»   »  ಬಾಬಾ ರಾಮ್ ರಹೀಮ್ ಬಗ್ಗೆ ನಟಿ ಪೂನಂ ಪಾಂಡೆ ಹೇಳಿದ್ದೇನು?

ಬಾಬಾ ರಾಮ್ ರಹೀಮ್ ಬಗ್ಗೆ ನಟಿ ಪೂನಂ ಪಾಂಡೆ ಹೇಳಿದ್ದೇನು?

Posted By:
Subscribe to Filmibeat Kannada
poonam pandey reaction on Gurmeet ram rahim singh | Filmibeat Kannada

ಪೂನಂ ಪಾಂಡೆ.....ಈ ಹೆಸ್ರು ಕೇಳಿದ್ರೆ ಸಾಕು, 16ರ ಯುವಕರಿಂದ 60ರ ಮುದುಕರವರೆಗೂ ನಿಂತಲ್ಲಿ ಕುಂತಲ್ಲಿ ಈಕೆಯ ಕನಸು ಕಾಣ್ತಾರೆ. ಯಾಕಂದ್ರೆ, ಪೂನಂ ಪಾಂಡೆಯ ಸೆಕ್ಸಿ ಲುಕ್, ಮೋಹಕ ಮೈಮಾಟ, ಬೋಲ್ಡ್ ಫೋಟೋಗಳ ಮೂಲಕ ಎಲ್ಲರ ಕಣ್ಣು ಕುಕ್ಕಿಸಿದ್ದಾಳೆ. ಇಂತಹ ಪೂನಂ ಪಾಂಡೆ ಈಗ ಬಾಬಾ ರಾಮ್ ರಹೀಮ್ ಗುರ್ಮಿತ್ ಸಿಂಗ್ ಬಗ್ಗೆ ಮಾತನಾಡಿದ್ದು, ಜೊತೆಗೆ ತನ್ನ ಹೊಸ ಅವತಾರದ ಬಗ್ಗೆ ಸುದ್ದಿಯಾಗಿದ್ದಾಳೆ.

ಅರೆನಗ್ನ ಚಿತ್ರಗಳು, ಸೆಕ್ಸಿ ವಿಡಿಯೋಗಳು, ತನ್ನ ಅರೆನಗ್ನದ ದೇಹವನ್ನ ಪ್ರದರ್ಶನಕ್ಕಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸುದ್ದಿ ಮಾಡುವ ಪೂನಂ ಪಾಂಡೆ ಇದೀಗ, ಮೈತುಂಬ ಬಟ್ಟೆ ಹಾಕ್ಕೊಂಡು ವಿಶೇಷವಾಗಿ ಗಮನ ಸೆಳೆದಿದ್ದಾಳೆ.

Poonam Pandey Celebrate the Ganesh Festival

ಹೌದು, ಗಣೇಶ ಚತುರ್ಥಿಯ ವಿಶೇಷವಾಗಿ ನಟಿ ಕಮ್ ಮಾಡೆಲ್ ಪೂನಂ ಪಾಂಡೆ ಸಂಪ್ರದಾಯಸ್ಥ ಹೆಣ್ಣು ಮಗಳಂತೆ ಮೈತುಂಬ ಬಟ್ಟೆ ತೊಟ್ಟು ಎಲ್ಲರನ್ನ ಆಕರ್ಷಿಸಿದ್ದಾಳೆ.

Poonam Pandey Celebrate the Ganesh Festival

ಪೂನಂ ಪಾಂಡೆಯ ಈ ಭಕ್ತಿ ಕಂಡು ಬಾಲಿವುಡ್ ಲೋಕ ಬೆರರಾಗಿದೆ. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಪೂನಂ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Poonam Pandey Celebrate the Ganesh Festival

ಬಾಬಾ ಗುರ್ಮಿತ್ ಸಿಂಗ್‌ ಬಗ್ಗೆ ಪೂನಂ ಪಾಂಡೆ ಹೇಳಿದ್ದೇನು?

ಇನ್ನು ಇದೇ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಪೂನಂ, ಸ್ವಯಂ ಘೋಷಿತ ದೇವಮಾನವ ಬಾಬಾ ಗುರ್ಮಿತ್ ಸಿಂಗ್‌ ಅಂತಹ ಬಾಬಾಗಳು ದೇವರೆಂದು ನಾವು ಭಾವಿಸುತ್ತೇವೆ ಆದರೆ ನಿಜವಾಗಿಯೂ ಅವರು ಮೋಸಗಾರರು. ಗುರ್ಮಿತ್ ಗೆ ಶಿಕ್ಷೆಯಾಗಿರುವುದು ಕೇವಲ ನನಗಷ್ಟೇ ಅಲ್ಲ, ಇಡೀ ದೇಶಕ್ಕೆ ಸಂತಸ ತಂದಿದೆ. ಒಬ್ಬ ಮಹಿಳೆಯಾಗಿ ನಾನು ನಮ್ಮ ದೇಶದ ಕಾನೂನು ಬಗ್ಗೆ ಹೆಮ್ಮೆ ಪಡುತ್ತೇನೆ. ಕಾನೂನಿನ ಮುಂದೆ ಎಲ್ಲರೂ ಸಮಾನರು, ಯಾರೊಬ್ಬರು ಕೂಡ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ'' ಎಂದಿದ್ದಾರೆ.

English summary
Ganesh Chaturthi 2017: Bollywood Actress Poonam Pandey, Urvashi Rautela Celebrate the Ganesh Festival; See Pics
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada