»   » ಇನ್ನೊಮ್ಮೆ ಬಟ್ಟೆ ಬಿಚ್ಚಿ ಒಣಗಾಕಲು ಪೂನಂ ರೆಡಿ

ಇನ್ನೊಮ್ಮೆ ಬಟ್ಟೆ ಬಿಚ್ಚಿ ಒಣಗಾಕಲು ಪೂನಂ ರೆಡಿ

By: ರವಿಕಿಶೋರ್
Subscribe to Filmibeat Kannada

ಹಾಟ್ ಬೆಡಗಿ ಪೂನಂ ಪಾಂಡೆ ಮತ್ತೆ ಫ್ರಂಟ್ ಪೇಜ್ ಸುದ್ದಿ ಮಾಡಿದ್ದಾರೆ. ಇಷ್ಟು ದಿನ ಆಕೆಯ ಸುದ್ದಿಗಳು ಮೂರನೇ ಪುಟದ ಮೂಲೆ ಸೇರಿದ್ದವು. ಆಕೆಯೂ ನೋಡುವಷ್ಟು ದಿನ ನೋಡಿ ಈಗ ಮುಖಪುಟಕ್ಕೆ ಜಿಗಿಯುವಂತೆ ಮಾಡಿಕೊಂಡಿದ್ದಾರೆ.

ಕಳೆದ ಬಾರಿಯೇನೋ ಶಾರುಖ್ ಖಾನ್ ಟೀಂಗಾಗಿ ಬಟ್ಟೆ ಬಿಚ್ಚಿದಿರಿ. ಈ ವರ್ಷದ ನಿಮ್ಮ ಪ್ಲಾನ್ ಏನು? ಎಂದು ಟೈಂಸ್ ಆಫ್ ಇಂಡಿಯಾ ಪತ್ರಿಕೆ ನೇರವಾಗಿ ಪೂನಂರನ್ನು ಕೆಣಕಿದೆ. ಇದಕ್ಕೆ ಪೂನಂ ಪಾಂಡೆ ಈಗಲೇ ಏನೂ ಹೇಳಲಿಕ್ಕಾಗಲ್ಲ. ತಮ್ಮ ಟ್ವಿಟ್ಟರ್ ಅಭಿಮಾನಿಗಳು ಏನು ಹೇಳುತ್ತಾರೋ ಹಂಗೆ ಮಾಡ್ತೀನಿ ಅಂದಿದ್ದಾರೆ.


ನಾನು ಯಾವ ತಂಡವನ್ನು ಬೆಂಬಲಿಸಿದ್ದೇನೋ ಅದು ಗೆದ್ದಿದೆ. ಮುಂದೇನು ಮಾಡುತ್ತೇನೆ ಎಂದು ಈಗಲೇ ಹೇಳಿದರೆ ಆಟ ಕೆಡುತ್ತದೆ. ಮೊದಲೇ ಹೇಳುವುದರಲ್ಲಿ ಮಜಾ ಏನಿದೆ. ಅಸಲಿ ಮಜಾ ಇರುವುದು ಮುಂದೆ. ನನ್ನ ಅಭಿಮಾನಿಗಳ ಬಯಕೆಯಂತೆ ಮಾಡುತ್ತೇನೆ.

ಒಂದು ವೇಳೆ ನಿಮ್ಮ ಅಭಿಮಾನಿಗಳು ಮತ್ತೆ ಬಟ್ಟೆ ಕಳಚಿ ಎಂದರೆ? ಅವರ ಆಜ್ಞೆಗೆ ತಲೆಬಾಗುತ್ತೇನೆ ಎಂದಿದ್ದಾರೆ. ತಮ್ಮ ಸಾಮಾಜಿಕ ಕಾಳಜಿಯನ್ನು ಮುಂದುವರಿಸುವಂತೆ ಇದುವರೆಗೂ ಯಾರೂ ಮುಂದೆ ಬಂದಿಲ್ಲ. ನನ್ನ ಅಭಿಮಾನಿಗಳು ನನ್ನನ್ನು ಇಷ್ಟಪಟ್ಟಿದ್ದಾರೆ. ಅವರನ್ನು ನಾನು ರಂಜಿಸಿದ್ದೇನೆ ಅಷ್ಟೇ.

ಈ ರೀತಿ ಬಟ್ಟೆ ಕಳಚುವುದರಿಂದ ತಾವು ಒತ್ತಡಕ್ಕೆ ಒಳಾಗುವುದಿಲ್ಲವೆ?ಎಂದರೆ ಆಗದೇ ಇರುತ್ತದಾ? ಟೀಂ ಇಂಡಿಯಾ ಗೆದ್ದಾಗಲೂ ಬಹಳ ಒತ್ತಡ ಅನುಭವಿಸಿದ್ದೇನೆ. ಕೋಲ್ಕತಾ ತಂಡ ಗೆದ್ದಾಗಲೂ ಒತ್ತಡಕ್ಕೆ ಸಿಲುಕಿದ್ದೆ ಎಂದಿದ್ದಾರೆ ಪೂನಂ.

ವಿವಿಧ ಸಂಘಟನೆಗಳು ನಿಮ್ಮ ಈ ಕ್ರಮವನ್ನು ಖಂಡಿಸುತ್ತಿವೆಯಲ್ಲಾ? ಎಂಬ ಪ್ರಶ್ನೆಗೆ...ಅವರ ಕ್ರಮವನ್ನು ನಾನು ಖಂಡಿಸುತ್ತಿಲ್ಲವಲ್ಲಾ. ನಾನೇನು ಅಪರಾಧವನ್ನೂ ಮಾಡುತ್ತಿಲ್ಲ. ಜಸ್ಟ್ ಜನರನ್ನು ರಂಜಿಸುತ್ತಿದ್ದೇನೆ ಅಷ್ಟೇ. ಅಂದಹಾಗೆ ಅಭಿಮಾನಿಗಳ ಬಯಕೆಯೂ ಅದೆ, ಪೂನಂ ಬಯಸಿರುವುದೂ ಅದನ್ನೇ ಅಲ್ಲವೆ?

English summary
Actress Poonam Pandey says if her tweethearts suggest she will ready to strip again. It actually depends on my fans. Their wish is my command said the actress in an interview with Times of India.
Please Wait while comments are loading...