ಮದುವೆಯಾಗದೆ ಗರ್ಭಿಣಿಯಾದ ಪೂನಂ ಪಾಂಡೆ ; ತಂದೆ ಯಾರು ? ವಿವಾದಾತ್ಮಕ ಚೆಲುವೆ ಸುತ್ತ ಅನುಮಾನದ ಹುತ್ತ

ಮದುವೆ ಮುನ್ನ ಗರ್ಭಿಣಿಯಾಗುವುದು ಈಗೀಗ ತುಂಬಾನೇ ಕಾಮನ್. ಅದರಲ್ಲಿಯೂ ಚಿತ್ರರಂಗದಲ್ಲಿ ಇದು ಸರ್ವೆ ಸಾಮಾನ್ಯ. ಹಾರ್ದಿಕ್ ಪಾಂಡ್ಯ ಅವರ ಮಾಜಿ ಪತ್ನಿ ನತಾಶಾ, ಆಲಿಯಾ ಭಟ್, ನೇಹಾ ಧೂಪಿಯಾ, ಇಲಿಯಾನ, ಆಮಿ ಜಾಕ್ಸನ್, ಕೊಂಕಣಾ ಸೇನ್ ಶರ್ಮಾ, ಹೀಗೆ ಹಲವಾರು ನಾಯಕಿಯರು ಈ ಟ್ರೆಂಡ್‌ನ ಫಾಲೋ ಮಾಡಿದ್ದಾರೆ. ಈ ಸಾಲಿನಲ್ಲಿ ಪೂನಂ ಪಾಂಡೆ ಕೂಡ ಸೇರಿಕೊಂಡಿದ್ಧಾರೆ ಎನ್ನುವುದೇ ಸದ್ಯದ ಬ್ರೇಕಿಂಗ್ ನ್ಯೂಸ್.

ಹೌದು, ಪ್ರಚಾರ ಪಡೆಯಲು ಏನು ಬೇಕಾದರೂ ಮಾಡುವವರಲ್ಲಿ ಮೊದಲಿಗರು ಪೂನಂ ಪಾಂಡೆ. ತನ್ನ ಸಾವನ್ನೇ ಪ್ರಚಾರಕ್ಕೆ ಬಂಡವಾಳ ಮಾಡಿಕೊಂಡ ಪೂನಂ ಪಾಂಡೆ ತನ್ನ ದೇಹಸಿರಿಯನ್ನ ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಪ್ರದರ್ಶನಕ್ಕೀಡುವ ಮೂಲಕ ಕೂಡ ಗಮನ ಸೆಳೆಯುವ ಪ್ರಯತ್ನ ಮಾಡ್ತಾರೆ. ಸುದ್ದಿಯಾಗ್ತಾರೆ.

Poonam Pandey s Baby Bump Reveal Real Joy or Just an April Fool s Stunt

ಇಂಥಾ ಪೂನಂ ಪಾಂಡೆ ಇದೀಗ ತಾವು ಗರ್ಭಿಣಿಯಾಗಿರುವುದಾಗಿ ಹೇಳಿದ್ದಾರೆ. ಸಾಕ್ಷಿಗೆ ತಮ್ಮ ಬೇಬಿ ಬಂಪ್‌ನ ಪ್ರದರ್ಶನವನ್ನು ಕೂಡ ಮಾಡಿದ್ದಾರೆ. ಆದರೆ ಪೂನಂ ಪಾಂಡೆ ಅವರ ಈ ಮಾತಿನ ಮೇಲೆ ಹಲವರಿಗೆ ನಂಬಿಕೆ ಇಲ್ಲ.

ಯಾಕೆಂದರೆ ಆಗಲೇ ಹೇಳಿದಂತೆ ಪೂನಂ ಪ್ರಚಾರ ಪ್ರಿಯೆ. ಗರ್ಭಕಂಠದ ಕ್ಯಾನ್ಸರ್ ದಿಂದ ಸಾವನ್ನಪ್ಪಿದ್ದಾಗಿ ಸ್ವತಃ ಸುಳ್ಳು ಸುದ್ದಿ ಹಬ್ಬಿಸಿದ್ದರು ಇವರು. ಅಂದೇ ಪೂನಂ ಪಾಂಡೆ ಹಲವರ ನಂಬಿಕೆಯನ್ನು ಕಳೆದುಕೊಂಡಿದ್ದಾರೆ.

ಇನ್ನೂ ನಾಳೆ (ಏಪ್ರಿಲ್ 1) ಎಲ್ಲರಿಗೆ ಗೊತ್ತಿರುವಂತೆ ಮೂರ್ಖರ ದಿನ. ಪೂನಂ ಪಾಂಡೆಯಂತಹ ನಟಿಯರು ಇಂತಹ ದಿನಗಳಿಗಾಗಿಯೇ ಕಾಯುತ್ತಿರುತ್ತಾರೆ. ಹೀಗಾಗಿ ನಾಳೆ ಬೆಳಿಗ್ಗೆ ಎದ್ದು ನಾನು ಗರ್ಭಿಣಿ ಅಲ್ಲ, ನಿಮ್ಮನ್ನೆಲ್ಲಾ ಫೂಲ್ ಮಾಡಿದೆ ಎಂದು ಅವರು ಹೇಳಿದರು ಅಚ್ಚರಿ ಇಲ್ಲ ಎಂದು ಹಲವರು ಸದ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಪೂನಂ ಪಾಂಡೆಯ ಕಾಲೆಳೆಯುತ್ತಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಇದು ''ಎಐ'' ಕಾಲ. ಈ ಕಾಲದಲ್ಲಿ ಇಂತಹ ಹತ್ತು ಹಲವು ಫೋಟೊಗಳನ್ನು ಕ್ಷಣಾರ್ಧದಲ್ಲಿಯೇ ಸೃಷ್ಟಿಸಬಹುದು. ಪೂನಂ ಪಾಂಡೆಯ ಮೇಲೆ ಹಲವರು ಅನುಮಾನ ಪಡಲು ಇದು ಕೂಡ ಪ್ರಮುಖ ಕಾರಣ.

Poonam Pandey s Baby Bump Reveal Real Joy or Just an April Fool s Stunt

ಅಂದ್ಹಾಗೇ ಪೂನಂ ಪಾಂಡೆ ಸೆಪ್ಟೆಂಬರ್ 11, 2020ರಲ್ಲಿ ತಮ್ಮ ಬಹುಕಾಲದ ಸ್ನೇಹಿತ ಮುಂಬೈ ಮೂಲಕ ಸ್ಯಾಮ್ ಅವರ ಜೊತೆ ಮದುವೆಯಾಗಿದ್ದರು. ಸ್ಯಾಮ್ ಜೊತೆ 07 ಜನ್ಮ ಕಳೆಯುವ ಆಸೆಯನ್ನು ವ್ಯಕ್ತಪಡಿಸಿದ್ದರು.

ಆದರೆ ಆ ನಂತರ ಕೇವಲ ಎರಡೇ ವಾರದಲ್ಲಿ ತಮ್ಮ ಗಂಡನ ವಿರುದ್ಧ ತಿರುಗಿ ಬಿದ್ದಿದ್ದರು. ಹನಿಮೂನ್‌ನಲ್ಲಿ ಪತಿ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೂನಂ ಆರೋಪಿಸಿದ್ದರು. ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು.

ಅಲ್ಲಿಂದ ಇಲ್ಲಿಯವರೆಗೆ ಪೂನಂ ಅವರದ್ದು ಒಂಟಿ ಜೀವನ. ತಮ್ಮ ಹೊಸ ಬಾಯ್‌ ಫ್ರೆಂಡ್‌ ಬಗ್ಗೆಯಾಗಲಿ ಮದುವೆಯ ಕುರಿತಾಗಲಿ ಪೂನಂ ಎಲ್ಲಿಯೂ ಮಾತನಾಡಿಲ್ಲ. ಕೆಲ ದಿನಗಳ ಹಿಂದೆ ಮದುವೆಯ ಕುರಿತು ಪ್ರಶ್ನೆ ಎದುರಾದಾಗ ಮದುವೆ ಮಾಡಿಕೊಂಡು ಯಾರು ಸುಖವಾಗಿದ್ದಾರೆ ನೀವೆ ಹೇಳಿ ಎಂದು ಪ್ರಶ್ನೆಯನ್ನು ಪೂನಂ ಮಾಡಿದ್ದರು. ದಿನ ನಿತ್ಯ ವಿಚ್ಛೇದನದ ಸುದ್ದಿಗಳನ್ನು ನಾವು ಕೇಳುತ್ತಲೇ ಇದ್ದೇವೆ ಎಂದಿದ್ದ ಪೂನಂ ಮದುವೆಯ ವಿಚಾರ ಖಂಡಿತವಾಗಿಯೂ ಸಂತೋಷದ ವಿಚಾರ ಅಲ್ಲ ಎಂದಿದ್ದರು.

ಈ ಹಿನ್ನೆಲೆ ಒಂದು ವೇಳೆ ಗರ್ಭಿಣಿಯಾಗಿದ್ದು ನಿಜಾ ಆಗಿದ್ದೇ ಆದಲ್ಲಿ ಆ ಮಗುವಿನ ತಂದೆ ಯಾರು..? ಎನ್ನುವ ಪ್ರಶ್ನೆಯನ್ನು ಸದ್ಯ ಹಲವರು ಪೂನಂ ಪಾಂಡೆ ಅವರಿಗೆ ಕೇಳುತ್ತಿದ್ಧಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಒಂದು ವೇಳೆ ಇದು ನಿಜಕ್ಕೂ ಏಪ್ರಿಲ್ ಫೂಲ್ ಪ್ರಾಂಕ್ ಆಗಿದ್ದರೆ, ಅದು ತಾಯ್ತನಕ್ಕೆ ಮಾಡುವ ಅವಮಾನ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿಜಕ್ಕೂ ಪೂನಂ ಪಾಂಡೆ ಗರ್ಭಿಣಿನಾ ಅಥವಾ ಇದು ಕೇವಲ ಮತ್ತೊಂದು ಪ್ರಚಾರದ ಗಿಮಿಕ್ಕಾ ಎನ್ನುವುದಕ್ಕೆ ಉತ್ತರ ಶೀಘ್ರದಲ್ಲಿಯೇ ಸಿಗಲಿದೆ.

More from Filmibeat

English summary
Is Poonam Pandey really pregnant? New photos of the actress flaunting a baby bump have gone viral, but fans are smells a prank. With April Fool’s Day hours away, is this a miracle or another publicity stunt? See the photos and the internet's wildest reactions.
Read more about: poonam pandey pregnancy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X