ಮದುವೆಯಾದ ಎರಡೇ ವಾರಕ್ಕೆ ಪತಿ ವಿರುದ್ಧ ಪೂನಂ ಪಾಂಡೆ ದೂರು, ಬಂಧನ
ನಟಿ, ಮಾಡೆಲ್ ಪೂನಂ ಪಾಂಡೆ ಮದುವೆಯಾಗಿ ಎರಡು ವಾರವೂ ಪೂರ್ಣವಾಗಿಲ್ಲ, ಅಷ್ಟರಲ್ಲೇ ಪೂನಂ ಪಾಂಡೆ ಹಾಗೂ ಪತಿ ಸ್ಯಾಂ ಬಾಂಬೆ ನಡುವೆ ದೊಡ್ಡ ಬಿರುಕು ಏರ್ಪಟ್ಟಿದೆ.
ಪೂನಂ ಪಾಂಡೆ ತನ್ನ ಪತಿಯ ವಿರುದ್ಧ ದೂರು ನೀಡಿದ್ದು, ಸ್ಯಾಂ ಬಾಂಬೆಯನ್ನು ಗೋವಾ ಪೊಲೀಸರು ಇಂದು (ಮಂಗಳವಾರ) ಬಂಧಿಸಿದ್ದಾರೆ.
ಸ್ಯಾಂ ಬಾಂಬೆ ಹಲ್ಲೆ ಮಾಡಿದ್ದಾರೆ ಎಂದು ಪೂನಂ ಪಾಂಡೆ ಗೋವಾ ಪೊಲೀಸರಿಗೆ ದೂರು ನೀಡಿದ್ದು, ಗೋವಾ ಪೊಲೀಸರು ಸ್ಯಾಂ ಅನ್ನು ಬಂಧಿಸಿದ್ದಾರೆ. ಪೂನಂ ಪಾಂಡೆ ಸಿನಿಮಾ ಒಂದರ ಚಿತ್ರೀಕರಣಕ್ಕಾಗಿ ಗೋವಾದಲ್ಲಿದ್ದಾರೆ, ಹಲ್ಲೆ ಸಹ ಗೋವಾದಲ್ಲಿಯೇ ಇದೆ ಎನ್ನಲಾಗುತ್ತಿದೆ.

ಸ್ಯಾಂ ನನ್ನ ಮೇಲೆ ಲೈಂಗಿಕ ಹಿಂಸಾಚಾರ ಹಾಗೂ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಪೂನಂ ಪಾಂಡೆ ಸೋಮವಾರ ರಾತ್ರಿ ಗೋವಾದ ಕೊಕೋನ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೂನಂ ಪಾಂಡೆ ಮತ್ತು ಸ್ಯಾಂ ಬಾಂಬೆ ಎರಡು ವಾರದ ಹಿಂದೆ (ಸೆಪ್ಟೆಂಬರ್ 10) ರಂದು ವಿವಾಹವಾಗಿದ್ದರು. ಮದುವೆಯಾದ ಹನ್ನೆರಡು ದಿನದಲ್ಲೇ ಇಬ್ಬರ ನಡುವೆ ಬಿರುಕು ಮೂಡಿದೆ.
English summary
Actress Poonam Pandey's husband Sam Bombay arrested in Goa on assult charges.


Click it and Unblock the Notifications