ಜಗದೇಕ ಪೋರ್ನ್ ರಾಣಿ ಸನ್ನಿ ಹಿಂದಿಕ್ಕಿದ ಪೂನಂ
ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಸನ್ನಿ ಲಿಯೋನ್ ಹಿಂದಿ ಚಿತ್ರರಂಗದಲ್ಲಿ ತನ್ನ ಇನ್ನಿಂಗ್ಸ್ ಆರಂಭಿಸುತ್ತಿದ್ದಂತೆ ಸ್ಥಳೀಯ ಬಿಚ್ಚಮ್ಮಗಳು ಬೆಚ್ಚಿದ್ದಂತೂ ನಿಜ.
ಆದರೆ, ಈ ಪೈಕಿ ಪೂನಂ ಪಾಂಡೆ ಮಾತ್ರ ಜಾಣತನದಿಂದ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದು ವಿಶೇಷ. ಸಾಮಾಜಿಕ ಜಾಲ ತಾಣ ಬಳಕೆ ಹಾಗೂ ಅಭಿಮಾನಿಗಳಿಗೆ ಹತ್ತಿರುವಾಗುವ ವಿಷಯದಲ್ಲಿ ಸನ್ನಿ ಲಿಯೋನ್ ಅಲ್ಲದೆ ಮಲ್ಲಿಕಾ ಶೆರಾವತ್ ಹಾಗೂ ಶೆರ್ಲಿನ್ ಛೋಪ್ರಾರನ್ನು ಕೂಡಾ ಪೂನಂ ಹಿಂದೆ ಹಾಕಿದ್ದಾರೆ.
ಚಿತ್ರರಂಗದ ಅನೇಕ ಸ್ಟಾರ್ ಗಳು ತಮ್ಮ ಅಭಿಮಾನಿಗಳ ಸಂಪರ್ಕ ಹೊಂದಲು ಟ್ವಿಟ್ಟರ್, ಫೇಸ್ ಬುಕ್ ಬಳಕೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಪೂನಂ ಕೂಡಾ ಇದೇ ರೀತಿ ಟ್ವಿಟರ್ ಹಕ್ಕಿ ಹಿಂದೆ ಬಿದ್ದ ಕೆಲ ಸಮಯದಲ್ಲೇ 1 ಲಕ್ಷ ಹಿಂಬಾಲಕರು ಸಂಪಾದಿಸಿಬಿಟ್ಟಳು.
ತನ್ನ ಹಿಂಬಾಲಕರ ಸಂಖ್ಯೆ 2 ಲಕ್ಷ ದಾಟುವ ತನಕ ಸುಮ್ಮನ್ನಿದ್ದ ಪೂನಂ ತನ್ನ ಖಾತೆಯನ್ನು ಅಧಿಕೃತ ಎಂದು ಘೋಷಿಸುವಂತೆ ಟ್ವಿಟರ್ ಸ್ಥಾಪಕರಿಗೆ ಮನವಿ ಸಲ್ಲಿಸಿದಳು. ಆ ವೇಳೆಗಾಗಲೇ ಪೂನಂ ಹೆಸರಿನಲ್ಲಿ ಅನೇಕ ನಕಲಿ ಖಾತೆಗಳು ಚಾಲನೆಗೊಂಡಿದ್ದವು. ತನ್ನ ಖಾತೆಗೆ ಅಧಿಕೃತ ಮೊಹರು ಬಿದ್ದ ಮೇಲೆ ಚಿಗಿತುಕೊಂಡ ಪೂನಂ ತನ್ನ ಜನಪ್ರಿಯತೆಯನ್ನು ನಿರಂತರವಾಗಿ ವಿಸ್ತರಿಸತೊಡಗಿದಳು.
ಪೂನಂ ಈಗ ಸದ್ದಿಲ್ಲದೆ 4 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾಳೆ. ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಸನ್ನಿ ಲಿಯೋನ್ ಕೂಡಾ ಪೂನಂ ಮುಂದೆ ಸೋಲಬೇಕಾಗಿದೆ. ಹಾಗೆ ನೋಡಿದರೆ ಹಿಂದಿ ಚಿತ್ರರಂಗದಲ್ಲಿ ಪೂನಮ್ ಗಿಂತ ಸನ್ನಿ ಸೀನಿಯರ್ ಎನ್ನಬಹುದು. ಪೂನಮ್ ಅಭಿನಯದ 'ನಶಾ' ಇನ್ನೂ ತೆರೆಕಾಣಬೇಕಿದೆ. ಪೂನಮ್ ಟ್ವಿಟರ್ ಸಾಧನೆ ಮುಂದೆ ಓದಿ...

ಟ್ವಿಟರ್ ನಲ್ಲಿ ಪೂನಂ
ಪೂನಂ ಅವರಿಗೆ ಸುಮಾರು 400,540ಕ್ಕೂ ಅಧಿಕ ಹಿಂಬಾಲಕರಿದ್ದರೆ ಸನ್ನಿ ಲಿಯೋನ್ ಗೆ 405, 758 ಹಿಂಬಾಲಕರಿದ್ದಾರೆ. ಆದರೆ, ಸನ್ನಿ ಲಿಯೋನ್ , ಶೆರ್ಲಿನ್ ಛೋಪ್ರಾಗೆ ಹೋಲಿಸಿದರೆ ಪೂನಮ್ ಜನಪ್ರಿಯತೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ.

ಗಳಿಕೆಯಲ್ಲೂ ಮುಂದೆ
ನೀಲಿ ತಾರೆಯರು ಫ್ರೀಯಾಗಿ ತೋರಿಸುತ್ತಾರೆ ಜನ ಹೆಚ್ಚೆಚ್ಚು ನೋಡುತ್ತಾರೆ. ಇದರಿಂದ ಟ್ವಿಟ್ಟರ್ ಗೆ ಭರ್ಜರಿ ಲಾಭ ಎಂದು ತಿಳಿದವರಿಗೆ ಇನ್ನೊಂದು ಕುತೂಹಲದ ವಿಷಯ ಇಲ್ಲಿದೆ.
ನೀಲಿ ತಾರೆಯರು ಹೆಚ್ಚೆಚ್ಚು ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದಂತೆ, ಜಾಹೀರಾತುಗಳ ಸುರಿಮಳೆಯಾಗುತ್ತದೆ. ಜಾಹೀರಾತುಗಳಿಂದ ಬರುವ ಹಣದಲ್ಲಿ ಇಂತಿಷ್ಟು ಪಾಲು ಎಂದು ಈ ತಾರೆಗಳಿಗೆ ಸಂದಾಯವಾಗುತ್ತಿದೆ.ವರ್ಷಕ್ಕೆ ಆಕೆಗೆ ಸಂಭಾವನೆ ರೂಪದಲ್ಲಿ ರು.10 ಕೋಟಿವರೆಗೂ ಸಂದಾಯವಾಗುತ್ತದೆ ಎಂದು ಮೂಲಗಳು ಹೇಳುತ್ತವೆ.
ಪೋರ್ನ್ ಸ್ಟಾರ್
ಸನ್ನಿ ಲಿಯೋನ್ ಪೋರ್ನ್ ಸ್ಟಾರ್ ಪಟ್ಟ ಕೆಳಗಿಟ್ಟು ಬಾಲಿವುಡ್ ಗೆ ಬಂದರೆ, ಪೂನಮ್ 'ನಶಾ' ಚಿತ್ರ ಮೂಲಕ ಪೋರ್ನ್ ಸ್ಟಾರ್ ಆಗುವ ಕನಸು ಕಾಣುತ್ತಿದ್ದಾಳೆ
ನಶೆಯಲ್ಲಿ ಪೂನಮ್
ನಶಾ ಚಿತ್ರದ ಪ್ರಚಾರದಲ್ಲಿ ತೊಡಗಿರುವ ಪೂನಮ್ ಅವರು ತೇರಾ ನಶಾ ಹಾಡು, ಟ್ರೇಲರ್ ಗಳನ್ನು ಟ್ವೀಟ್ ಮಾಡಿದ್ದಾರೆ. ಈ ಹಾಡು ಪಡ್ಡೆಗಳಿಗೆ ಕಿಚ್ಚು ಹಚ್ಚಿದೆ.
ಪೂನಮ್ ಟ್ವೀಟ್
ಟ್ವಿಟ್ಟರ್ ಬಳಕೆ ಮಾಡಿಕೊಂಡು ಯುವ ಮನಸ್ಸುಗಳನ್ನು ಹೇಗೆ ಗೆಲ್ಲಬೇಕು ಎಂಬುದು ಪೂನಮ್ ಗೆ ಸರಿಯಾಗಿ ಅರ್ಥವಾಗಿದೆ.

ಪೂನಂ Addiction
ಜಿಸ್ಮಂ ಚಿತ್ರ ಖ್ಯಾತಿಯ ಅಮಿತ್ ಸಕ್ಸೇನಾ ಅವರ ನಿರ್ದೇಶನದಲ್ಲಿ ನಟಿಸುತ್ತಿರುವುದು ಖುಷಿಕೊಟ್ಟಿದೆ. ಚಿತ್ರದಲ್ಲಿ ನನಗೆ ಪ್ರಧಾನ ಪಾತ್ರವಿರಬೇಕು. ಸುಮ್ಮನೆ ಹೀಗೆ ಬಂದು ಹಾಗೆ ಹೋಗೋ ಪಾತ್ರವಾದರೆ ಏನು ಚೆಂದ.
ನನ್ನ ಅಭಿಮಾನಿಗಳಿಗೂ ಇದರಿಂದ ನಿರಾಶೆಯಾಗುತ್ತದೆ. ಹಾಗಾಗಿ ಪೂರ್ಣ ಪ್ರಮಾಣದ ನಾಯಕಿ ಪಾತ್ರಕ್ಕಾಗಿ ಇಷ್ಟು ದಿನ ಕಾಯುತ್ತಿದ್ದೆ ಎಂದು ಪೂನಂ ಹೇಳಿಕೊಂಡಿದ್ದಾಳೆ. Addiction ಎಂಬುದು ಚಿತ್ರದ ಅಡಿಬರಹ.

Click it and Unblock the Notifications











