ಬಾಯಲ್ಲಿ ನೀರು ತರಿಸುವ ಪೂನಂ ಪಾಂಡೆಯ ಐಸ್‌ ಕ್ರೀಮ್‌, ವಿಡಿಯೋ ಇಲ್ಲಿದೆ...!

ಪ್ರಚಾರ ಪಡೆಯಲು ಏನು ಬೇಕಾದರೂ ಮಾಡುವವರಲ್ಲಿ ಮೊದಲಿಗರು ಪೂನಂ ಪಾಂಡೆ. ತನ್ನ ಸಾವನ್ನೇ ಪ್ರಚಾರಕ್ಕೆ ಬಂಡವಾಳ ಮಾಡಿಕೊಂಡ ಪೂನಂ ಪಾಂಡೆ ತನ್ನ ದೇಹಸಿರಿಯನ್ನ ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಪ್ರದರ್ಶನಕ್ಕೀಡುವ ಮೂಲಕ ಕೂಡ ಗಮನ ಸೆಳೆಯುವ ಪ್ರಯತ್ನ ಮಾಡ್ತಾರೆ. ಸುದ್ದಿಯಾಗ್ತಾರೆ. ಇಂಥ ಪೂನಂ ಪಾಂಡೆ ಈಗ ಮತ್ತೊಮ್ಮೆ-ಮಗದೊಮ್ಮೆ ಪಡ್ಡೆಗಳ ಹೃದಯಕ್ಕೆ ಕನ್ನ ಹಾಕಿದ್ದಾರೆ. ತಮ್ಮ ಮಾದಕ ಮೈಮಾಟದಿಂದ ರಸಿಕರ ಕಣ್ಣರಳಿಸಿದ್ದಾರೆ

ಹೌದು.. ಸದಾ ಕಾಲ ಅರೆ ಬೆತ್ತಲೆ ಭಾವ ಚಿತ್ರ ಹಾಕಿ ಪಡ್ಡೆ ಹುಡುಗರ ಭಾವನೆಯನ್ನ ಕೆಣಕುತ್ತಿದ್ದ ಪೂನಂ ಪಾಂಡೆ, ಈಗ ಸೀದಾ ತಮ್ಮ ಅಡುಗೆ ಮನೆಗೆ ಎಲ್ಲರನ್ನ ಕರೆದೊಯ್ದಿದ್ದಾರೆ. ಬಿಳಿ ಬಣ್ಣದ ಏಪ್ರನ್ ಧರಿಸಿ, ತಲೆಗೊಂಡು ಚೆಫ್ ಟೋಪಿ ಹಾಕಿ ಕೇಕ್ ತಯಾರಿಸುವುದು ಹೇಗೆ ಎಂದು ಹೇಳಿದ್ದಾರೆ.

poonam-pandeys-latest-video-featuring-chocolate-temptations-in-the-kitchen

ಹೌದು. ಅಸಲಿಗೆ ತಮ್ಮ ಜೀವನ ಶೈಲಿಯ ಪ್ರತಿಯೊಂದು ವಿಚಾರವನ್ನ ಎಲ್ಲರ ಮುಂದೆ ಹಂಚಿಕೊಳ್ಳುತ್ತಾ, ದಿನನಿತ್ಯದ ತಮ್ಮ ಚಟುವಟಿಕೆಯನ್ನೆಲ್ಲ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಖಯಾಲಿಯನ್ನ ಹೊಂದಿರುವ ಪೂನಂ ಪಾಂಡೆ, ಸದ್ಯಕ್ಕೆ.. ಫುಡ್‌ಗಾಸಮ್‌ ಎಂಬ ಸರಣಿಯನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆರಂಭ ಮಾಡಿದ್ದಾರೆ.

ಈ ಸರಣಿಯಡಿಯಲ್ಲಿ ಕೇಕ್ ವಿಥ್ ಐಸ್‌ಕ್ರೀಂ ರೆಸಿಪಿಯನ್ನ ಪೂನಂ ಪಾಂಡೆ ತಮ್ಮ ಸಮಸ್ತ ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ. ಅತ್ಯಂತ ಪ್ರೀತಿಯಿಂದ ಚಾಕ್ಲೆಟ್ ಕೇಕ್ ತಯಾರಿಸಿದ್ದಾರೆ. ಚಾಕ್ಲೆಟ್ ಕೇಕ್ ಜೊತೆಗೆ ಐಸ್‌ಕ್ರೀಮ್ ಹಾಕಿ ಸವಿದಿದ್ದಾರೆ. ತಮ್ಮ ಈ ಐಸ್‌ ಕ್ರೀಮ್ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಕೂಡ ಪೂನಂ ಪಾಂಡೆ ಹಂಚಿಕೊಂಡಿದ್ದಾರೆ

ಪೂನಂ ಪಾಂಡೆ ನೀಡಿರುವ ಈ ಐಸ್‌ ಕ್ರೀಮ್‌ಗೆ ಸದ್ಯಕ್ಕೆ ಅನೇಕರ ಹೃದಯ ಕರಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಕಣ್ತುಂಬಿಕೊಂಡು ಒಂದು ವರ್ಗ ಪೂನಂ ಪಾಂಡೆಯವರ ಆರಾಧನೆಯನ್ನೂ ಮಾಡುತ್ತಿದೆ.

ನೀವು ತಪ್ಪಾಗಿ ಏಪ್ರನ್ ಧರಿಸಿದ್ದೀರಿ ಎಂದು ಕೆಲವರು ತಮ್ಮ ಅಭಿಪ್ರಾಯ ಹಂಚಿಕೊಂಡರೆ ಇನ್ನೂ ಕೆಲವರು ನಿಮ್ಮ ರೆಸಿಪಿ ಮತ್ತು ನೀವು ಎರಡು ಅದ್ಭುತ ಎನ್ನುತ್ತಿದ್ದಾರೆ. ಪೂನಂ ಪಾಂಡೆಯ ಸೌಂದರ್ಯವನ್ನೂ ಹಾಡಿ ಹೊಗಳುತ್ತಿದ್ದಾರೆ. ನಿಮ್ಮ ಐಸ್‌ ಕ್ರೀಮ್ ಕಂಡು ಬಾಯಲ್ಲಿ ನೀರು ಬಂತು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಖುದ್ದು ಪೂನಂ ಪಾಂಡೆ ಕೂಡ ಅಡುಗೆ ಮಾಡುವಾಗ ಏಪ್ರನ್‌ಕ್ಕಿಂತ ಮುಖ್ಯ ಯಾವುದು ಇಲ್ಲ ಎಂಬ ಅರ್ಥದಲ್ಲಿ ಸಾಲುಗಳನ್ನ ಬರೆದುಕೊಂಡು ಪಡ್ಡೆಗಳನ್ನ ಕೆಣಕುವ ಕೆಲಸ ಮಾಡಿದ್ದಾರೆ

poonam-pandeys-latest-video-featuring-chocolate-temptations-in-the-kitchen

ಸದ್ಯಕ್ಕೆ ಪೂನಂ ಪಾಂಡೆಯವರ ಈ ಕೇಕ್ ವಿಥ್ ಐಸ್‌ಕ್ರೀಂ ರೆಸಿಪಿಯ ಬಗ್ಗೆ ತಿಳಿದುಕೊಳ್ಳಲು ಅನೇಕರು ಇವರ ಇನ್ಸ್ಟಾಗ್ರಾಮ್‌ಗೆ ಲಗ್ಗೆ ಇಡುತ್ತಿದ್ದಾರೆ. ವೀಡಿಯೋ ನೋಡುತ್ತಾ ಕೇಕ್ ಮಾಡುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಪೂನಂ ಪಾಂಡೆಯವರ ಈ ವಿಡಿಯೋ ಮೇಲೆ ಲೈಕ್.. ಕಮೆಂಟ್ ಮತ್ತು ಶೇರ್‌ಗಳ ಸುರಿಮಳೆ ಆಗ್ತಿದೆ. ಕೇವಲ ತುಂಡೈಕ್ಳು ಅಷ್ಟೇ ಇರುವ ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಕೂಡ ಈ ವಿಡಿಯೋ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಪೂನಂ ಪಾಂಡೆಯ ಈ ಹಾಟ್ ಲುಕ್ ವೈರಲ್ ಆಗುತ್ತಿದೆ.

More from Filmibeat

English summary
"Poonam Pandey's Trending Video of Indulging in Chocolate Delights in the Kitchen - Captivating Clip"
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X