ಮುಸ್ಲಿಂ ಹುಡುಗನನ್ನು ಮದ್ವೆಯಾಗಿದ್ದಕ್ಕೆ ಮಗಳ ಲೇವಡಿ ಮಾಡಿದ ಸೋನಾಕ್ಷಿ ಸಿನ್ಹಾ ತಾಯಿ ..!

ಪ್ರೀತಿಗೆ ಹುಟ್ಟೋದು ಗೊತ್ತು.. ಸಾಯೋದು ಗೊತ್ತಿಲ್ಲ.. ನಗ್ಸೋದು ಗೊತ್ತು.. ನಗು ಕಸಿಯೋದು ಗೊತ್ತಿಲ್ಲ. ಧರ್ಮ, ಬಣ್ಣ, ಭಾ‍ಷೆ, ಮೇಲು-ಕೀಳಿನ ಕಿಂಚಿತ್ತೂ ಅರಿವು ಇದಕ್ಕಿಲ್ಲ. ಕಣ್ಣಲ್ಲ್ ಹುಟ್ಟೋ ಪ್ರೀತಿಗೆ ಮನಸ್ಸೆ ಸಾಕ್ಷಿ.. ಹೃದಯವೇ ಸ್ವರ್ಗ. ಇದಕ್ಕೆ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ತಾಜಾ ಉದಾಹರಣೆ

ಹೌದು, ಅಂತರ ಧರ್ಮವಾಗಿದ್ದರೂ, ವಯಸ್ಸಿನಲ್ಲಿ ಅಂತರ ಇದ್ದರೂ.. ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಎಂಬಂತೆ ಯಾರಿಗೂ ಕ್ಯಾರೇ ಎನ್ನದೇ ಮದುವೆಯಾದ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಸದ್ಯ ನೆಮ್ಮದಿಯಾಗಿ ಬದುಕುತ್ತಿದ್ದಾರೆ. ಜೀವನದ ಪ್ರತಿಯೊಂದು ಕ್ಷಣಗಳನ್ನು ಖುಷಿ ಖುಷಿಯಾಗಿ ಕಳೆಯುತ್ತಿದ್ದಾರೆ.

Poonam Sinha the mother of actress Sonakshi Sinha subtly takes a jibe at Zaheer Iqbal

ಆದರೆ, ಈ ಮದುವೆಯಿಂದ ಸೋನಾಕ್ಷಿ ಸಿನ್ಹಾ ತಾಯಿ ಪೂನಂ ಸಿನ್ಹಾ ಮತ್ತು ತಂದೆ ಶತ್ರುಘ್ನ ಸಿನ್ಹಾಗೆ ಖುಷಿಯಾದಂತೆ ಇಲ್ಲ. ಇದಕ್ಕೆ ಪುರಾವೆ ಎನ್ನುವಂತೆ ಇಬ್ಬರು ಆಗಾಗ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮಗಳ ಬಗ್ಗೆ ಕೊಂಕು ಮಾತುಗಳನ್ನಾಡುತ್ತಿದ್ದಾರೆ. ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಇದಕ್ಕೆ ಮತ್ತೊಂದು ಸಾಕ್ಷಿ.

ಹೌದು, ಅಸಲಿಗೆ ಶತ್ರುಘ್ನ ಸಿನ್ಹಾ, ಪೂನಂ ಸಿನ್ಹಾ, ಸೋನಾಕ್ಷಿ ಸಿನ್ಹಾ ಮತ್ತು ಅವರ ಪತಿ ಜಹೀರ್ ಇಕ್ಭಾಲ್ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋದಲ್ಲಿ ಭಾಗಿಯಾಗಿದ್ದರು. ಮನ ಬಿಚ್ಚಿ ಮಾತನಾಡಿದರು. ಆದರೆ, ಇದೇ ಸಮಯದಲ್ಲಿ ಪೂನಂ ಸಿನ್ಹಾ ತಮ್ಮ ಸ್ವಂತ ಮಗಳ ಲೇವಡಿಯನ್ನು ಮಾಡಿದ್ದಾರೆ. ಮಗಳ ಮದುವೆ ತಮಗೆ ಸುತಾರಾಂ ಇಷ್ಟ ಇರಲಿಲ್ಲ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿರುವ ಪೂನಂ ಸಿನ್ಹಾ ಯಾವಾಗಲೂ ನಿನ್ನನ್ನು ಯಾರು ಹೆಚ್ಚು ಪ್ರೀತಿಸುತ್ತಾರೋ ಅವರನ್ನು ಮದುವೆಯಾಗು ಎಂದು ನನ್ನ ತಾಯಿ ಹೇಳಿದ್ದರು. ನಾನು ನನ್ನ ತಾಯಿಯ ಮಾತಿನಂತೆ ನಡೆದುಕೊಂಡೆ. ನನ್ನನ್ನೂ ಹೆಚ್ಚು ಪ್ರೀತಿಸುವ ವ್ಯಕ್ತಿಯನ್ನೇ ನಾನು ಮದುವೆಯಾದೆ. ಆದರೆ ನನ್ನ ಮಗಳು ಮಾಡಿದ್ದೇನು ? ಅವಳು ಹೆಚ್ಚು ಪ್ರೀತಿಸಿದವಳನ್ನು ಮದುವೆಯಾದಳು ಎಂದಿದ್ದಾರೆ.

ತಾಯಿಯ ಈ ಮಾತುಗಳನ್ನು ಕೇಳಿ ವಿಚಲಿತಗೊಂಡಂತೆ ಕಂಡ ಸೋನಾಕ್ಷಿ ಸಿನ್ಹಾ, ತಕ್ಷಣವೇ ಉತ್ತರವನ್ನು ನೀಡಿದ್ದಾರೆ. ಯಾರು ಹೆಚ್ಚು ಪ್ರೀತಿಸುತ್ತಾರೆ ಎಂದು ಹೇಳುವುದು ಕಷ್ಟ, ಯಾಕೆಂದರೆ ಅವನು ನನ್ನನ್ನು ಹೆಚ್ಚು ಪ್ರೀತಿಸುತ್ತಾನೆ ಎಂದು ಅವನು ಅಂದುಕೊಳ್ಳುತ್ತಾನೆ. ನಾನು ಅವನನ್ನು ಹೆಚ್ಚು ಪ್ರೀತಿಸುತ್ತೇನೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಈ ಮೂಲಕ ತಾಯಿಗೆ ಉತ್ತರ ನೀಡಿದ್ದಾರೆ.

ಸದ್ಯ ಪೂನಂ ಸಿನ್ಹಾ ಮತ್ತು ಸೋನಾಕ್ಷಿ ಸಿನ್ಹಾ ಕಾರ್ಯಕ್ರಮದಲ್ಲಿ ಮಾತನಾಡಿದ ಈ ಮಾತುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಕೆಲವರು ಅದೊಂದು ಹಾಸ್ಯ ಕಾರ್ಯಕ್ರಮ ಅಲ್ಲಿ ನಕ್ಕು ನಲಿದು ಬರಬೇಕೆ ಹೊರತು ಮನದ ನೋವುಗಳನ್ನು, ಭಿನ್ನಾಭಿಪ್ರಾಯಗಳನ್ನು ಆ ವೇದಿಕೆಯಲ್ಲಿ ಹಂಚಿಕೊಳ್ಳಬಾರದು ಎಂದಿದ್ದಾರೆ. ಇನ್ನೂ ಕೆಲವರು ಪೂನಂ ಮಾತನಾಡಿದ ಮಾತುಗಳಿಂದ ಸೋನಾಕ್ಷಿ ಸಿನ್ಹಾ ಮತ್ತು ಆಕೆಯ ಗಂಡ ಜಹೀರ್ ಇಕ್ಭಾಲ್‌ಗೆ ನೋವಾಗಿದ್ದು ಸುಳ್ಳಲ್ಲ ಅವರ ಮುಖದಲ್ಲಿ ಆ ನೋವು ಕಾಣುತ್ತಿದೆ ಎಂದಿದ್ದಾರೆ. ಸೋನಾಕ್ಷಿ ಸಿನ್ಹಾ ಅವರ ತಾಯಿ ಈ ಮೂಲಕ ಹೇಳಲು ಹೊರಟಿರುವುದಾದರು ಏನು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಸೋನಾಕ್ಷಿ ಸಿನ್ಹಾ ಪರಿಸ್ಥಿತಿ ಸಂಭಾಳಿಸಿದ ರೀತಿಯನ್ನು ಮೆಚ್ಚಿಕೊಂಡಿದ್ದಾರೆ.

ಅಂದ್ಹಾಗೇ ಶತ್ರುಘ್ನ ಸಿನ್ಹಾ ಅವರ ಮನೆಯ ಹೆಸರು ರಾಮಾಯಣ. ಇಷ್ಟೇ ಅಲ್ಲ ಶತ್ರುಘ್ನ ಸಿನ್ಹಾ ಅವರಿಗೆ ರಾಮ್, ಭರತ್ ಮತ್ತು ಲಕ್ಷ್ಮಣ ಹೆಸರಿನ ಮೂವರು ಸೋದರರಿದ್ದಾರೆ. ಇನ್ನೂ ಶತ್ರುಘ್ನಾ ಸಿನ್ಹಾ ತಮ್ಮ ಇಬ್ಬರು ಮಕ್ಕಳಿಗೆ ಲವ ಮತ್ತು ಕುಶ ಎಂದು ಹೆಸರಿಟಿದ್ದಾರೆ. ಈ ಎಲ್ಲ ಕಾರಣಗಳಿಂದ ಮಗಳ ಈ ಅಂತರ ಧರ್ಮಿಯ ವಿವಾಹದಿಂದ ಶತ್ರುಘ್ನ ಸಿನ್ಹಾ ಅವರು ಖುಷಿಯಾಗಿಲ್ಲ ಎಂಬ ಮಾತು ಮೇಲಿಂದ ಮೇಲೆ ಕೇಳಿ ಬರುತ್ತಾನೇ ಇರುತ್ತೆ. ಇದಕ್ಕೆ ಪುಷ್ಠಿ ನೀಡುವಂತೆ ಪೂನಂ ಸಿನ್ಹಾ ಈಗ ಮಾತನಾಡಿದ್ದಾರೆ.ಈ ಎಲ್ಲ ಕಾರಣಗಳಿಂದ ಈಗ ಶತ್ರುಘ್ನ ಸಿನ್ಹಾ ಕುಟುಂಬದಲ್ಲಿ ಬಿರುಕು ಮೂಡಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

What did it mean lol
byu/Used_Confection6060 inBollyBlindsNGossip

More from Filmibeat

Read more about: sonakshi sinha marriage bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X