For Quick Alerts
  ALLOW NOTIFICATIONS  
  For Daily Alerts

  ತನುಶ್ರೀ ದತ್ತಾ ಬಗ್ಗೆ ಲೇವಡಿ ಮಾಡಿದ್ರಾ ನಟಿ ಪೂನಂ ಪಾಂಡೆ.?

  |

  ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ, ಸೋನಂ ಕಪೂರ್, ಅನುಷ್ಕಾ ಶರ್ಮಾ, ಟ್ವಿಂಕಲ್ ಖನ್ನಾ ಸೇರಿದಂತೆ ಹಲವರು ನಟಿ ತನುಶ್ರೀ ದತ್ತಾಗೆ ಸಪೋರ್ಟ್ ಮಾಡಿದ್ದಾರೆ.

  ಲೈಂಗಿಕ ಕಿರುಕುಳದ ಬಗ್ಗೆ ಓಪನ್ ಆಗಿ ಮಾತನಾಡಿದ ತನುಶ್ರೀ ದತ್ತಾ ಪರವಾಗಿ ಬಾಲಿವುಡ್ ನ ಎಷ್ಟೋ ನಟ-ನಟಿಯರು ದನಿ ಎತ್ತಿದ್ದಾರೆ. ಹೀಗಿರುವಾಗ, ರಾಖಿ ಸಾವಂತ್ ಮಾತ್ರ ನಾನಾ ಪಾಟೇಕರ್ ಪರವಾಗಿ ಬ್ಯಾಟಿಂಗ್ ಮಾಡಿ ಟ್ರೋಲ್ ಆಗಿದ್ದರು.

  ತನುಶ್ರೀ ದತ್ತಾ ವಿವಾದದ ಬಗ್ಗೆ ಕಾಮೆಂಟ್ ಮಾಡಿದ ಬಾಯಿಬಡುಕಿ ರಾಖಿ ಸಾವಂತ್.! ತನುಶ್ರೀ ದತ್ತಾ ವಿವಾದದ ಬಗ್ಗೆ ಕಾಮೆಂಟ್ ಮಾಡಿದ ಬಾಯಿಬಡುಕಿ ರಾಖಿ ಸಾವಂತ್.!

  ಇದೀಗ ಪೂನಂ ಪಾಂಡೇ ಕೂಡ ರಾಖಿ ಸಾವಂತ್ ಹಾದಿ ಹಿಡಿದಿದ್ದಾರೆ. ತನುಶ್ರೀ ದತ್ತಾ ಬಗ್ಗೆ ಲೇವಡಿ ಮಾಡಿ ನೆಟ್ಟಿಗರ ಆಕ್ರೋಶಕ್ಕೆ ಪೂನಂ ಪಾಂಡೆ ಕಾರಣವಾಗಿದ್ದಾರೆ.

  'ದಿ ಜರ್ನಿ ಆಫ್ ಕರ್ಮ' ಎಂಬ ಹಸಿ ಬಿಸಿ ಸಿನಿಮಾದಲ್ಲಿ ಪೂನಂ ಪಾಂಡೆ ಹಾಗೂ ಶಕ್ತಿ ಕಪೂರ್ ಅಭಿನಯಿಸಿದ್ದಾರೆ. ಚಿತ್ರದ ಬಗ್ಗೆ ಪೂನಂ ಪಾಂಡೆ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಚಾಟ್ ನಡೆಸುತ್ತಿರುವಾಗ, ತನುಶ್ರೀ ದತ್ತಾಗೆ ಟಾಂಟ್ ಕೊಟ್ಟಿದ್ದಾರೆ. ಮುಂದೆ ಓದಿರಿ....

  ಪೂನಂ ಏನಂದರು.?

  ಪೂನಂ ಏನಂದರು.?

  ಶಕ್ತಿ ಕಪೂರ್ ಜೊತೆಗೆ ಅಭಿನಯಿಸಿದ ಅನುಭವ ಹೇಗಿತ್ತು ಎಂದು ನೆಟ್ಟಿಗರೊಬ್ಬರು ಲೈವ್ ಚಾಟ್ ವೇಳೆ ಪೂನಂ ಪಾಂಡೆಯನ್ನ ಪ್ರಶ್ನಿಸಿದರು. ಆಗ, ''ಸ್ವಲ್ಪ ಅಸಭ್ಯವಾಗಿತ್ತು. ಆದ್ರೆ, ಚಿಂತೆ ಬೇಡ ನಾನು ಹತ್ತು ವರ್ಷಗಳ ಬಳಿಕ ಬಂದು ಹೇಳಲ್ಲ'' ಎಂದು ಪೂನಂ ಪಾಂಡೆ ನಗುತ್ತಾ ಹೇಳಿದರು. ಪೂನಂ ಪಾಂಡೆ ಅವರ ಈ ಹೇಳಿಕೆ ತನುಶ್ರೀ ದತ್ತಾಗೆ ಲೇವಡಿ ಮಾಡಿರುವಂತಿದೆ ಎಂದು ನೆಟ್ಟಿಗರು ಕೋಪಗೊಂಡಿದ್ದಾರೆ.

  ತನುಶ್ರೀ ದತ್ತಾಗೆ 'ಬಟ್ಟೆ ಬಿಚ್ಚು' ಅಂತ ಹೇಳಿದ್ನಂತೆ ಬಾಲಿವುಡ್ ನಿರ್ದೇಶಕ.!ತನುಶ್ರೀ ದತ್ತಾಗೆ 'ಬಟ್ಟೆ ಬಿಚ್ಚು' ಅಂತ ಹೇಳಿದ್ನಂತೆ ಬಾಲಿವುಡ್ ನಿರ್ದೇಶಕ.!

  ಕೆಲ ದಿನಗಳ ಹಿಂದೆ ಪೂನಂ ಹೇಳಿದ್ದೇನು.?

  ಕೆಲ ದಿನಗಳ ಹಿಂದೆ ಪೂನಂ ಹೇಳಿದ್ದೇನು.?

  ''ಶಕ್ತಿ ಕಪೂರ್ ಜೊತೆಗೆ ನಟನೆ ಮಾಡಿದ್ದು ಉತ್ತಮ ಅನುಭವ. ನನ್ನನ್ನ ಅವರು ಸೆಟ್ ನಲ್ಲಿ ಲೊಲೀಟಾ ಅಂತ ಕರೆಯುತ್ತಿದ್ದರು. ಅವರೊಂದಿಗೆ ಲವ್ ಸೀನ್ ಗಳನ್ನ ಮಾಡಿದ್ದು ಖುಷಿ ಕೊಡ್ತು'' ಅಂತ ಕೆಲವೇ ದಿನಗಳ ಹಿಂದೆಯಷ್ಟೇ ಪೂನಂ ಪಾಂಡೆ ಹೇಳಿದ್ದರು.

  ನಾನಾ ಪಾಟೇಕರ್ ಬಗ್ಗೆ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ ತನುಶ್ರೀ ದತ್ತಾ.!ನಾನಾ ಪಾಟೇಕರ್ ಬಗ್ಗೆ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ ತನುಶ್ರೀ ದತ್ತಾ.!

  ಶಕ್ತಿ ಕಪೂರ್ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ.?

  ಶಕ್ತಿ ಕಪೂರ್ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ.?

  ತನುಶ್ರೀ ದತ್ತಾ-ನಾನಾ ಪಾಟೇಕರ್ ವಿವಾದದ ಬಗ್ಗೆ ಪ್ರಶ್ನಿಸಿದಾಗ ಶಕ್ತಿ ಕಪೂರ್ ಕೂಡ ಉದಾಸೀನವಾಗಿ ಉತ್ತರಿಸಿದ್ದರು. ''ನನಗೆ ಈ ಪ್ರಕರಣದ ಬಗ್ಗೆ ಏನೂ ಗೊತ್ತಿಲ್ಲ. ಇದಾಗಿದ್ದು ಹತ್ತು ವರ್ಷಗಳ ಹಿಂದೆ. ಆಗ ನಾನು ಮಗುವಾಗಿದ್ದೆ'' ಎಂದಿದ್ದರು ಶಕ್ತಿ ಕಪೂರ್.

  ಅಮಿತಾಬ್ ಬಚ್ಚನ್ ಪ್ರತಿಕ್ರಿಯೆ ಕೇಳಿ ಬೇಸರಗೊಂಡ ನಟಿ ತನುಶ್ರೀ ದತ್ತಾ ಅಮಿತಾಬ್ ಬಚ್ಚನ್ ಪ್ರತಿಕ್ರಿಯೆ ಕೇಳಿ ಬೇಸರಗೊಂಡ ನಟಿ ತನುಶ್ರೀ ದತ್ತಾ

  ದಿಗ್ಗಜರು ಕಾಮೆಂಟ್ ಮಾಡುತ್ತಿಲ್ಲ.!

  ದಿಗ್ಗಜರು ಕಾಮೆಂಟ್ ಮಾಡುತ್ತಿಲ್ಲ.!

  ಶಕ್ತಿ ಕಪೂರ್ ಮಾತ್ರ ಅಲ್ಲ.. ಅಮಿತಾಬ್ ಬಚ್ಚನ್, ಆಮೀರ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಬಾಲಿವುಡ್ ನ ದೊಡ್ಡ ದೊಡ್ಡ ನಟರು ತನುಶ್ರೀ ದತ್ತಾ ವಿವಾದದ ಬಗ್ಗೆ ಕಾಮೆಂಟ್ ಮಾಡಲು ನಿರಾಕರಿಸಿದ್ದಾರೆ. ದಿಗ್ಗಜರ ಈ ವರ್ತನೆ ಕಂಡು ಸಿನಿ ಪ್ರಿಯರು ಕುಪಿತಗೊಂಡಿದ್ದಾರೆ.

  English summary
  Bollywood Actress Poonam Pandey takes a dig at Tanushree Dutta.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X