For Quick Alerts
  ALLOW NOTIFICATIONS  
  For Daily Alerts

  ಅಸಭ್ಯ ವಿಡಿಯೋ ಚಿತ್ರೀಕರಣ; ಪೂನಂ ಪಾಂಡೆ ದಂಪತಿಗೆ ಜಾಮೀನು

  |

  ಅಸಭ್ಯ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಬಾಲಿವುಡ್ ನಟಿ ಮತ್ತು ಮಾಡೆಲ್ ಪೂನಮ್ ಪಾಂಡೆ ಮತ್ತು ಪತಿ ಸ್ಯಾಮ್ ಬಾಂಬೆಗೆ ಜಾಮೀನು ಸಿಕ್ಕಿದೆ. ಪೂನಂ ಮತ್ತು ಆಕೆಯ ಪತಿಯನ್ನು ಗೋವಾದ ಅಗುವಾಡಾದಲ್ಲಿರುವ ಉನ್ನತ ರೆಸಾರ್ಟ್‌ನಲ್ಲಿ ಬಂಧಿಸಲಾಗಿತ್ತು.

  ಗೋವಾದ ಚಾಪೋಲಿ ಡ್ಯಾಮ್ ನಲ್ಲಿ ಅಸಭ್ಯವಾಗಿ ವಿಡಿಯೋ ಚಿತ್ರೀಕರಣ ಮಾಡಿ ಪೂನಂ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಈ ವಿಡಿಯೋಗೆ ಗೋವಾದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾಣರವಾಗಿತ್ತು.

  ಗೋವಾದಲ್ಲಿ ಅಸಭ್ಯ ವಿಡಿಯೋ ಚಿತ್ರೀಕರಿಸಿದ ಪೂನಂ ಪಾಂಡೆ ಅರೆಸ್ಟ್ಗೋವಾದಲ್ಲಿ ಅಸಭ್ಯ ವಿಡಿಯೋ ಚಿತ್ರೀಕರಿಸಿದ ಪೂನಂ ಪಾಂಡೆ ಅರೆಸ್ಟ್

  ಗೋವಾದ ಕಾನಕೋಣ ಮ್ಯಾಜಿಸ್ಟ್ರೇಟ್ ಕೋರ್ಟ್ ತಲಾ 20,000 ಸಾವಿರ ಬಾಂಡ್ ನೊಂದಿಗೆ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ ಎಂದು ವರದಿಯಾಗಿದೆ.

  ನಿರ್ಬಂಧಿತ ಪ್ರದೇಶದಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟ ಸರ್ಕಾರದ ವಿರುದ್ಧ ವಿರೋಧ ಪಕ್ಷದವರು ಟೀಕಾಪ್ರಹಾರ ನಡೆಸಿದರು. ಕೆಲವು ಸಂಘಟನೆಗಳು ಪ್ರತಿಭಟನೆ ಸಹ ಮಾಡಿವೆ. ಈ ಸಂಬಂಧ ಗೋವಾ ಫಾರ್ವರ್ಡ್ ಪಾರ್ಟಿ ದೂರು ನೀಡಿದ್ದು, ನಟಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

  ಈ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಕೆನಕೋನಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ತುಕಾರಂ ಚವಾಣ್ ಅವರನ್ನು ಅಮಾನತುಗೊಳಿಸಲಾಗಿದೆ.

  English summary
  Poonam Pandey and Husband Sam Bombay granted bail after Arrest for Shooting obscene video in Goa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X