For Quick Alerts
  ALLOW NOTIFICATIONS  
  For Daily Alerts

  ಲವ್ವು, ಮದ್ವೆ, ಗಲಾಟೆ.....ಈಗ ವಿಚ್ಛೇದನಕ್ಕೆ ಮುಂದಾದ ಪೂನಂ ಪಾಂಡೆ

  |

  ಬಾಲಿವುಡ್ ಇಂಡಸ್ಟ್ರಿಯ ಹಾಟ್‌ಬಾಂಬ್ ಪೂನಂ ಪಾಂಡೆ ಮದುವೆ ಆಗಿ ಒಂದೇ ವಾರಕ್ಕೆ ಮದುವೆ ಮುರಿದುಕೊಳ್ಳಲು ನಿರ್ಧರಿಸಿದ್ದಾರೆ. ವರ್ಷಗಳ ಕಾಲ ಪ್ರೀತಿಸಿದರು, ಆ ಪ್ರೀತಿಯನ್ನು ಮದುವೆವರೆಗೂ ತಂದರು. ಅಂತಿಮವಾಗಿ ದಾಂಪತ್ಯ ಜೀವನ ಸಹ ಆರಂಭಿಸಿದರು. ಆದ್ರೆ, ಮದ್ವೆ ಆಗಿ ಕೆಲವೇ ದಿನದಲ್ಲಿ ಹೊಡೆದಾಡಿಕೊಂಡು ದೂರ ದೂರ ಆಗಿದ್ದಾರೆ.

  'ನನ್ನ ಪತಿ ಸ್ಯಾಂ ಬಾಂಬೆ ನನ್ನ ಮೇಲೆ ದೈಹಿಕ ಹಲ್ಲೆ ಮಾಡಿದ್ದಾನೆ, ಲೈಂಗಿಕ ಕಿರುಕುಳ ನೀಡಿದ್ದಾನೆ' ಎಂದು ಆರೋಪಿಸಿ ಪೂನಂ ಪಾಂಡೆ ಗೋವಾದ ಕೋಕೊನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೂನಂ ದೂರಿನ ಅನ್ವಯ ಸ್ಯಾಂ ಬಾಂಬೆಯನ್ನು ಅರೆಸ್ಟ್ ಸಹ ಮಾಡಲಾಗಿತ್ತು. ಬಳಿಕ, ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಇದೀಗ, ಪೂನಂ ಪಾಂಡೆ ಪತಿ ಸ್ಯಾಂ ಜೊತೆಗಿನ ದಾಂಪತ್ಯವನ್ನು ಮುರಿದುಕೊಳ್ಳಲು ತೀರ್ಮಾನಿಸಿದ್ದಾರೆ. ಮುಂದೆ ಓದಿ...

  ಸಂಬಂಧ ಕಡಿದುಕೊಳ್ಳಲು ನಿರ್ಧಾರ

  ಸಂಬಂಧ ಕಡಿದುಕೊಳ್ಳಲು ನಿರ್ಧಾರ

  ಸ್ಯಾಂ ಬಾಂಬೆ ಜೊತೆಗಿನ ಕಲಹದ ಬಗ್ಗೆ ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿರುವ ಪೂನಂ ಪಾಂಡೆ, ಸ್ಯಾಂ ಜೊತೆ ದಾಂಪತ್ಯ ಜೀವನವನ್ನು ಮುಂದುವರಿಸದಿರಲು ತೀರ್ಮಾನಿಸಿದ್ದಾರೆ. ''ಒಳ್ಳೆಯ ದಿನಗಳಲ್ಲಿ, ನಾವು ಅದ್ಭುತ ದಂಪತಿಗಳಾಗಿದ್ದೇವೆ, ಆದರೆ ವಿಷಯಗಳು ಕೊಳಕುಗೊಂಡಾಗ, ಅದರ ಮುಖವೇ ಬೇರೆ ಇರುತ್ತೆ. ದುರದೃಷ್ಟವಶಾತ್, ಇದು ಬುದ್ಧಿವಂತ ನಿರ್ಧಾರವಾಗಿರಲಿಲ್ಲ. 'ಪ್ರೀತಿ ಕುರುಡು' ಎಂಬುದಕ್ಕೆ ನಾನು ಅತ್ಯುತ್ತಮ ಉದಾಹರಣೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ಸ್ನೇಹಿತನ ಜೊತೆ ಹೊಸ ಜೀವನ ಆರಂಭಿಸಿದ 'ಹಾಟ್‌ಬಾಂಬ್' ಪೂನಂ ಪಾಂಡೆಸ್ನೇಹಿತನ ಜೊತೆ ಹೊಸ ಜೀವನ ಆರಂಭಿಸಿದ 'ಹಾಟ್‌ಬಾಂಬ್' ಪೂನಂ ಪಾಂಡೆ

  ಗೋವಾದಲ್ಲಿ ನಡೆದಿದ್ದೇನು?

  ಗೋವಾದಲ್ಲಿ ನಡೆದಿದ್ದೇನು?

  "ಸ್ಯಾಮ್ ಮತ್ತು ನಾನು ಒಂದು ವಿಚಾರಕ್ಕಾಗಿ ವಾದ ಮಾಡಿದೆವು, ಅದು ಉಲ್ಬಣಗೊಂಡಿತು. ಸ್ಯಾಂ ನನ್ನನ್ನು ಹೊಡೆಯಲು ಪ್ರಾರಂಭಿಸಿದನು. ನನ್ನನ್ನು ಉಸಿರುಗಟ್ಟಿಸಿದನು ಮತ್ತು ನಾನು ಸತ್ತೇ ಹೋಗುತ್ತೇನೆ ಎಂದು ಭಾವಿಸಿದೆ. ನನ್ನ ಮುಖಕ್ಕೆ ಬಲವಾಗಿ ಹೊಡೆದ, ನನ್ನ ಕೂದಲನ್ನು ಎಳೆದಾಡಿದ. ನನ್ನ ದೇಹದ ಮೇಲೆ ಮಂಡಿಯೂರಿ, ನನ್ನನ್ನು ಮೇಲೆ ಹಲ್ಲೆ ಮಾಡಿದ. ಕಷ್ಟಪಟ್ಟು ನಾನು ಆ ಕೋಣೆಯಿಂದ ಹೊರಬಂದೆ. ಹೋಟೆಲ್ ಸಿಬ್ಬಂದಿ ಪೊಲೀಸರನ್ನು ಕರೆದರು, ಅವನನ್ನು ಕರೆದೊಯ್ದರು. ನಾನು ಅವನ ವಿರುದ್ಧ ದೂರು ದಾಖಲಿಸಿದೆ'' ಎಂದು ನಟಿ ಹೇಳಿಕೊಂಡಿದ್ದಾರೆ.

  ನಾನು ಒಂಟಿಯಾಗಿರಲು ಇಷ್ಟಪಡುತ್ತೇಮನೆ

  ನಾನು ಒಂಟಿಯಾಗಿರಲು ಇಷ್ಟಪಡುತ್ತೇಮನೆ

  "ಈ ಸಮಯದಲ್ಲಿ, ಅವನ ಬಳಿ ನಾನು ಮತ್ತೆ ಹಿಂತಿರುಗುವ ಬಗ್ಗೆ ಯೋಚನೆ ಸಹ ಮಾಡಲ್ಲ. ಪರಿಣಾಮದ ಬಗ್ಗೆ ಸಹ ಯೋಚಿಸದೆ ಪ್ರಾಣಿಯಂತೆ ನನ್ನನ್ನು ಹೊಡೆದನು. ನಮ್ಮ ಸಂಬಂಧವನ್ನು ಉಳಿಸುವ ಪ್ರಯತ್ನದಲ್ಲಿ, ನಾನು ತುಂಬಾ ಕಷ್ಟಗಳನ್ನು ಅನುಭವಿಸಿದೆ. ನಿಂದನೀಯ ಸಂಬಂಧಕ್ಕಿಂತ ಹೆಚ್ಚಾಗಿ ಒಬ್ಬಂಟಿಯಾಗಿರಲು ನಾನು ಬಯಸುತ್ತೇನೆ. ನಮ್ಮ ಮದುವೆಯನ್ನು ಕೊನೆಗೊಳಿಸಲು ನಾನು ನಿರ್ಧರಿಸಿದ್ದೇನೆ. ಇದು ನಾನು ಸಾಗುವ ಸಮಯ'' ಎಂದು ಪೂನಂ ತಿಳಿಸಿದ್ದಾರೆ.

  ಮದುವೆಯಾದ ಎರಡೇ ವಾರಕ್ಕೆ ಪತಿ ವಿರುದ್ಧ ಪೂನಂ ಪಾಂಡೆ ದೂರು, ಬಂಧನಮದುವೆಯಾದ ಎರಡೇ ವಾರಕ್ಕೆ ಪತಿ ವಿರುದ್ಧ ಪೂನಂ ಪಾಂಡೆ ದೂರು, ಬಂಧನ

  ಕನ್ನಡದ ಚಿತ್ರರಂಗಕ್ಕೆ ಮತ್ತೊಂದು ಆಘಾತ | Filmibeat Kannada
  ಜಾಮೀನು ಪಡೆದಿರುವ ಸ್ಯಾಂ

  ಜಾಮೀನು ಪಡೆದಿರುವ ಸ್ಯಾಂ

  ಪತ್ನಿಯ ಮೇಲೆ ಹಲ್ಲೆ ಮತ್ತು ಕಿರುಕುಳ ಸಂಬಂಧ ಬಂಧನವಾಗಿದ್ದ ಸ್ಯಾಂಗೆ ಜಾಮೀನು ಸಿಕ್ಕಿದೆ. 20000 ಸಾವಿರ ಬಾಂಡ್, ಷರತ್ತು ವಿಧಿಸಿ ನೀಡಿ ಬಿಡುಗಡೆಗೊಳಿಸಲಾಗಿದೆ. ನಾಲ್ಕು ದಿನಗಳ ಕಾಲ ಪೊಲೀಸ್ ಠಾಣೆಯಲ್ಲಿ ಸಹಿ ಮಾಡಬೇಕು ಎಂದು ಸಹ ಸೂಚಿಸಲಾಗಿದೆ.

  English summary
  Poonam pandey says 'she has decided to end her marriage after Sam bombey beat her 'Like An Animal'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X