ಲಾಕ್ ಡೌನ್ ನಿಯಮ ಉಲ್ಲಂಘನೆ: ನಟಿ ಪೂನಂ ಪಾಂಡೆ ಬಂಧನ
ಬಾಲಿವುಡ್ ನ ಹಾಟ್ ನಟಿ ಪೂನಂ ಪಾಂಡೆ ಮತ್ತು ಬಾಯ್ ಫ್ರೆಂಡ್ ಸ್ಯಾಮ್ ಅಹಮದ್ ನನ್ನು ಮುಂಬೈ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ. ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ ಮುಂಬೈನ ಮರೀನ್ ಡ್ರೈವ್ ಪೊಲೀಸರು ಅರೆಸ್ಟ್ ಮಾಡಿದ್ದರು.
Recommended Video
ಪೊಲೀಸ್ ಮಾಹಿತಿ ಪ್ರಕಾರ 29 ವರ್ಷದ ಪೂನಂ ಮತ್ತು ಆಕೆಯ ಬಾಯ್ ಫ್ರೆಂಡ್ ಸ್ಯಾಮ್ ಅಹಮದ್ ಇಬ್ಬರು ಲಾಕ್ ಡೌನ್ ನಡುವೆಯೂ ಕಾರಣ ಇಲ್ಲದೆ ಐಶಾರಾಮಿ ಕಾರಿನಲ್ಲಿ ಸುತ್ತಾಡುತ್ತಿದ್ದರು. ಈ ವೇಳೆ ಪೊಲೀಸರು ಬಂಧಿಸಿದ್ದು ಇಬ್ಬರ ವಿರುದ್ಧ ಸೆಕ್ಷನ್ 269 ಮತ್ತು 188ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಪೂನಂ ಪಾಂಡೆ ಹಾಟ್ ವಿಡಿಯೋಗಳ ಮೂಲಕವೇ ಯುವಕರ ನಿದ್ದೆಗೆಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಪೂನಂ ಸದಾ ಒಂದಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುತ್ತಾರೆ.

ಇತ್ತೀಚಿಗಷ್ಟೆ ಬಾಲಿವುಡ್ ಖ್ಯಾತ ನಟಿ ಶಿಲ್ಪ ಶೆಟ್ಟಿ ಪತಿ ರಾಜ್ ಕುಂದ್ರ ವಿರುದ್ಧ ಪೂನಂ ಪಾಂಡೆ ಸಿಡಿದೆದ್ದಿದ್ದರು. ರಾಜ್ ಕುಂದ್ರ ಕಡೆಯವರಿಂದ ಬೆದರಿಕೆ ಕರೆ ಬರುತ್ತಿದೆ ರಾಜ್ ಕುಂದ್ರ ವಿರುದ್ಧ ಕ್ರಿಮನಲ್ ಕೇಸ್ ದಾಖಲಿಸಿದ್ದರು. ಈಗ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಅರೆಸ್ಟ್ ಆಗಿ ಮತ್ತೆ ಬಿಡುಗಡೆಯಗಿದ್ದಾರೆ.


Click it and Unblock the Notifications











