For Quick Alerts
  ALLOW NOTIFICATIONS  
  For Daily Alerts

  ಸೆಪ್ಟೆಂಬರ್‌ ಮದುವೆ, ನವೆಂಬರ್‌ನಲ್ಲಿ ಗರ್ಭಿಣಿಯಂತೆ, ಪೂನಂ ಪಾಂಡೆ ಏನಂದ್ರು?

  |

  ಬಾಲಿವುಡ್ ಇಂಡಸ್ಟ್ರಿಯ ಹಾಟ್‌ಬಾಂಬ್, ಮಾಡೆಲ್ ಪೂನಂ ಪಾಂಡೆ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ. ಸ್ಯಾಮ್ ಬಾಂಬೆ ಜೊತೆ ವಿವಾಹ ಮಾಡಿಕೊಂಡು ಸರ್ಪ್ರೈಸ್ ನೀಡಿದ್ದ ಪೂನಂ, ಎರಡೇ ವಾರದಲ್ಲಿ ಕಿತ್ತಾಡಿಕೊಂಡು ವಿಚ್ಛೇದನ ನೀಡಲು ಮುಂದಾಗಿದ್ದರು.

  ಬಳಿಕ ಇಬ್ಬರ ನಡುವೆ ಕಾಂಪ್ರುಮೈಸ್ ಸಹ ಆಯಿತು ಎಂಬ ಸುದ್ದಿಗಳು ವರದಿಯಾಗಿದ್ದರು. ಸೆಪ್ಟೆಂಬರ್‌ ತಿಂಗಳಲ್ಲಿ ಸಪ್ತಪದಿ ತುಳಿದಿದ್ದ ಪೂನಂ ಪಾಂಡೆ ಈಗ ಗರ್ಭಿಣಿಯಾಗಿದ್ದಾರಂತೆ. ಪೂನಂ ಗರ್ಭಿಣಿ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಸೆಪ್ಟೆಂಬರ್‌ ಮದುವೆ, ನವೆಂಬರ್‌ನಲ್ಲಿ ಗರ್ಭಿಣಿನಾ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಸ್ವತಃ ಪೂನಂ ಪಾಂಡೆ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ....

  ಮದುವೆಯಾದ ಎರಡೇ ವಾರಕ್ಕೆ ಪತಿ ವಿರುದ್ಧ ಪೂನಂ ಪಾಂಡೆ ದೂರು, ಬಂಧನಮದುವೆಯಾದ ಎರಡೇ ವಾರಕ್ಕೆ ಪತಿ ವಿರುದ್ಧ ಪೂನಂ ಪಾಂಡೆ ದೂರು, ಬಂಧನ

  ಚೊಚ್ಚಲ ಮಗು ನಿರೀಕ್ಷೆಯಲ್ಲಿ ಪೂನಂ ಪಾಂಡೆ?

  ಚೊಚ್ಚಲ ಮಗು ನಿರೀಕ್ಷೆಯಲ್ಲಿ ಪೂನಂ ಪಾಂಡೆ?

  ಪೂನಂ ಪಾಂಡೆ ಮತ್ತು ಸ್ಯಾಮ್ ಬಾಂಬೆ ಚೊಚ್ಚಲ ಮಗುವಿಗೆ ಜನ್ಮ ಕೊಡ್ತಿದ್ದಾರೆ ಎಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಈ ಕುರಿತು ವೈದ್ಯರು ಖಚಿತಪಡಿಸಿದ್ದಾರೆ ಎನ್ನಲಾಗಿದೆ. ಅಧಿಕೃತ ಪ್ರಕಟಣೆ ಆಗಿಲ್ಲ.

  ಸ್ಪಷ್ಟನೆ ನೀಡಿದ ಪೂನಂ ಪಾಂಡೆ

  ಸ್ಪಷ್ಟನೆ ನೀಡಿದ ಪೂನಂ ಪಾಂಡೆ

  ಪೂನಂ ಪಾಂಡೆ ಗರ್ಭಿಣಿ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಪಾಟ್‌ಬಾಯ್‌ ವೆಬ್‌ಸೈಟ್‌ಗೆ ಪ್ರತಿಕ್ರಿಯೆ ನೀಡಿದ್ದು, ''ಈ ಸುದ್ದಿ ಏನಾದರೂ ನಿಜವಾಗಿದ್ದರೆ, ನಾನು ನನ್ನನ್ನು ದೃಢಪಡಿಸುತ್ತೇನೆ'' ಎಂದಿದ್ದಾರೆ.

  ಗೋವಾದಲ್ಲಿ ಅಸಭ್ಯ ವಿಡಿಯೋ ಚಿತ್ರೀಕರಿಸಿದ ಪೂನಂ ಪಾಂಡೆ ಅರೆಸ್ಟ್ಗೋವಾದಲ್ಲಿ ಅಸಭ್ಯ ವಿಡಿಯೋ ಚಿತ್ರೀಕರಿಸಿದ ಪೂನಂ ಪಾಂಡೆ ಅರೆಸ್ಟ್

  ಗಂಡನ ಜೊತೆ ಜಗಳ ಮಾಡಿಕೊಂಡಿದ್ದ ನಟಿ

  ಗಂಡನ ಜೊತೆ ಜಗಳ ಮಾಡಿಕೊಂಡಿದ್ದ ನಟಿ

  ಮದುವೆಯಾಗಿ ಎರಡನೇ ವಾರದಲ್ಲಿ ಪೂನಂ ಪಾಂಡೆ ಪತಿ ಸ್ಯಾಮ್ ಬಾಂಬೆ ಜೊತೆ ಕಿತ್ತಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ನನ್ನ ಗಂಡ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ಕೇಸ್ ದಾಖಲಿಸಿದ್ದರು. ಪೂನಂ ದೂರಿನ ಹಿನ್ನೆಲೆ ಸ್ಯಾಮ್ ಬಾಂಬೆ ಅವರನ್ನು ಪೊಲೀಸರು ಬಂಧಿಸಿದ್ದರು. ನಂತರ ಜಾಮೀನು ಪಡೆದು ಹೊರಬಂದಿದ್ದರು. ಇದೆಲ್ಲ ಆದ ಕೆಲವು ದಿನಗಳ ಬಳಿಕ ಪೂನಂ ಮತ್ತು ಸ್ಯಾಮ್ ಮತ್ತೆ ಒಂದಾಗಿದ್ದಾರೆ ಎಂದು ಹೇಳಲಾಯಿತು.

  ಗೋವಾದಲ್ಲಿ ಅಶ್ಲೀಲ ವಿಡಿಯೋ

  ಗೋವಾದಲ್ಲಿ ಅಶ್ಲೀಲ ವಿಡಿಯೋ

  ಗೋವಾದ ಕಾನಕೋಣದ ಚಾಪೋಲಿ ಡ್ಯಾಮ್ ಬಳಿ ಅಸಭ್ಯವಾಗಿ ವಿಡಿಯೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ನಟಿ ಪೂನಂ ಹಂಚಿಕೊಂಡಿದ್ದರು. ಈ ಸಂಬಂಧ ಗೋವಾ ಫಾರ್ವರ್ಡ್ ಪಾರ್ಟಿ ದೂರಿನ ಹಿನ್ನೆಲೆ ಎಫ್‌ಐಆರ್ ದಾಖಲಿಸಲಾಗಿತ್ತು. ಪೂನಂ ಪಾಂಡೆಯನ್ನು ಅರೆಸ್ಟ್ ಸಹ ಮಾಡಲಾಗಿತ್ತು.

  English summary
  Bollywood model Poonam Pandey is Pregnant with his husband sam bombay says report. but, actress denied this news.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X