ಸಲ್ಮಾನ್ ಖಾನ್ ವಿರುದ್ಧ MeToo ಬಾಂಬ್: ರೂಪದರ್ಶಿಯಿಂದ ಅತ್ಯಾಚಾರ ಆರೋಪ.!
ನಾನಾ ಪಾಟೇಕರ್, ಸಾಜೀದ್ ಖಾನ್, ಸುಭಾಶ್ ಘಾಯ್, ಕರೀಮ್ ಮೊಹಾನಿ, ವಿಕಾಸ್ ಭಾಲ್ ಅಂತಹ ದೊಡ್ಡ ನಟ, ನಿರ್ಮಾಪಕರ ನಂತರ ಈಗ ಬಾಲಿವುಡ್ ಖಾನ್ ಗಳ ಹೆಸರು ಮೀಟೂ ಅಭಿಯಾನದಲ್ಲಿ ಸಿಲುಕಿಕೊಂಡಿದೆ.
ಇತ್ತೀಚಿಗಷ್ಟೆ ಕೇಶ ವಿನ್ಯಾಸಕಿ ಸ್ವಪ್ನಾ ಭವಾನಿ ಬಿಗ್-ಬಿ ಅಮಿತಾಬ್ ಬಚ್ಚನ್ ಅವರ ವಿರುದ್ಧ ಕಿಡಿಕಾರಿದ್ದರು. ಎಲ್ಲರೂ ಅಂದುಕೊಂಡಂತೆ ಬಚ್ಚನ್ ಸಜ್ಜನ ವ್ಯಕ್ತಿಯಲ್ಲ. ಆತನದ್ದು ಪುರಾಣಗಳಿವೆ, ಯಾರಾದರೂ ಬಹಿರಂಗಪಡಿಸ್ತಾರೆ ಎಂದು ಆಘಾತ ಸುದ್ದಿ ನೀಡಿದ್ದರು.
ಇದೀಗ, ರೂಪದರ್ಶಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಪೂಜಾ ಮಿಶ್ರಾ ಬಾಲಿವುಡ್ ಬಾಕ್ಸ್ ಆಫೀಸ್ 'ಸುಲ್ತಾನ್' ಸಲ್ಮಾನ್ ಖಾನ್ ವಿರುದ್ಧ ಬಾಂಬ್ ಸಿಡಿಸಿದ್ದಾರೆ. ಸಲ್ಮಾನ್ ಖಾನ್ ಮತ್ತು ಸಹೋದರರು ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಮುಂದೆ ಓದಿ.....

ಸಲ್ಮಾನ್ ಮತ್ತು ಸಹೋದರರಿಂದ ಅತ್ಯಾಚಾರ.!
ಬಿಗ್ ಬಾಸ್ 5ನೇ ಆವೃತ್ತಿಯ ಸ್ಪರ್ಧಿಯಾಗಿದ್ದ ಪೂಜಾ ಮಿಶ್ರಾ ಅವರು ಈಗ ಸಲ್ಮಾನ್ ಖಾನ್ ಮತ್ತು ಸಹೋದರರ ಮೇಲೆ ಬಾಂಬ್ ಸಿಡಿಸಿದ್ದಾರೆ. ಸಲ್ಲು ಮತ್ತು ಸಹೋದರರಾದ ಅಬ್ರಾಜ್ ಖಾನ್ ಮತ್ತು ಶೋಹಿಲ್ ಖಾನ್ ನನ್ನ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದಾರೆ ಎಂದು ಮೀಟೂ ಅಭಿಯಾನದಲ್ಲಿ ಹೇಳಿಕೊಂಡಿದ್ದಾರೆ.

ಪ್ರಜ್ಞೆ ತಪ್ಪಿದಾಗ ಅತ್ಯಾಚಾರ
ಸಲ್ಮಾನ್ ಖಾನ್ ಅಭಿನಯಿಸಿದ್ದ 'ಸುಲ್ತಾನ್' ಸಿನಿಮಾದ ಚಿತ್ರೀಕರಣದ ವೇಳೆ ನಾನು ಪ್ರಜ್ಞೆ ತಪ್ಪಿದ ಸಂದರ್ಭದಲ್ಲಿ ಸಲ್ಮಾನ್ ಮತ್ತು ಸಹೋದರರು ನನ್ನ ಮೇಲೆ ರೇಪ್ ಮಾಡಿದ್ದಾರೆ ಎಂದು ಸ್ಫೋಟಕ ಆರೋಪ ಮಾಡ್ತಿದ್ದಾರೆ.

ಹಲವು ಬಾರಿ ರೇಪ್ ಮಾಡಿದ್ದಾರೆ
ಕೇವಲ ಸುಲ್ತಾನ್ ಸೆಟ್ ನಲ್ಲಿ ಮಾತ್ರವಲ್ಲ, ಹಲವಾರು ಬಾರಿ ನಟ ಸಲ್ಮಾನ್ ಖಾನ್, ಅರ್ಬಜ್ ಮತ್ತು ಸೋಹಾಲಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಒಮ್ಮೆ ರೂಮ್ ಒಂದರಲ್ಲಿ ನನ್ನ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಪೂಜಾ ಮಿಶ್ರಾ ಆರೋಪಿಸಿದ್ದಾರೆ.

ಶತ್ರುಘ್ನ ಸಿನ್ಹಾ ಮೇಲೆ ಅಟ್ಯಾಕ್
ಇನ್ನು ಹಿರಿಯ ನಟ ಶತ್ರುಘ್ನ ಸಿನ್ಹಾ ನನ್ನ ಮೇಲೆ ವಶೀಕರಣ ಮಾಡಿಸಿದ್ದಾರೆ. ನನ್ನ ಲ್ಯಾಪ್ ಟಾಪ್ ಮತ್ತು ಮೊಬೈಲ್ ಹ್ಯಾಕ್ ಮಾಡಿಸಿ ನನ್ನ ಐಡಿಯಾಗಳನ್ನು ಕದ್ದು ಸೋನಾಕ್ಷಿ ಸಿನ್ಹಾರನ್ನು ಬೆಳೆಸಿದ್ದಾರೆ ಎಂದು ರೂಪದರ್ಶಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಪೂಜಾ ಮಿಶ್ರಾ ಹೇಳಿಕೊಂಡಿದ್ದಾರೆ.

ಪೂಜಾ ಮಿಶ್ರಾ ಬಗ್ಗೆ...
ಮಾಡಲ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಪೂಜಾ ಮಿಶ್ರಾ ಬಿಗ್ ಬಾಸ್ ಸೇರಿದಂತೆ 'ಬಿಗ್ ಸ್ವಿಚ್', 'ವೆಲ್ ಕಮ್ ಭಾಜಿ' ಟಿವಿ ಶೋಗಳಲ್ಲಿ ಭಾಗವಹಿಸಿದ್ದಾರೆ. 2003ರಲ್ಲಿ 'ದಿಲ್ ಕಾ ರಿಸ್ತಾ' ಮತ್ತು 2012ರಲ್ಲಿ 'ಭಾಜಾ ಬಜಾ ದೋಂಗಾ' ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











