ಪೂನಂ ಪಾಂಡೆ ಮೊದಲ ದೃಶ್ಯ ಬೆಡ್ ರೂಮಲ್ಲಿ

By Prasad

ನಮ್ಮ ಭಾರತದಲ್ಲಿ ಯಾವುದೇ ನಟ ಆಗಲಿ ನಟಿ ಆಗಲಿ, ಮುಹೂರ್ತದಂದು ತಮ್ಮ ಮೊದಲ ದೃಶ್ಯವನ್ನು ದೇವರ ಸನ್ನಿಧಿಯಲ್ಲೋ, ಕುಟುಂಬದ ಸಾನ್ನಿಧ್ಯದಲ್ಲೋ ಮಾಡಿಕೊಳ್ಳಲು ಬಯಸುತ್ತಾರೆ. ಕ್ಲಾಪ್ ಮಾಡಿ ಆಕ್ಷನ್ ಹೇಳಿದರೆ ಸಾಕು ದೇವರಿಗೆ ಕೈಮುಗಿಯುವ ಅಥವಾ ಒಂದು ಸ್ಮೈಲ್ ನೀಡಿದರೆ ಅಲ್ಲಿಗೆ ಮೊದಲ ಶಾಟ್ ಮುಕ್ತಾಯವಾಗುತ್ತದೆ. ಇಷ್ಟು ಮಾಡುವ ಹೊತ್ತಿಗೆ ಅನೇಕರಿಗೆ ಬೆವರಿನ ಸಾಲುಗಳು ಕೂಡ ಬಂದಿರುತ್ತವೆ.

ಆದರೆ, ಇಲ್ಲೊಬ್ಬ ಸ್ವಯಂಘೋಷಿತ ಮಹಾನ್ ತಾರೆಯಿದ್ದಾರೆ. ಅವರ ಮೊತ್ತಮೊದಲನೇ ಚಿತ್ರದ ಮುಹೂರ್ತದ ಶಾಟ್ ಯಾವುದು ಗೊತ್ತಾ? ನೇರವಾಗಿ ಮಲಗುವ ಕೋಣೆ ಒಳಹೊಕ್ಕು, ಲೈಟ್ಸ್ ಆನ್ ಮಾಡಿ ಆಕ್ಷನ್ ಹೇಳಿ ಬೆಡ್ ರೂಮ್ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಆ ಮಹಾನ್ ತಾರೆ ಮತ್ತಾರೂ ಅಲ್ಲ, ಪೈಪೋಟಿಗೆ ಬಿದ್ದವರಂತೆ ಬಟ್ಟೆ ಬಿಚ್ಚಲು ಸಿದ್ಧರಾಗಿರುವವ ನಟಿಯರಲ್ಲಿ ಅಗ್ರಸ್ಥಾನದಲ್ಲಿರುವ ಪೂನಂ ಪಾಂಡೆ. [ಗ್ಯಾಲರಿ]

ಓ ಮೈ ಟ್ವೀಟ್ ಹಾರ್ಟ್ಸ್!

ಓ ಮೈ ಟ್ವೀಟ್ ಹಾರ್ಟ್ಸ್!

21 ವರ್ಷದ ಸುಂದರಿ ಪೂನಂ ಸ್ವತಃ ತನ್ನ ಟ್ವಿಟ್ಟರ್ ಖಾತೆಯಲ್ಲಿ, "ಟ್ವೀಟ್ ಹಾರ್ಟ್ಸ್, ನನ್ನ ಚೊಚ್ಚಲು ಚಿತ್ರ 'ನಶಾ'ಗಾಗಿ ಮುಹೂರ್ತದ ಮೊದಲ ದೃಶ್ಯವನ್ನು ಬೆಡ್ ರೂಮಿನಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ" ಎಂದು ಬಿಂದಾಸ್ ಆಗಿ ಹೇಳಿಕೊಂಡಿದ್ದಾಳೆ. ಕುವತ್ತು ಅಂದ್ರೆ ಇದೇ ಇರಬೇಕು. ಒಂದು ಚಿತ್ರವನ್ನು ಟ್ವಿಟ್ಟರಲ್ಲಿಯೂ ಹಾಕಿದ್ದಾಳೆ. (ಮುಂದೆ ಕ್ಲಿಕ್ಕಿಸಿ)

ರೋಲ್ ಗಿಟ್ಟಿಸಬೇಕಿದ್ದರೆ...

ರೋಲ್ ಗಿಟ್ಟಿಸಬೇಕಿದ್ದರೆ...

ಮತ್ತೇನು ಟ್ವೀಟ್ ಮಾಡಿದ್ದಾಳೆ ಗೊತ್ತಾ? "ಈಗಿನ ಕಾಲದಲ್ಲಿ ಚಿತ್ರದಲ್ಲಿ ರೋಲ್ ಗಿಟ್ಟಿಸಿಕೊಳ್ಳಬೇಕಿದ್ದರೆ ಹಾಸಿಗೆ ಹಂಚಿಕೊಳ್ಳಲು ನಟಿಯರು ಸಿದ್ಧರಾಗಿರಬೇಕು ಎಂದು ಕೇಳಿದ್ದೇನೆ. ಆದರೆ, ಇಲ್ಲಿ ನನ್ನ ಮೊದಲ ಚಿತ್ರದ ಮುಹೂರ್ತದ ದೃಶ್ಯಕ್ಕಾಗಿ ಬೆಡ್ ಮೇಲೆಯೇ ಇಳಿದಿದ್ದೇನೆ" ಎಂದು ಕಣ್ಣುಮಿಟುಕಿಸಿ ಪಡ್ಡೆಗಳು ಹೃದಯದ ಬಡಿತದ ಜೊತೆ ಮುಖ ಕೆಂಪೇರುವಂತೆ ಮಾಡಿದ್ದಾಳೆ ಪೂನಂ ಪಾಂಡೆ. (ಮುಂದೆ ಕ್ಲಿಕ್ಕಿಸಿ)

ಬೆಡ್ರೂಮಿನ ದೃಶ್ಯ ಇಲ್ಲಿದೆ ನೋಡಿ

ಬೆಡ್ರೂಮಿನ ದೃಶ್ಯ ಇಲ್ಲಿದೆ ನೋಡಿ

ಆ ದೃಶ್ಯದಲ್ಲಿ ಕೂಡ ಬೆತ್ತಲಾಗಿರುವ ಬೋಲ್ಡ್ ಮತ್ತು ತಕ್ಕಮಟ್ಟಿಗೆ ಬ್ಯೂಟಿಫುಲ್ ನಟಿ ಪೂನಂ ಪಾಂಡೆ, ತಮ್ಮ ಮಾನ ಮುಚ್ಚಿಕೊಳ್ಳಲು ಬೆಡ್ ಶೀಟನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಜಲಪಾತದಂತೆ ಎದೆಯ ಮೇಲೆ ಇಳಿಬಿಟ್ಟಿರುವ ಕೇಶರಾಶಿ, ಕಾಮುಕತೆಯಿಂದ ಕೂಡಿದ ನೋಟದಲ್ಲಿ ಪೂನಂ ಕಂಗೊಳಿಸುತ್ತಿದ್ದಾರೆ. ಈ ದೃಶ್ಯ ಚಿತ್ರೀಕರಿಸಿಕೊಳ್ಳಲು ಪೂನಂ ಎಷ್ಟು ಟೇಕ್ ತೆಗೆದುಕೊಂಡರೋ?

ಯಾವ ಮಟ್ಟಕ್ಕೆ ಹೋಗಲೂ ಸಿದ್ಧ

ಯಾವ ಮಟ್ಟಕ್ಕೆ ಹೋಗಲೂ ಸಿದ್ಧ

ಪ್ರಸಿದ್ಧಿ ಮತ್ತು ಹಣ ಗಳಿಸಲು ಯಾವ ಮಟ್ಟಕ್ಕೆ ಹೋಗಲು ಕೂಡ ಸಿದ್ಧಳಿರುವ ಪೂನಂ ಪಾಂಡೆಯ ಚೊಚ್ಚಲ ಸಿನೆಮಾವನ್ನು ನಿರ್ದೇಶಿಸುತ್ತಿರುವವರು 'ಜಿಸ್ಮ್' ಖ್ಯಾತಿಯ ಅಮಿತ್ ಸಕ್ಸೇನಾ. ಜಿಸ್ಮ್ ಚಿತ್ರದಲ್ಲಿ ಮಾಜಿ ಲಿವ್-ಇನ್-ಪಾರ್ಟನರ್‌ಗಳಾದ ಜಾನ್ ಅಬ್ರಹಾಂ ಮತ್ತು ಬಿಪಾಶಾ ಬಸು ನಟಿಸಿದ್ದರು.

ಬಿರುಗಾಳಿ ಎಬ್ಬಿಸಿರುವ ಪೋಸ್ಟರುಗಳು

ಬಿರುಗಾಳಿ ಎಬ್ಬಿಸಿರುವ ಪೋಸ್ಟರುಗಳು

'ನಶಾ' ಚಿತ್ರದ ಪೋಸ್ಟರ್‌ಗಳು ಈಗಾಗಲೆ 'ಸ್ಯಾಂಡಿ'ಗಿಂತಲೂ ಬಲವಾದ ಬಿರುಗಾಳಿಯನ್ನೆಬ್ಬಿಸಿವೆ. ಪೋಸ್ಟರುಗಳೇ ಹೀಗಿರಬೇಕಾದರೆ ಇನ್ನು ಚಿತ್ರದಲ್ಲಿ ಈಕೆ ಹೇಗೆ ನಟಿಸಬಹುದು ಎಂದು ಕುತೂಲಹದಿಂದ ಚಿತ್ರಪ್ರೇಮಿಗಳು ನೋಡುತ್ತಿದ್ದಾರೆ. ಆಕೆಯ ದೇಹವನ್ನೇ ಬಳಸಿ ಇಂಗ್ಲಿಷಿನಲ್ಲಿ ನಶಾ ಎಂದು ಬರೆದ ಪೋಸ್ಟರ್ ಕ್ರಿಯಾಶೀಲತೆಗೆ ಹಿಡಿದ ಕನ್ನಡಿಯಾಗಿದೆ.

ಮಾತು ಉಳಿಸಿಕೊಂಡಿದ್ದ ಪೂನಂ

ಮಾತು ಉಳಿಸಿಕೊಂಡಿದ್ದ ಪೂನಂ

ಸುದ್ದಿಯಲ್ಲಿರಲು ಏನು ಬೇಕಾದರೂ ಮಾಡಬಲ್ಲೆ ಎಂದು ಹೇಳಿದ್ದ ಪೂನಂ, ಭಾರತ ವಿಶ್ವಕಪ್ ಕ್ರಿಕೆಟ್ ಗೆದ್ದರೆ ಆಟಗಾರರೆದಿರು ಸಂಪೂರ್ಣ ಬೆತ್ತಲಾಗುವುದಾಗಿ ಸಾರಿದ್ದರು. ಆದರೆ, ಅವರಿಗೆ ಅನುಮತಿ ನೀಡಿರಲಿಲ್ಲ. ಮುಂದೆ ಶಾರುಖ್ ಖಾನ್ ತಂಡ ಐಪಿಎಲ್ ಗೆದ್ದರೆ ಮೈಮೇಲೆ ನೂಲೆಳೆಯೂ ಬಟ್ಟೆ ಇಲ್ಲದಂತೆ ನಿಲ್ಲುತ್ತೇನೆ ಎಂದಿದ್ದ ಪೂನಂ, ಕೆಕೆಆರ್ ಐಪಿಎಲ್ ಗೆದ್ದ ಮೇಲೆ ತಮ್ಮ ಮಾತು ಉಳಿಸಿಕೊಂಡಿದ್ದರು ಮತ್ತು ನಗ್ನವಾದ ದೇಹವನ್ನು ಟ್ವಿಟ್ಟರಲ್ಲಿ ಹರಿಯಬಿಟ್ಟಿದ್ದರು.

More from Filmibeat

English summary
The bold and beautiful actress Poonam Panday has crated history by shooting her first scene for her first movie Nasha in the bedroom. Poonam Pandey's tweet : Gave first movie shot of my career for the film Nasha and true to my promise, started first scene in bed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X