For Quick Alerts
  ALLOW NOTIFICATIONS  
  For Daily Alerts

  ಪತಿಯಿಂದ ಹಲ್ಲೆ: ಪೂನಂ ಪಾಂಡೆ ಆಸ್ಪತ್ರೆಗೆ, ಪತಿ ಸ್ಯಾಮ್ ಪೊಲೀಸರ ವಶಕ್ಕೆ

  |

  ನಟಿ ಪೂನಂ ಪಾಂಡೆ ಹಾಗೂ ಆಕೆಯ ಪತಿಯ ನಡುವಿನ ಜಗಳ ಮತ್ತೆ ಆರಂಭವಾಗಿದೆ. ಪತಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾನೆಂದು ಪೂನಂ ದೂರು ದಾಖಲಿಸಿದ್ದು ಪತಿ ಸ್ಯಾಮ್ ಬಾಂಬೆಯನ್ನು ಪೊಲೀಸರು ಬಂಧಿಸಿದ್ದಾರೆ.

  ಪತಿಯ ವಿರುದ್ಧ ಹಲ್ಲೆ, ಲೈಂಗಿಕ ದೌರ್ಜನ್ಯ, ಮಾನಸಿಕ ಹಿಂಸೆ ದೂರುಗಳನ್ನು ಪೂನಂ ಪಾಂಡೆ ನೀಡಿದ್ದು, ದೂರಿನ ಆಧಾರದಲ್ಲಿ ನಿನ್ನೆ (ನವೆಂಬರ್ 08)ರಂದು ಸ್ಯಾಮ್ ಬಾಂಬೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಪೂನಂ ಪಾಂಡೆ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಪೂನಂ ಪಾಂಡೆ ಮತ್ತು ಸ್ಯಾಂ ಬಾಂಬೆ ಗೋವಾದಲ್ಲಿ ವಿವಾಹವಾಗಿದ್ದರು. ವಿವಾಹವಾದ ಮೊದಲ ದಿನವೇ ಸ್ಯಾಮ್ ಬಾಂಬೆ ವಿರುದ್ಧ ಗೋವಾ ಪೊಲೀಸರ ಬಳಿ ಹಲ್ಲೆ, ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದರು ಪೂನಂ. ಆಗಲೂ ಸ್ಯಾಮ್ ಬಾಂಬೆ ಬಂಧನವಾಗಿತ್ತು.

  ಆದರೆ ನಂತರ ಪೂನಂ ಪಾಂಡೆ ದೂರು ಹಿಂಪಡೆದ ಕಾರಣ ಪ್ರಕರಣ ತಿಳಿಯಾಗಿ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿ, ಸ್ಯಾಮ್ ಬಾಂಬೆ ಬಿಡುಗಡೆ ಹೊಂದಿದ್ದರು. ಇದೀಗ ಮತ್ತೆ ಪೂನಂ ಪಾಂಡೆ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ.

  ತಮ್ಮ ಹಾಟ್ ಚಿತ್ರಗಳು, ವಿಡಿಯೋಗಳಿಂದಾಗಿ ಖ್ಯಾತರು ಪೂನಂ ಪಾಂಡೆ. ಜೊತೆಗೆ ಅವರದ್ದು ವಿವಾದಾತ್ಮಕ ವ್ಯಕ್ತಿತ್ವ.

  ಕಳೆದ ವರ್ಷ ಗೋವಾದ ನಿಷೇಧಿತ ಬೀಚ್ ಒಂದರ ಬಳಿ ಗ್ಲಾಮರಸ್ ವಿಡಿಯೋ ಚಿತ್ರೀಕರಣ ಮಾಡಿ ವಿವಾದ ಎಬ್ಬಿಸಿದ್ದರು. ಈ ಪ್ರಕರಣ ಗೋವಾ ವಿಧಾನಸಭೆಯಲ್ಲಿ ಚರ್ಚೆಯಾಗಿ ಕೊನೆಗೆ ಪೂನಂ ಪಾಂಡೆಯನ್ನು ಗೋವಾ ಪೊಲೀಸರು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.

  ರಾಜ್ ಕುಂದ್ರಾ ಪ್ರಕರಣವಾದಾಗಲೂ ಪೂನಂ ಪಾಂಡೆ ಹಲವು ಆರೋಪಗಳನ್ನು ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ವಿರುದ್ಧ ಮಾಡಿದ್ದರು. ''ನನ್ನನ್ನು ನೀಲಿ ಚಿತ್ರಗಳ ಲೋಕಕ್ಕೆ ತಳ್ಳಿದ್ದೇ ರಾಜ್ ಕುಂದ್ರಾ'' ಎಂದು ಪೂನಂ ಆರೋಪ ಹೊರಿಸಿದ್ದರು.

  ರಾಜ್ ಕುಂದ್ರಾ ಬಗ್ಗೆ ಮಾಡಿದ್ದ ಪೂನಂ ಪಾಂಡೆ, ''ರಾಜ್‌ ಕುಂದ್ರಾ ನನ್ನ ಖಾಸಗಿ ಮೊಬೈಲ್ ನಂಬರ್ ಲೀಕ್ ಮಾಡಿದ್ದ. ನಾನು ಅವರ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ತಪ್ಪು ಮಾಡಿದೆ. ಅವರು ವೃತ್ತಿಪರರಲ್ಲ. ಅವರು ಮೋಸಗಾರರು. ಸ್ವತಃ ರಾಜ್ ಕುಂದ್ರಾ ಬಹಳ ದೊಡ್ಡ ಮೋಸಗಾರ'' ಎಂದಿದ್ದರು.

  English summary
  Poonam Pandey's husband Sam Bombay arrested for assaulting his wife. Mumbai police arrested Sam Bombay, Poonam Pandey is in hospital.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X