Poonam Pandey : ನನ್ನ ಟೀ ಶರ್ಟ್ ಕ್ಯಾಮರಾ ಮುಂದೆ ತೆಗೆಯಬೇಕು ಅಂದ್ರೆ, ನೀವು ಹೀಗೆ ಮಾಡಬೇಕು!
ಬಾಲಿವುಡ್‌ನಲ್ಲಿ ತನ್ನ ಹೇಳಿಕೆಗಳಿಂದ ಹಾಗೂ ಬೋಲ್ಡ್‌ನೆಸ್‌ನಿಂದ ಹಲ್‌ಚಲ್ ಸೃಷ್ಟಿಸುವ ನಟಿ ಪೂನಂ ಪಾಂಡೆ. ಪ್ರಸ್ತುತ ನಟಿ ಪೂನಂ ಪಾಂಡೆ ಕಂಗನಾ ರನೌತ್ ನಡೆಸಿಕೊಡುವ ಬಹುಚರ್ಚಿತ ಹಾಗೂ ಸಾಕಷ್ಟು ಜನಪ್ರಿಯ ಹೊಸ ರಿಯಾಲಿಟಿ ಶೋ 'ಲಾಕಪ್' ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ಸ್ಪರ್ಧಿಗಳು ತಾವು ಬಹಿರಂಗಪಡಿಸಿದ ಕೆಲವು ವಿಚಾರಗಳಿಂದಾಗಿ ಸಾಕಷ್ಟು ಚರ್ಚೆಯಲ್ಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಯಾವ ಸ್ಪರ್ಧಿಯೂ ಎಲಿಮಿನೇಷನ್ ಹಂತವನ್ನು ತಲುಪುತ್ತಾರೆಯೋ ಅವರು ತಮ್ಮ ಜೀವನದಲ್ಲಿ ಈ ಹಿಂದೆ ಯಾರೊಂದಿಗೂ ಹಂಚಿಕೊಂಡಿರದಂತಹ ರಹಸ್ಯ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಎಲಿಮಿನೇಷನ್ ತಪ್ಪಿಸಿಕೊಳ್ಳಬಹುದು. ಅಲ್ಲದೆ ಎಲಿಮಿನೇಷನ್‌ನಿಂದ ಪಾರಾಗಲು ಏನಾದರೂ ಹೊಸ ಸಾಹಸವನ್ನು ಮಾಡಬಹುದು. ಎಲಿಮಿನೇಷನ್ ಝೋನ್ ಅನ್ನು ಈ ರಿಯಾಲಿಟಿ ಶೋನಲ್ಲಿ ಚಾರ್ಜ್ ಶೀಟ್ ಎಂದು ಕರೆಯುತ್ತಾರೆ.
Recommended Video

ಈ ವಾರ ಪೂನಂ ಪಾಂಡೆ ಚಾರ್ಜ್ ಶೀಟ್ ಹಂತವನ್ನು ತಲುಪಿದ್ದಾರೆ. ಈ ಹಂತದಲ್ಲಿ ಎಲಿಮಿನೇಷನ್‌ನಿಂದ ಪಾರಾಗುವ ಸಲುವಾಗಿ ತಮ್ಮ ಅಭಿಮಾನಿಗಳು ಹಾಗೂ ಪ್ರೇಕ್ಷಕರಿಗೆ ಪೂನಂ ಪಾಂಡೆ ಸರ್ಪ್ರೈಸ್ ಒಂದನ್ನು ನೀಡುವುದಾಗಿ ಹೇಳಿದ್ದಾರೆ. ಪೂನಂ ಪಾಂಡೆ ಮಾತನಾಡುತ್ತಾ, ತನ್ನನ್ನು ಈ ವಾರ ಚಾರ್ಜ್ ಶೀಟ್‌ನಿಂದ ಸೇವ್ ಮಾಡಿದರೆ ನಾನು ನಿಮಗೆ ಸರ್ಪ್ರೈಸ್ ಕೊಡುತ್ತೇನೆ. ಲೈವ್ ಶೋ ತೋರಿಸುತ್ತೇನೆ ಎಂದು ಹೇಳಿದ್ದಾರೆ. ಈ ವೇಳೆ ಉಳಿದ ಸ್ಪರ್ಧಿಗಳಾದ ಅಜ್ಮ ಮತ್ತು ಮುನಾವರ್ ಪೂನಂ ಹೇಳಿದೆಲ್ಲಾ ಸುಳ್ಳು. ಅವರು ಏನು ಮಾಡುವುದಿಲ್ಲ ಎಂದು ಸವಾಲು ಹಾಕಿದ್ದಾರೆ.

"ಪೂನಂ ಒಂದು ವೇಳೆ ನೀವು ಸರ್ಪ್ರೈಸ್ ಏನು ಎಂದು ಹೇಳಿದರೆ ಜನ ವೋಟು ಮಾಡಬಹುದು. ಇಲ್ಲದೆ ಹೋದರೆ ಹೊರಗೆ ಹೋಗಬೇಕಾಗಬಹುದು." ಎಂದು ಹೇಳಿದ್ದಾರೆ. ಆಗ ಪೂನಂಪಾಂಡೆ, "ನಾನು ಒಂದು ಸಲ ಪ್ರಾಮಿಸ್ ಮಾಡಿದರೆ ಅದನ್ನು ತಪ್ಪಿಸುವುದಿಲ್ಲ. ಯಾರ ಮಾತನ್ನೂ ಕೇಳಬೇಡಿ. ನನಗೆ ವೋಟ್ ಮಾಡಿದವರಿಗೆ ನಾನು ನನ್ನ ಶರ್ಟ್ ಬಿಚ್ಚಿ ತೋರಿಸುತ್ತೇನೆ." ಎಂದು ಬೋಲ್ಡ್ ಹೇಳಿಕೆಯೊಂದನ್ನು ನೀಡಿದ್ದಾರೆ. ಪೂನಂ ಆಡಿದ ಮಾತನ್ನು ಕೇಳಿ ಅನ್ಯ ಸ್ಪರ್ಧಿಗಳು ಶಾಕ್ ಆಗಿದ್ದಾರೆ.
ಮತ್ತೋರ್ವ ಸ್ಪರ್ಧಿ ವಿನಿತ್, ಪೂನಂ ಹೇಳಿಕೆಯ ಕುರಿತಾಗಿ ಕಾಮೆಂಟ್ ಒಂದನ್ನು ಪಾಸ್ ಮಾಡಿದ್ದಾರೆ. ವಿನಿತ್, ಪೂನಂ ಪಾಂಡೆಯ ಸರ್ಪ್ರೈಸ್ ಆಫರ್ ವಿಚಾರಕ್ಕೆ ಪ್ರತಿಕ್ರಿಯೆ ನೀಡುತ್ತಾ, "ಇಲ್ಲಿ ಮತ್ತು ಹೊರಗೆ ಅವರ ವಯಸ್ಸಿನವರು ಇದ್ದಾರೆ. ಇನ್ನು ಹೊರಗೆ ಈಗಾಗಲೇ ಅವರ ವಿಡಿಯೋಗಳನ್ನು ನೋಡಿದ್ದಾರೆ. ಇದೆಲ್ಲಾ ಜನರಿಗೆ ಹೊಸದೇನಲ್ಲ. ಜನ ವೋಟು ಮಾಡುವುದಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಹೀಗಾಗಿ ಮುಂದಿನ ವಾರದಲ್ಲಿ ಏನಾಗಲಿದೆ ಎಂಬ ಬಗ್ಗೆ ಕಾದು ನೋಡಬೇಕಿದೆ.


Click it and Unblock the Notifications











