.

Pooja Mishra Allegation On Shatrughan Sinha

ಸೊನಾಕ್ಷಿ ಸಿನ್ಹಾರ ತಂದೆ ಖ್ಯಾತ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಹಾಗೂ ಅವರ ಪತ್ನಿ ಪೂನಂ ಸಿನ್ಹಾ ವಿರುದ್ಧ ಗುರುತರ ಆರೋಪ ಮಾಡಿರುವ ಪೂಜಾ ಮಿಶ್ರಾ, ತಮ್ಮ ಮಗಳಿಗೆ ಸಿನಿಮಾ ಅವಕಾಶ ಕೊಡಿಸಲು ನನ್ನನ್ನು ಸೆಕ್ಸ್ ಸ್ಕ್ಯಾಮ್‌ಗೆ ಬಳಸಿಕೊಂಡರು ನನ್ನ ವಿರುದ್ಧ ಮಾಟ-ಮಂತ್ರ ಬಳಸಿದರು ಎಂದು ಹೇಳಿದ್ದಾರೆ.

ನವಭಾರತ್ ಟೈಮ್ಸ್ ಜೊತೆ ಮಾತನಾಡಿರುವ ಪೂಜಾ ಮಿಶ್ರಾ, ''ನನ್ನ ಕನ್ಯತ್ವವನ್ನು ಮಾರಾಟಕ್ಕಿಟ್ಟು ಶತ್ರುಘನ್ ಸಿನ್ಹಾ ತನ್ನ ಮಗಳನ್ನು ಸ್ಟಾರ್ ಮಾಡಿದರು. ಸೊನಾಕ್ಷಿಗೆ ನಟಿಯಾಗುವುದು ಇಷ್ಟವಿರಲಿಲ್ಲ, ಆಕೆ ಫ್ಯಾಷನ್ ಡಿಸೈನರ್ ಆಗಬೇಕು ಎಂದುಕೊಂಡಿದ್ದಳು'' ಎಂದಿದ್ದಾರೆ.

ಪೂಜಾ ಹೇಳಿರುವಂತೆ, ಪೂಜಾರ ತಂದೆ ಹಾಗೂ ಶತ್ರುಘನ್ ಸಿನ್ಹಾ ಒಳ್ಳೆಯ ಗೆಳೆಯರಾಗಿದ್ದರಂತೆ, ಆದರೆ ಶತ್ರುಘನ್ ಸಿನ್ಹಾ ಪತ್ನಿ ಪೂನಂ ಸಿನ್ಹಾ, ಪೂಜಾರ ತಂದೆಯ ತಲೆ ಕೆಡಿಸಿ, ಕೇವಲ ವೇಶ್ಯಾವಾಟಿಕೆ ನಡೆಸುವರಷ್ಟೆ ಸಿನಿಮಾ ರಂಗಕ್ಕೆ ಬರುತ್ತಾರೆಂದು ಹೇಳಿದರಂತೆ, ಇದರಿಂದ ಪೂಜಾರ ತಂದೆ ಆಕೆಯನ್ನು ಸಿನಿಮಾಗಳಲ್ಲಿ ನಟಿಸಲು ಬಿಡಲಿಲ್ಲವಂತೆ.

ಪೂಜಾ ಮಿಶ್ರಾರ ತಂದೆ ಪುಣೆಗೆ ವಾಸ್ತವ್ಯ ಬದಲಿಸಿದ ಬಳಿಕ ಶತ್ರುಘನ್ ಸಿನ್ಹಾ ಕುಟುಂಬ ಪೂಜಾ ಮಿಶ್ರಾರನ್ನು ತುಳಿಯಲು ಪ್ರಾರಂಭಿಸಿತಂತೆ. ಶತ್ರುಘನ್ ಸಿನ್ಹಾ ಹಾಗೂ ಕುಟುಂಬ ಪೂಜಾರಿಂದ ಸುಮಾರು 35 ಸಿನಿಮಾಗಳನ್ನು ಕಿತ್ತುಕೊಂಡಿತಂತೆ. ''ನಾನು ಸಿನಿಮಾ ಮಾಡಲು ಆರಂಭಿಸಿದರೆ ತಮಗಿಂತಲೂ ದೊಡ್ಡ ಹೆಸರು ಮಾಡುತ್ತೀನಿ ಎಂದು ಶತ್ರುಘನ್ ಸಿನ್ಹಾಗೆ ಹೆದರಿಕೆ ಇತ್ತು'' ಎಂದಿದ್ದಾರೆ ಪೂಜಾ.

''ನಾನು ಇದ್ದ ಅಪಾರ್ಟ್‌ಮೆಂಟ್‌ನ ಮೇಲಿನ ಮನೆಯಲ್ಲಿಯೇ ಶತ್ರುಘನ್ ಸಿನ್ಹಾ ಕುಟುಂಬ ವಾಸವಿತ್ತು. ನಾನು ಒಮ್ಮೆ ಶತ್ರುಘನ್ ಸಿನ್ಹಾ ಮನೆಗೆ ಹುಟ್ಟುಹಬ್ಬಕ್ಕೆ ಹೋಗಿದ್ದಾಗ ಪೂನಂ ಸಿನ್ಹಾ ನನಗೆ ಏನೋ ತಿನ್ನಿಸಿ ನನ್ನ ವಿರುದ್ಧ ಕಾಲಾಜಾದೂ ಮಾಡಿದ್ದಳು. ಅವರು ನಾನಿಲ್ಲದಾಗ ನನ್ನ ಮನೆಗೆ ಬಂದು ನನ್ನ ವಸ್ತುಗಳನ್ನು ಕದಿಯುತ್ತಿದ್ದರು'' ಎಂದು ಆರೋಪಿಸಿದ್ದಾರೆ ಪೂಜಾ.

''ಶತ್ರುಘನ್ ಸಿನ್ಹಾ ನನ್ನ ಕನ್ಯತ್ವವನ್ನು ಮಾರಾಟಕ್ಕಿಟ್ಟು, ಆತನ ಮಗಳಿಗೆ ಸಿನಿಮಾ ಅವಕಾಶ ಕೊಡಿಸಿದ. ನನಗೆ ಡ್ರಗ್ಸ್ ನೀಡಿ ನನ್ನ ಜೀವನ ಹಾಗೂ ವೃತ್ತಿಯನ್ನು ಹಾಳು ಮಾಡಿದ. ನನ್ನ ವೃತ್ತಿ ಜೀವನ ಹಾಳಾಗಿದ್ದಕ್ಕೆ ನೇರವಾಗಿ ಶತ್ರುಘನ್ ಸಿನ್ಹಾ ಕಾರಣ'' ಎಂದು ದೂರಿದ್ದಾರೆ ಪೂಜಾ ಮಿಶ್ರಾ.

More from Filmibeat

English summary
Former Bigg Boss contestant and actress Pooja Mishra allegations on Shatrughan Sinha. She alleged that Shatrughan Sinha used her to make his daughter star.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X