For Quick Alerts
  ALLOW NOTIFICATIONS  
  For Daily Alerts

  ನಟಿ ಶಿಲ್ಪ ಶೆಟ್ಟಿ ಪತಿಯ ವಿರುದ್ಧ ಕಾನೂನು ಹೋರಾಟಕ್ಕಿಳಿದ ಪೂನಂ ಪಾಂಡೆ

  |

  ಇತ್ತೀಚಿನ ದಿನಗಳಲ್ಲಿ ಪೂನಂ ಪಾಂಡೆ ಸದ್ದು ಸುದ್ದಿ ಇರಲಿಲ್ಲ. ಸೈಲೆಂಟ್ ಆಗಿದ್ದ ಪೂನಂ ಈಗ ಮತ್ತೆ ವೈಲೆಂಟ್ ಆಗುವ ಮೂಲಕ ಸುದ್ದಿಯಾಗಿದ್ದಾರೆ. ಹೌದು, ಪೂನಂ ಪಾಂಡೆ ಈ ಬಾರಿ ಸುದ್ದಿಯಾಗದ್ದು ಯಾವುದೋ ವಿಡಿಯೋ ಅಥವಾ ಫೋಟೋ ಮೂಲಕ ಅಂತ ಅಂದ್ಕೋಬೇಡಿ. ಈ ಹಾಟ್ ನಟಿ ಈ ಬಾರಿ ಸುದ್ದಿಯಾಗಿದ್ದು ಶಿಲ್ಪ ಶೆಟ್ಟಿ ಪತಿ ರಾಜ್ ಕುಂದ್ರ ವಿಚಾರವಾಗಿ.

  ರಾಜ್ ಕುಂದ್ರ ವಿರುದ್ದ ಎಪ್ ಐ ಆರ್ ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ ಹಿನ್ನಲೆ ಪೂನಂ ಪಾಂಡೆ ಬಾಂಬೆ ಹೈ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಕಳೆದ ವರ್ಷ ಪೂನಂ ರಾಜ್ ಕುಂದ್ರಗೆ ಸಂಬಂಧಿಸಿದ Armsprime Media ಸಂಸ್ಥೆಯೊಂದಿಗೆ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಈ ಸಂಸ್ಥೆಯಿಂದ ಬರುವ ಆದಾಯದ ಪಾಲು ಪೂನಂಗೂ ಸೇರುತ್ತಿತ್ತು.

  ಪಾಕ್ ಜಾಹೀರಾತಿಗೆ ಕಪಾಳ ಮೋಕ್ಷ ಮಾಡಿದಂತೆ ತಿರುಗೇಟು ಕೊಟ್ಟ ಪೂನಂ ಪಾಂಡೆಪಾಕ್ ಜಾಹೀರಾತಿಗೆ ಕಪಾಳ ಮೋಕ್ಷ ಮಾಡಿದಂತೆ ತಿರುಗೇಟು ಕೊಟ್ಟ ಪೂನಂ ಪಾಂಡೆ

  ಆದರೆ ಈ ಆದಾಯ ಹಂಚಿಕೆ ವಿಚಾರದಲ್ಲಿ ವ್ಯತ್ಯಾಸವಾಗಿದೆ ಎಂದು ಆರೋಪ ಮಾಡಿ ಆ ಸಂಸ್ಥೆಯಿಂದ ಪೂನಂ ಹೊರ ಬಂದಿದ್ದಾರೆ. ಒಪ್ಪಂದದಿಂದ ಹೊರ ಬಂದ ಕೂಡಲೆ ಪೂನಂ ಖಾಸಗಿ ಫೋನ್ ಗೆ ಕರೆಗಳು ಬರಲು ಪ್ರಾರಂವಾಗಿತ್ತಂತೆ. ಈ ಬಗ್ಗೆ ಪೂನಂ ಪೊಲೀಸರಿಗೆ ದೂರು ನೀಡಿದ್ದಾರಂತೆ. ಆದರೆ ರಾಜ್ ಕುಂದ್ರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರಂತೆ.

  ಹಾಗಾಗಿ ಪೂನಂ ಈಗ ಬಾಂಬೆ ಹೈ ಕೋರ್ಟ್ ಮೆಟ್ಟಿರಲೇರಲು ನಿರ್ಧರಿಸಿದ್ದಾರೆ. ಸರಿ ಹೋಗಬಹುದು ಎಂದು ಪೂನಂ ನಾಲ್ಕು ತಿಂಗಳು ದೇಶ ಬಿಟ್ಟಿದ್ದರಂತೆ. ಅಲ್ಲದೆ ಫೋನ್ ನಂಬರ್ ಕೂಡ ಬದಲಾಯಿಸಿದರಂತೆ. ಆದರೂ ಫೋನ್ ಕರೆಗಳು ಬರುತ್ತಿದೆ ಎಂದು ದೂರಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ ಕುಂದ್ರ ಸಹವರ್ತಿ ಸೌರಭ್ ಕುಶ್ವಾ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

  English summary
  Bollywood Actress Poonam Pandey filed case against Shilpa Shetty husband Raj Kundra. After the police refused to register case against Raj kundra she moves to Bombay high court.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X