ಅಶ್ಲೀಲ ವಿಡಿಯೋ: ಪೂನಂ ಪಾಂಡೆ ಬಂಧನ, ಬೆತ್ತಲೆ ಓಡಿದ ಮಿಲಿಂದ್ ಬಂಧನ ಏಕಿಲ್ಲ?

ಪೂನಂ ಪಾಂಡೆ ತಮ್ಮ ಗ್ಲಾಮರಸ್ ಚಿತ್ರಗಳು ವಿಡಿಯೋಗಳಿಂದಲೇ ಖ್ಯಾತರು, ಆಕೆಯನ್ನು ಗ್ಲಾಮರಸ್ ತಾರೆ ಎಂದೇ ಎಲ್ಲರೂ ಗುರುತಿಸುವುದು.

ಗೋವಾದ ಚಾಪೋಲಿ ಡ್ಯಾಂ ಬಳಿ ಪೂನಂ ಪಾಂಡೆ ಅಂಥಹುದೇ ಒಂದು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಆದರೆ ವಿಡಿಯೋ ಚಿತ್ರೀಕರಣ ಮಾಡಿದ್ದಕ್ಕೆ ಪೂನಂ ಪಾಂಡೆ ಯನ್ನು ಪೊಲೀಸರು ಬಂಧಿಸಿದ್ದಾರೆ.

ಪೂನಂ ಪಾಂಡೆ ಹಾಗೂ ತಂಡ ಅಲ್ಲಿನ ಸ್ಥಳೀಯ ಪೊಲೀಸರ ಒಪ್ಪಿಗೆ ಪಡೆದುಕೊಂಡು ವಿಡಿಯೋ ಚಿತ್ರೀಕರಣ ಮಾಡಿದ್ದರು. ಅನುಮತಿ ನೀಡಿದ ಪೊಲೀಸರನ್ನು ಅಮಾನತ್ತುಗೊಳಿಸಿ, ನಟಿಯನ್ನು ಬಂಧಿಸಲಾಗಿದೆ. ಆದರೆ ಅದರ ಹಿಂದಿನ ದಿನವಷ್ಟೆ ಅದೇ ಗೋವಾದಲ್ಲಿ ನಟ ಮಿಲಿಂದ್ ಸೊಮನ್ ಬೆತ್ತಲೆಯಾಗಿ ಓಡಿದ್ದರು, ಹಾಗಿದ್ದರೆ ಅವರ ಮೇಲೆ ಕ್ರಮ ಜರುಗಿಸಿಲ್ಲ ಏಕೆ ಎಂಬ ಪ್ರಶ್ನೆ ಈಗ ಸಾಮಾಜಿಕ ಜಾಲತಾಣದಲ್ಲಿ ಎದ್ದಿದೆ.

ಗೋವಾ ಬೀಚ್‌ನಲ್ಲಿ ಬೆತ್ತಲೆ ಓಡಿದ್ದ ಮಿಲಿಂದ್

ಗೋವಾ ಬೀಚ್‌ನಲ್ಲಿ ಬೆತ್ತಲೆ ಓಡಿದ್ದ ಮಿಲಿಂದ್

ನಟ ಮಿಲಿಂದ್ ಸೋಮನ್ ತಮ್ಮ ಹುಟ್ಟುಹಬ್ಬದ ದಿನದಂದು ಗೋವಾದ ಬೀಚ್ ಒಂದರಲ್ಲಿ ಬಟ್ಟೆ ಧರಿಸದೆ ಬೆತ್ತಲೆಯಾಗಿ ಓಡಿದ್ದರು. ಅವರು ಹಾಗೆ ಬೆತ್ತಲೆಯಾಗಿ ಓಡುತ್ತಿರುವ ಚಿತ್ರವನ್ನು ಅವರ ಪತ್ನಿ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಗಂಡಿಗೆ ಒಂದು ನ್ಯಾಯ, ಹೆಣ್ಣಿಗೆ ಒಂದು ನ್ಯಾಯವಾ?

ಗಂಡಿಗೆ ಒಂದು ನ್ಯಾಯ, ಹೆಣ್ಣಿಗೆ ಒಂದು ನ್ಯಾಯವಾ?

ಗ್ಲಾಮರಸ್ ವಿಡಿಯೋ ಚಿತ್ರೀಕರಣ ಮಾಡಿದ್ದಕ್ಕೆ ಪೂನಂ ಪಾಂಡೆಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಮಿಲಿಂದ್ ಸೊಮನ್ ಪೂರ್ಣ ಬೆತ್ತಲಾಗಿ ಬೀಚ್‌ನಲ್ಲಿ ಓಡಿದ್ದಾರೆ ಹಾಗಿದ್ದರೆ ಅವರನ್ನು ಏಕೆ ಬಂಧಿಸಿಲ್ಲ. ಗಂಡಿಗೆ ಒಂದು ನ್ಯಾಯ, ಹೆಣ್ಣಿಗೆ ಒಂದು ನ್ಯಾಯವಾ ಎಂದು ಕೆಲವರು ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ಮಿಲಿಂದ್ ಪರವಾಗಿ ಕೆಲವರ ಟ್ವೀಟ್

ಮಿಲಿಂದ್ ಪರವಾಗಿ ಕೆಲವರ ಟ್ವೀಟ್

ಮಿಲಿಂದ್ ಸೋಮನ್ ಬೆಂಬಲವಾಗಿಯೂ ಕೆಲವರು ಟ್ವೀಟ್ ಮಾಡಿದ್ದು, ಮಿಲಿಂದ್ ಸೋಮನ್ ಉದ್ದೇಶ ಬೇರೆಯದಿತ್ತು. ಆದರೆ ಪೂನಂ ಉದ್ದೇಶ ಗ್ಲಾಮರ್ ಮಾತ್ರವೇ ಆಗಿತ್ತು. ಮಿಲಿಂದ್ ಬೆತ್ತಲಾಗಿ ಓಡಿದ್ದರೂ ಸಹ 'ಉದ್ರೇಕಿಸುವ' ಉದ್ದೇಶ ಅವರಿಗೆ ಇರಲಿಲ್ಲ ಎಂದಿದ್ದಾರೆ.

ನಿಷೇಧಿತ ವಲಯದಲ್ಲಿ ಚಿತ್ರೀಕರಣ

ನಿಷೇಧಿತ ವಲಯದಲ್ಲಿ ಚಿತ್ರೀಕರಣ

ಪೂನಂ ಪಾಂಡೆ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದಾರೆ ಎಂಬ ಕಾರಣಕ್ಕೆ ಪೊಲೀಸರು ಬಂಧಿಸಿಲ್ಲ, ಬದಲಾಗಿ ನಿಷೇಧಿತ ಪ್ರದೇಶದಲ್ಲಿ ಚಿತ್ರೀಕರಣ ಮಾಡಿದ್ದಾರೆ ಎಂಬ ಕಾರಣಕ್ಕೆ ಬಂಧಿಸಲಾಗಿದೆ ಎಂದು ಕೆಲವರು ಮಾಹಿತಿ ನೀಡಿದ್ದಾರೆ.

More from Filmibeat

English summary
Poonam Pandey arrested for shooting glamorous video on beach. Netizen asks why Milind Soman not arrested he ran naked on the beach.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X