ಕೇರಳ ಜನತೆಯ ನೆರವಿಗೆ ಬಂದ ನಟಿ ಪೂನಂ ಪಾಂಡೆ

By Naveen

ಭೀಕರ ಮಳೆ, ಪ್ರವಾಹಕ್ಕೆ ದೇವರನಾಡು ಕೇರಳ ನಲುಗಿ ಹೋಗಿದೆ. ಎಷ್ಟೋ ಜನರು ಪ್ರಾಣ, ಎಷ್ಟೋ ಜನರು ಮನೆ, ಆಸ್ತಿ ಎಲ್ಲವನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ದುಖಃದಲ್ಲಿ ಇರುವ ಈ ಜನತೆಗೆ ಈಗ ನಟಿ ಪೂನಂ ಪಾಂಡೆ ನೆರವಾಗಿದ್ದಾರೆ.

ಈಗಾಗಲೇ ಕನ್ನಡದ ಕೆಲ ನಟರ ಜೊತೆಗೆ ಇತರ ಚಿತ್ರರಂಗದ ಕಲಾವಿದರು ಸಹ ಕೇರಳ ಪುನರ್ ನಿರ್ಮಾಣಕ್ಕೆ ಹಣ ಸಹಾಯ ಮಾಡಿದ್ದರು. ಈಗ ನಟಿ ಪೂನಂ ಪಾಂಡೆ ಕೂಡ ತನ್ನ ಒಂದು ಸಿನಿಮಾದ ಸಂಭಾವನೆಯನ್ನು ಕೇರಳ ಜನತೆಗೆ ನೀಡಿದ್ದಾರೆ. ಆದರೆ, ಆ ಚಿತ್ರಕ್ಕೆ ಅವರು ತೆಗೆದುಕೊಂಡಿದ್ದ ಸಂಭಾವನೆಯ ಮೊತ್ತ ತಿಳಿದಿಲ್ಲ.

poonam pandey donates her Lady Gabbar Singh movie payment to kerala flood

ಸದ್ಯ ಪೂನಂ ಪಾಂಡೆಗೆ ಸಿನಿಮಾ ಅವಕಾಶಗಳು ಕಡಿಮೆ ಇವೆ. ಈಗ ಅವರು 'ಲೇಡಿ ಗಬ್ಬರ್ ಸಿಂಗ್' ಎನ್ನುವ ತೆಲುಗು ಸಿನಿಮಾ ಮಾಡುತ್ತಿದ್ದಾರೆ. ಹೀಗಿದ್ದರೂ ಈ ಸಿನಿಮಾದ ನಟನೆಗಾಗಿ ಅವರು ತೆಗೆದುಕೊಂಡಿದ್ದ ಪೂರ್ಣ ಸಂಭಾವನೆಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ. ಪೂನಂ ಮಾಡಿದ ಈ ಕೆಲಸವನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ.

poonam pandey donates her Lady Gabbar Singh movie payment to kerala flood

ಅಂದಹಾಗೆ, ಇತ್ತೀಚಿಗೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಕೂಡ ಕೇರಳ ಜನತೆಯ ನೆರವಿಗೆ 5 ಕೋಟಿ ಹಣವನ್ನು ನೀಡಿದ್ದರು.

More from Filmibeat

English summary
Bollywood actress Poonam Pandey donates her 'Lady Gabbar Singh' movie payment to kerala flood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X