ಒಳ ಉಡುಪು ಧರಿಸಿದೇ ಬಂದ ಪೂನಂ: ನೆಟ್ಟಿಗರಿಂದ ಸಖತ್ ಟ್ರೋಲ್
ನಟಿ ಪೂನಂ ಪಾಂಡೆ ಬಾಲಿವುಡ್‌ನ ಅತಿ ಗ್ಲಾಮರಸ್ ನಟಿಯರಲ್ಲಿ ಒಬ್ಬರು. ತಮ್ಮ ನಟನೆಗಿಂತಲೂ ದೇಹ ಸೌಂದರ್ಯದಿಂದಲೇ ಹೆಸರು, ಹಣ ಮಾಡಿರುವ ಮಾಡುತ್ತಿರುವ ನಟಿ ಪೂನಂ ಪಾಂಡೆ.
ಸೆಕ್ಸಿಯಾಗಿ ಕಾಣಿಸಿಕೊಳ್ಳುವ ಮೂಲಕ ಮಾತ್ರವೇ ಅಲ್ಲದೆ ಆಗಾಗ್ಗೆ ವಿವಾದಿತ ಹೇಳಿಕೆಗಳನ್ನು ನೀಡುವ ಮೂಲಕವೂ ತಾವು ಸದಾ ಸುದ್ದಿಯಲ್ಲಿರುವಂತೆ ನೋಡಿಕೊಳ್ಳುತ್ತಾರೆ ಈ ನಟಿ.
ಮದುವೆ, ಪತಿ ವಿರುದ್ಧ ಆರೋಪ, ನಿಷೇಧಿತ ವಲಯದಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ, ರಾಜ್ ಕುಂದ್ರಾ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಇನ್ನೂ ಹಲವು ಕಾರಣಗಳಿಂದ ಕಳೆದ ಒಂದು ವರ್ಷದಿಂದಲೂ ಸುದ್ದಿಯಲ್ಲಿರುವ ನಟಿ ಪೂನಂ ಪಾಂಡೆ ಇದೀಗ ಮತ್ತೊಮ್ಮೆ ತಮ್ಮ ಉಡುಪಿನಿಂದ ಸುದ್ದಿಗೆ ಬಂದಿದ್ದಾರೆ.

ಒಳ ಉಡುಪು ಧರಿಸದೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಪೂನಂ!
ನಟಿ ಪೂನಂ ಪಾಂಡೆಯ ಕೆಲವು ಚಿತ್ರಗಳು, ವಿಡಿಯೋ ವೈರಲ್ ಆಗುತ್ತಿದ್ದು, ನಟಿ ತೊಟ್ಟಿರುವ ಉಡುಪಿನ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟಿ ಪೂನಂ ಪಾಂಡೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಭರದಲ್ಲಿ ಒಳ ಉಡುಪು ಧರಿಸದೇ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಬಿಳಿ ಬಣ್ಣದ ಚಿಕ್ಕ ಟಾಪ್ ಧರಿಸಿರುವ ಪೂನಂ ಪಾಂಡೆ ಅದರ ಒಳಗೆ ಏನೂ ಧರಿಸದೇ ಇರುವುದು ಚಿತ್ರಗಳಲ್ಲಿ, ವಿಡಿಯೋಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಇದು ಕೆಲವು ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಕ್ಯಾಮೆರಾ ಮುಂದೆ ಬಟ್ಟೆ ಬಿಚ್ಚಿದ್ದ ಪೂನಂ!
'ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗಾದರೂ ಧರಿಸುವ ಉಡುಪಿನ ಬಗ್ಗೆ ಎಚ್ಚರವಿರಲಿ'' ಎಂದು ಕೆಲವು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಆದರೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವವರಲ್ಲ ಪೂನಂ ಪಾಂಡೆ. 'ಪ್ರಚಾರಕ್ಕಾಗಿ ನಾನು ಏನು ಬೇಕಾದರೂ ಮಾಡುತ್ತೀನಿ'' ಎಂದು ಧೈರ್ಯವಾಗಿಯೇ ಹೇಳಿದ್ದರು. ಕೆಲವು ತಿಂಗಳ ಹಿಂದೆ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಪೂನಂ, ತನಗೆ ವೋಟ್ ಮಾಡಿದರೆ ಕ್ಯಾಮೆರಾ ಮುಂದೆ ಟಿಶರ್ಟ್ ಬಿಚ್ಚುತ್ತೇನೆ ಎಂದಿದ್ದರು. ಕೊನೆಗೆ ಹೇಳಿದಂತೆಯೇ ಮಾಡಿದರು ಕೂಡ.

ಪೂನಂ ಪಾಂಡೆಯ ಬಂಧಿಸಿದ್ದ ಗೋವಾ ಪೊಲೀಸರು
ಕಳೆದ ವರ್ಷ ಸಾಕಷ್ಟು ಸುದ್ದಿಯಲ್ಲಿದ್ದರು ಪೂನಂ ಪಾಂಡೆ. ಸ್ಯಾಮ್ ಎಂಬಾತನನ್ನು ವಿವಾಹವಾದ ಪೂನಂ ಮೊದಲ ರಾತ್ರಿಯ ದಿನವೇ ಆತನ ವಿರುದ್ಧ ಗೋವಾ ಪೊಲೀಸರಿಗೆ ದೂರು ನೀಡಿದರು. ಆ ಬಳಿಕ ಹಾಗೋ ಹೀಗೋ ಮಾಡಿ ಆತನೊಟ್ಟಿಗೆ ಸಂಧಾನ ಮಾಡಿಕೊಂಡು ದೂರು ಹಿಂಪಡೆದರು. ಆ ಬಳಿಕ ಗೋವಾದ ನಿಷೇಧಿತ ಬೀಚ್ ಒಂದರಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ್ದು ಭಾರಿ ಸುದ್ದಿಯಾಯಿತು. ಈ ಕಾರಣಕ್ಕೆ ಪೂನಂ ಪಾಂಡೆಯ ಬಂಧನವೂ ಸಹ ಆಯಿತು.

ರಾಜ್ ಕುಂದ್ರಾ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ
ರಾಜ್ ಕುಂದ್ರಾ ಪ್ರಕರಣದಲ್ಲಿಯೂ ಪೂನಂ ಹೆಸರು ಜೋರಾಗಿ ಕೇಳಿ ಬಂದಿತ್ತು. ರಾಜ್ ಕುಂದ್ರಾ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪ ಮಾಡಿದ್ದರು ಈ ನಟಿ. ಆ ನಂತರ ಶಿಲ್ಪಾ ಶೆಟ್ಟಿ, ಪೂನಂ ವಿರುದ್ಧ ದೂರು ನೀಡಿ, ಪೂನಂ ತಮ್ಮನ್ನು ಬ್ಲಾಕ್ ಮೇಲ್ ಮಾಡುತ್ತಿರುವುದಾಗಿಯೂ, ಹಣಕ್ಕಾಗಿ ಒತ್ತಾಯಿಸಿರುವುದಾಗಿಯೂ ಹೇಳಿದ್ದರು. ರಾಜ್ ಕುಂದ್ರಾ ಸಹ, ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಪೂನಂ ಪಾಂಡೆ ಹಾಗೂ ಶೆರ್ಲಿನ್ ಚೋಪ್ರಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದರು.


Click it and Unblock the Notifications











