'ಟೀಂ ಇಂಡಿಯಾ ಗೆದ್ದರೆ ಮತ್ತೆ ಬೆತ್ತಲಾಗುತ್ತೇನೆ ಎಂದು ಹೇಳಬೇಕಾ?' ಪೂನಂ ಶಾಕಿಂಗ್ ಹೇಳಿಕೆ

By ಫಿಲ್ಮೀ ಬೀಟ್ ಡೆಸ್ಕ್

ಹಾಟ್ ನಟಿ ಪೂನಂ ಪಾಂಡೆ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿದ್ದವರು. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಪೂನಂ ಬೋಲ್ಡ್ ಫೋಟೋ, ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ.

ಇದೀಗ ಮತ್ತೆ ಪೂನಂ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಟೀಂ ಇಂಡಿಯಾ ವಿಶ್ವಕಪ್ ಗೆದ್ದರೆ ಬೆತ್ತಲಾಗುವುದಾಗಿ ಹೇಳಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು. ಬೋಲ್ಡ್ ಹೇಳಿಕೆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಪೂನಂ ಇದೀಗ ಮತ್ತದೆ ಹೇಳಿಕೆಯನ್ನು ರಿಪೀಟ್ ಮಾಡಿದ್ದಾರೆ.

ಟೀಂ ಇಂಡಿಯಾ, ನ್ಯೂಜಿಲ್ಯಾಂಡ್ ವಿರುದ್ಧ ಜಯಗಳಿಸಿದರೆ ಮತ್ತೆ ಬೆತ್ತಲಾಗುತ್ತೇನೆ ಎಂದು ಹೇಳಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ. ವಿವಾದಾತ್ಮಕ ಹೇಳಿಕೆಗಳನ್ನು ನೀಡಿ, ಹೆಡ್ ಲೈನ್ ಸ್ಟೋರಿ ಆಗುವ ಅವಕಾಶವನ್ನು ಪೂನಂ ಯಾವತ್ತು ಮಿಸ್ ಮಾಡಿಕೊಳ್ಳುವುದಿಲ್ಲ. ಮದುವೆ ಆಗಿ ಕೆಲವೇ ದಿನಗಳಲ್ಲಿ ಪತಿ ಸ್ಯಾಮ್ ಬಾಂಬೆ ವಿರುದ್ಧ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದ ಪೂನಂ, ಪತಿ ವಿರುದ್ಧ ಹಲ್ಲೆ ಆರೋಪ ಮಾಡಿದ್ದರು. ಬಳಿಕ ಕೊಂಚ ಸೈಲೆಂಟ್ ಆಗಿದ್ದರು.

Poonam Pandey strip again if India Wins against New Zealand

ಇದೀಗ ಆಂಗ್ಲ ವೆಟ್ ಪೋರ್ಟಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪೂನಂ, "ಕ್ರಿಕೆಟ್ ಚಾಲು ಹೈ? ಲಾಗ್ ಕ್ರಿಕೆಟ್ ಖೇಲ್ ರಹೆ ಹೈ? ಒಂದು ವೇಳೆ ಗೆದ್ದರೆ ನಾನು ಖಂಡಿತ ಬಟ್ಟೆ ಬಿಚ್ಚುತ್ತೇನೆ ಎಂದು ಮತ್ತೆ ಹೇಳಬೇಕಾ? ಈ ಬಗ್ಗೆ ನಾನು ಈಗ ಯಾವುದೇ ಸುಳಿವು ನೀಡುವುದಿಲ್ಲ. ಸಾಧ್ಯವಾದರೆ ನಾನು ವಿವಾದ ಮಾಡುವ ಬಗ್ಗೆ ಯೋಚಿಸುತ್ತೇನೆ" ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Recommended Video

ಸಂಚಾರಿ ವಿಜಯ್ ಹೆಸರಲ್ಲಿ ದೇವರು ಮೆಚ್ಚುವ ಕೆಲಸ ಮಾಡಿದ ಚಕ್ರವರ್ತಿ ಚಂದ್ರಚೂಡ್ | Filmibeat Kannada

ಪೂನಂ ಪಾಂಡೆ ಪತಿ ಪ್ರತಿಕ್ರಿಯೆ ನೀಡಿ, 'ನಾನು ಬಟ್ಟೆ ಬಿಚ್ಚಬೇಕಾ?' ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಪೂನಾಂ, 'ನೀವು ಕೂಡ ಬಟ್ಟೆ ಬಿಚ್ಚಲು ಬಯಸುತ್ತೀರಾ?' ಎಂದು ಪ್ರಶ್ನೆ ಮಾಡಿದ್ದಾರೆ. ಪೂನಂ ಹೇಳಿಕೆ ಮತ್ತೆ ಅಚ್ಚರಿ ಮೂಡಿಸಿದ್ದು, ಒಂದುವೇಳೆ ಟೀಂ ಇಂಡಿಯಾ ಗೆದ್ದರೆ ಏನು ಮಾಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

More from Filmibeat

English summary
Poonam Pandey strip again if India Wins against New Zealand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X