ನಾನು ಬದುಕಿದ್ದೇನೆ ಎಂದ ಪೂನಂ ಪಾಂಡೆ ; ಕ್ಯಾಕರಿಸಿ ಉಗಿದ ಜನ

ಪೂನಂ ಪಾಂಡೆಯಂತಾ ಕೆಲವು ನಟಿಯರಿಗೆ ಕೇಸು, ಜೈಲುಗಳೇನೂ ಹೊಸದಲ್ಲ. ಜಗತ್ತನ್ನು ಯಾಮಾರಿಸಲು ಇಂಥವರು ಎಂಥಾ ಸುಳ್ಳುಗಳನ್ನೂ ಬೇಕಾದರೂ ಸೃಷ್ಟಿಸುತ್ತಾರೆ. ನಂಬಿದರೆ ನಾಮ ಅಷ್ಟೇ. ಇದು ಇನ್ನೊಮ್ಮೆ ಸಾಬೀತಾಗಿದೆ.

ಹೌದು, ತನ್ನ ಸಾವಿನ ಸುಳ್ ಸುದ್ದಿಯನ್ನ ಹಬ್ಬಿಸಿ ಇಡೀ ಭಾರತದ ಗಮನವನ್ನ ತನ್ನತ್ತ ಸೆಳೆದಿದ್ದ ಪೂನಂ ಪಾಂಡೆ, ಇದೀಗ ಕಿಸಕ್ಕನೆ ಎದ್ದು ಬಂದಿದ್ದಾಳೆ . ಕ್ಷಮಿಸಿ ನಾನು ಬದುಕಿದ್ದೇನೆ, ಗರ್ಭಕೋಶ ಕಂಠ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಬೇಕಿತ್ತು. ಈ ಕಾರಣಕ್ಕೆ ಇಷ್ಟೆಲ್ಲ ಮಾಡಬೇಕಾಯಿತು ಎಂದು ಪುಂಗಿದ್ದಾಳೆ.

Poonam Pandey Is Alive : Actress brutally trolled for tasteless gimmick

ನಿಜಾ, ಗರ್ಭ ಕೋಶ ಕಂಠ ಕ್ಯಾನ್ಸರ್‌ ನಿಜಕ್ಕೂ ಅಪಾಯಕಾರಿ. ಭಾರತ ದೇಶದಲ್ಲಿ ಪ್ರತಿ ವರ್ಷ 1 ಲಕ್ಷದ 30 ಸಾವಿರ ಮಹಿಳೆಯರಲ್ಲಿ ಗರ್ಭ ಕಂಠ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಈ ಪೈಕಿ 75 ಸಾವಿರ ಮಹಿಳೆಯರು ಪ್ರತಿ ವರ್ಷ ಭಾರತದಲ್ಲಿ ಜೀವ ಬಿಡುತ್ತಿದ್ದಾರೆ. ಇಂಥಹ ಕಾಯಿಲೆಯ ಬಗ್ಗೆ ಜನಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ನಿಜವಾಗಿಯೂ ಇದೆ. ಆದರೆ ಅದಕ್ಕೆ ಪೂನಂ ಪಾಂಡೆ ಆಯ್ಕೆ ಮಾಡಿಕೊಂಡ ದಾರಿ ನಿಜಕ್ಕೂ ಖಂಡನೀಯ

ಹೀಗಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಕೆರಳಿ ಕೆಂಡವಾಗಿರುವ ಅನೇಕರು, ಪೂನಂ ಪಾಂಡೆಯನ್ನ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಳ್ತಿದ್ದಾರೆ. ನಿಮ್ಮ ಪ್ರಚಾರದ ಹುಚ್ಚಿಗೆ ಬೇರೆಯವರ ಭಾವನೆ ಜೊತೆ ಆಟ ಆಡಬೇಡಿ ಎನ್ನುತ್ತಿದ್ದಾರೆ.

Poonam Pandey Is Alive : Actress brutally trolled for tasteless gimmick

ಗರ್ಭಕಂಠದ ಕ್ಯಾನ್ಸರ್ ಗೆ ಬಜೆಟ್ ನಲ್ಲಿ ಅನುದಾನ

ಫೆಬ್ರುವರಿ 1 ಗುರುವಾರ ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದಲ್ಲಿರುವ 9 ರಿಂದ 14 ವರ್ಷ ವಯಸ್ಸಿನ ಬಾಲಕಿಯರಿಗೆ ಕಡಿಮೆ ದರದಲ್ಲಿ ಗರ್ಭ ಕಂಠ ಕ್ಯಾನ್ಸರ್ ನಿರೋಧಕ ಲಸಿಕೆಯನ್ನ ನೀಡೋದಾಗಿ ಘೋಷಿಸಿದ್ದರು ಕೂಡ. ಇದನ್ನೇ ಆಧಾರವಾಗಿಟ್ಟುಕೊಂಡು ಪೂನಂ ಪಾಂಡೆ ಆಡಿದ ನಾಟಕ ಇದು.

More from Filmibeat

English summary
Bollywood Actress Poonam Pandey Is Alive & Social Media Users Are Pissed Off By Her Cheap Publicity Stunt.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X