For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಂದ್ರ ಸೆಕ್ಸ್ ರಾಕೆಟ್ ನ 'ಮಾಸ್ಟರ್ ಮೈಂಡ್'; ಪೂನಂ ಪಾಂಡೆ

  |

  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರ ಬಂಧನದ ಬಳಿಕ ಅಡಲ್ಟ್ ಸ್ಟಾರ್ ಪೂನಂ ಪಾಂಡೆ ಹೇಳಿಕೆ ವೈರಲ್ ಆಗುತ್ತಿದೆ. 2019ರಲ್ಲಿ ರಾಜ್ ಕುಂದ್ರ ವಿರುದ್ಧ ದೂರು ದಾಖಲಿಸಿದ್ದ ಪೂನಂ, ರಾಜ್ ಕುಂದ್ರರನ್ನು 'ಬ್ಲೂ ಫಿಲ್ಮ್ ದಂಧೆಯ ಮಾಸ್ಟರ್ ಮೈಂಡ್' ಎಂದು ಆರೋಪಿಸಿದ್ದರು ಎನ್ನುವ ಸುದ್ದಿ ಈಗ ಬಾಲಿವುಡ್ ನಲ್ಲಿ ವೈರಲ್ ಆಗುತ್ತಿದೆ.

  ಕಳೆದ ಒಂದು ವರ್ಷದಿಂದ ಬ್ಲೂ ಫಿಲ್ಮ್ ದಂಧೆಯ ಹಿಂದೆ ಬಿದ್ದಿದ್ದ ಮುಂಬೈ ಅಪರಾಧ ವಿಭಾಗ ದೊಡ್ಡ ಜಾಲವನ್ನು ಬೇಧಿಸಿದೆ. ಈ ಪ್ರಕರಣದಲ್ಲಿ 2 ಎಫ್ ಐ ಆರ್ ದಾಖಲಾಗಿದ್ದು, 9 ಜನರನ್ನು ಬಂಧಿಸಲಾಗಿದೆ. ಖ್ಯಾತಿಗಳಿಸಿದ ನಟಿಯರನ್ನು ಅಶ್ಲೀಲ ಚಿತ್ರೀಕರಣಕ್ಕೆ ಹೇಗೆ ಒತ್ತಾಯಪೂರ್ವಕವಾಗಿ ಬಳಸಿಕೊಳ್ಳಲಾಗುತ್ತದೆ ಎಂಬುದು ಬಹಿರಂಗವಾಗಿದೆ.

  ರಾಜ್ ಪೋರ್ನ್ ಜಗತ್ತಿನ ಮಾಸ್ಟರ್ ಮೈಂಡ್; ಪೂನಂ

  ರಾಜ್ ಪೋರ್ನ್ ಜಗತ್ತಿನ ಮಾಸ್ಟರ್ ಮೈಂಡ್; ಪೂನಂ

  ರಾಜ್ ಕುಂದ್ರ ಬಂಧನದ ಬೆನ್ನಲ್ಲೇ ಪೂನಂ ಪಾಂಡೆ ಸಖತ್ ಟ್ರೆಂಡಿಂಗ್ ನಲ್ಲಿದ್ದಾರೆ. ಮಾಡೆಲ್, ನಟಿ ಪೂನಂ ಪಾಂಡೆ 2019ರಲ್ಲಿ ರಾಜ್ ಕುಂದ್ರ ವಿರುದ್ಧ ಮಾಡಿರುವ ಗಂಭೀರ ಆರೋಪ ಈಗ ಸದ್ದು ಮಾಡುತ್ತಿದೆ. "ಇಡೀ ಭಾರತದ ಪೋರ್ನ್ ವ್ಯವಹಾರದ ಹಿಂದಿ ರಾಜ್ ಕುಂದ್ರ ಇದ್ದಾರೆ. ರಾಜ್ ಪೋರ್ನ್ ಜಗತ್ತಿನ ಮಾಸ್ಟರ್ ಮೈಂಡ್" ಎಂದು ಆರೋಪ ಮಾಡಿದ್ದರು ಎನ್ನುವ ಸುದ್ದಿಯನ್ನು ಆಂಗ್ಲ ವೆಬ್ ಪೋರ್ಟಲ್ ವರದಿ ಮಾಡಿದೆ.

  ಶಿಲ್ಪ ಶೆಟ್ಟಿ ಬಗ್ಗೆ ಪೂನಂ ಹೇಳಿದ್ದೇನು?

  ಶಿಲ್ಪ ಶೆಟ್ಟಿ ಬಗ್ಗೆ ಪೂನಂ ಹೇಳಿದ್ದೇನು?

  ಇದೀಗ ರಾಜ್ ಕುಂದ್ರ ಬಂಧನದ ಬಳಿಕ ಟೈಂ ಆಫ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿರುವ ಪೂನಂ, "ಈ ಕ್ಷಣ ನನ್ನ ಹೃದಯ ಶಿಲ್ಪಾ ಶೆಟ್ಟಿ ಮತ್ತು ಅವರ ಮಕ್ಕಳ ಕಡೆ ಹೋಗುತ್ತೆ. ಅವರಿಗೆ ಏನಾಗಿರಬಹುದು ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಈ ಅವಕಾಶವನ್ನು ನಾನು ಬಳಸಿಕೊಳ್ಳಲು ನಿರಾಕರಿಸುತ್ತೇನೆ" ಎಂದು ಹೇಳಿದ್ದಾರೆ.

  2019ರಲ್ಲಿ ರಾಜ್ ಕುಂದ್ರ ವಿರುದ್ಧ ದೂರು ದಾಖಲಿಸಿದ್ದ ಪೂನಂ

  2019ರಲ್ಲಿ ರಾಜ್ ಕುಂದ್ರ ವಿರುದ್ಧ ದೂರು ದಾಖಲಿಸಿದ್ದ ಪೂನಂ

  ಇನ್ನು" 2019ರಲ್ಲಿ ರಾಜ್ ಕುಂದ್ರ ವಿರುದ್ಧ ನಾನು ದೂರು ದಾಖಲಿಸಿದ್ದೇನೆ. ಬಾಂಬೆ ಹೈ ಕೋರ್ಟ್ ನಲ್ಲಿ ವಂಚನೆ ಮತ್ತು ಕಳ್ಳತರ ಪ್ರಕರಣ ದಾಖಲಿಸಿದ್ದೇನೆ. ಹಾಗಾಗಿ ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ" ಎಂದಿದ್ದಾರೆ.

  ರಾಜ್ ಕುಂದ್ರ ಸಂಸ್ಥೆ ಜೊತೆ ಪೂನಂ ಒಪ್ಪಂದ

  ರಾಜ್ ಕುಂದ್ರ ಸಂಸ್ಥೆ ಜೊತೆ ಪೂನಂ ಒಪ್ಪಂದ

  ಪೂನಂ ಪಾಂಡೆ, ರಾಜ್ ಕುಂದ್ರ ಅವರ ಅರ್ಮ್ಸ್ ಪ್ರೈಮ್ ಮೀಡಿಯಾ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದ ಮುಗಿದ ಬಳಿಕವೂ ರಾಜ್ ಕುಂದ್ರ ಮತ್ತು ಅವರ ಸಹಚರರು ತನ್ನ ವಿಡಿಯೋ ತುಣುಕುಗಳನ್ನು ಮತ್ತು ಸಿನಿಮಾಗಳನ್ನು ನಿರ್ದಾಕ್ಷಿಣ್ಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಪೂನಂ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದರು.

  English summary
  Poonam Pandey names Raj Kundra as the mastermind of sex rocket in India, files case in Bombay High Court.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X