twitter
    For Quick Alerts
    ALLOW NOTIFICATIONS  
    For Daily Alerts

    'ಅಗಲಿದ ಗಾಯಕ KKಯನ್ನು ಬದುಕಿಸಬಹುದಿತ್ತು': ಪೋಸ್ಟ್-ಮಾರ್ಟಮ್ ಮಾಡಿದ ವೈದ್ಯರಿಂದಲೇ ಮಾಹಿತಿ!

    |

    ಕೇವಲ 53 ವರ್ಷ. ಮೇ 31ರಂದು ದಿಢೀರನೇ ಅಗಲಿದ ಕೆಕೆಯ ವಯಸ್ಸು. ನೋಡುವುದಕ್ಕೆ ಫಿಟ್ ಅಂಡ್ ಫೈನ್ ಆಗಿದ್ದ ಗಾಯಕ ದಿಢೀರನೇ ಸಾವನ್ನಪ್ಪಿದ್ದು ಹೇಗೆ? ಅಸಲಿ ಕಾರಣವೇನು? ಅನ್ನುವುದನ್ನು ತಿಳಿದುಕೊಳ್ಳಲು ಅವರ ಅಭಿಮಾನಿಗಳು ಕಾದು ಕೂತಿದ್ದರು. ಅದಕ್ಕೀಗ ಪೋಸ್ಟರ್ ಮಾರ್ಟಮ್ ಮಾಡಿದ ವೈದ್ಯರಿಂದಲೇ ಮಾಹಿತಿ ಸಿಕ್ಕಿದೆ.

    ಸಿನಿಮಾ ಕ್ಷೇತ್ರದಲ್ಲಿ ಕೆಕೆ ಅಂತಲೇ ಜನಪ್ರಿಯರಾಗಿದ್ದ ಕೃಷ್ಣಕುಮಾರ್ ಕುನ್ನತ್ ಅಗಲಿಕೆಯನ್ನು ಯಾವುದೇ ಚಿತ್ರರಂಗ ಕೂಡ ಒಪ್ಪಿಕೊಳ್ಳುತ್ತಿಲ್ಲ. ಎಲ್ಲಾ ಭಾಷೆಯ ಚಿತ್ರರಂಗ ಕೂಡ ಕೆಕೆಯ ಸಾವಿಗೆ ಕಂಬನಿ ಮಿಡಿಯುತ್ತಿದೆ. ಚಿತ್ರರಂಗದ ದಿಗ್ಗಜರೇ ಮಂಕಾಗಿದ್ದಾರೆ. ಕೆಲವರು ಕೆಕೆ ಹಾಡುಗಳನ್ನು ಮೆಲುಗು ಹಾಕುತ್ತಿದ್ದಾರೆ.

    ತಲೆ, ಮುಖದ ಮೇಲೆ ಗಾಯ, ಗಾಯಕ ಕೆಕೆ ಸಾವಿನ ಬಗ್ಗೆ ಗೊಂದಲ: ಆಯೋಜಕರ ಅಸಡ್ಡೆ ಕಾರಣ?ತಲೆ, ಮುಖದ ಮೇಲೆ ಗಾಯ, ಗಾಯಕ ಕೆಕೆ ಸಾವಿನ ಬಗ್ಗೆ ಗೊಂದಲ: ಆಯೋಜಕರ ಅಸಡ್ಡೆ ಕಾರಣ?

    ಕೋಲ್ಕತ್ತಾದಲ್ಲಿ ಲೈವ್ ಪರ್ಫಾಮೆನ್ಸ್ ನೀಡಿದ ಬಳಿಕ ಆಯೋಜಕರ ಮೇಲೆ ಆರೋಪ ಮಾಡಲಾಗಿತ್ತು. ಅಗತ್ಯಕ್ಕಿಂತ ಹೆಚ್ಚು ಜನರು ಸೇರಿದ್ದರಿಂದಲೇ ಹೀಗಾಗಿದೆ ಎಂದು ಹೇಳಲಾಗಿತ್ತು.ಈ ಚರ್ಚೆ ಆರಂಭ ಆಗುತ್ತಿದ್ದಂತೆ ಕೆಕೆಯ ಹೃದಯ ಸ್ತಂಭನಕ್ಕೆ ಅಸಲಿ ಕಾರಣವೇನು? ಅನ್ನುವುದನ್ನು ತಿಳಿದುಕೊಳ್ಳಲು ಕಾದು ಕೂತಿದ್ದರು. ಅದಕ್ಕೀಗ ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯರಿಂದಲೇ ಉತ್ತರ ನೀಡಿದ್ದು, ಗಾಯಕ ಕೆಕೆಯನ್ನು ಬದುಕಿಸಬಹುದಿತ್ತು ಎಂದು ವೈದ್ಯರು ಹೇಳಿದ್ದಾರೆ.

    ಕೆಕೆಯನ್ನು ಬದುಕಿಸಬಹುದಿತ್ತು

    ಕೆಕೆಯನ್ನು ಬದುಕಿಸಬಹುದಿತ್ತು

    ಲೈವ್ ಪರ್ಫಾಮೆನ್ಸ್‌ ಕೊಟ್ಟ ಒಂದು ಗಂಟೆ ಬಳಿಕ ಕೆಕೆ ಕುಸಿದು ಬಿದ್ದಿದ್ದರು. ಅವರನ್ನು ಹೊಟೇಲ್‌ನಿಂದ ಆಸ್ಪತ್ರೆಗೆ ಕರೆದುಕೊಂಡು ಬರುವಾಗಲೇ ಕೊನೆಯುಸಿರೆಳೆದಿದ್ದರು. ಹೀಗಾಗಿ ಕೆಕೆ ಸಾವನ್ನು ಅನುಮಾನಾಸ್ಪದವಾಗಿ ನೋಡಲಾಗಿತ್ತು. ಈ ಕಾರಣಕ್ಕೆ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಈಗ ಪೋಸ್ಟ್ ಮಾರ್ಟಮ್ ಮಾಡಿದ್ದ ವೈದ್ಯರು ಸರಿಯಾದ ಸಮಯಕ್ಕೆ ಕೆಕೆಗೆ ಸಿಪಿಆರ್ (cardiopulmonary resuscitation) ಮಾಡಿದ್ದರೆ ಬದುಕುತ್ತಿದ್ದರು ಎಂಬ ವೈದ್ಯರ ಹೇಳಿಕೆಯನ್ನು ಪಿಟಿಐ ವರದಿ ಮಾಡಿದೆ.

    ಕೆಕೆಗೆ ಹೃದಯದ ಸಮಸ್ಯೆಯಿತ್ತು

    ಕೆಕೆಗೆ ಹೃದಯದ ಸಮಸ್ಯೆಯಿತ್ತು

    ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯರು ಪಿಟಿಐಗೆ ನೀಡಿದ ವರದಿಯಲ್ಲಿ ಕೆಲವು ಅಂಶಗಳನ್ನುಹೊರಹಾಕಿದ್ದಾರೆ. " ಕೆಕೆಯವರಿಗೆ ದೀರ್ಘಕಾಲದಿಂದ ಹೃದಯದ ಸಮಸ್ಯೆಗಳಿತ್ತು. ಅದನ್ನು ಗುಣಪಡಿಸಿರಲಿಲ್ಲ. ಅವರ ಹೃದಯದಲ್ಲಿ ಬ್ಲಾಕೇಜ್‌ಗಳಿದ್ದವು. ಕೆಲವೆಡೆ ಬ್ಲಾಕೇಜ್‌ಗಳು ಇದ್ದಿದ್ದು ಗೊತ್ತಾಗಿದೆ. ಶೇ.80ರಷ್ಟು ಬ್ಲಾಕೇಜ್ ಎಡ ಭಾಗದ ಹೃದಯದಲ್ಲಿ ಕಂಡು ಬಂದಿದೆ. ಉಳಿದ ಕೆಲವೆಡೆ ಚಿಕ್ಕಪುಟ್ಟ ಬ್ಲಾಕೇಜ್‌ಗಳಿತ್ತು." ಎಂದಿದ್ದಾರೆ.

    ಅತಿ ಉತ್ಸಾಹವೇ ಕಾರಣ

    ಅತಿ ಉತ್ಸಾಹವೇ ಕಾರಣ

    ಕೊಲ್ಕತ್ತಾದಲ್ಲಿ ಲೈವ್ ಪರ್ಫಾಮೆನ್ಸ್ ನೀಡುವಾಗ ಕೆಕೆ ಅತಿಯಾದ ಉತ್ಸಾಹದಿಂದ ಹಾಡಿದ್ದರು. ಅಲ್ಲದೆ ಜನರೊಂದಿಗೆ ಕುಣಿದು ಕುಪ್ಪಳಿಸಿದ್ದರು. ಈ ವೇಳೆ ರಕ್ತ ಸಂಚಾರ ಆಗುವುದು ನಿಂತಿದೆ. ಇದು ಹೃದಯ ಸ್ತಂಭನಕ್ಕೆ ಕಾರಣ. ಈ ವೇಳೆ ಕೆಕೆ ಪ್ರಜ್ಞಾನಹೀನಾರಾಗಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಸರಿಯಾದ ಸಮಯಕ್ಕೆ ಸಿಪಿಆರ್ ಮಾಡಿದ್ದರು ಅವರನ್ನು ಉಳಿಸಬಹುದಿತ್ತು ಎಂದು ಹೇಳಿದ್ದಾರೆ.

    ಮುಂಬೈನಲ್ಲಿ ಕೆಕೆ ಅಂತಿಮ ನಮನ

    ಮುಂಬೈನಲ್ಲಿ ಕೆಕೆ ಅಂತಿಮ ನಮನ

    ಪೋಸ್ಟ್ ಮಾರ್ಟಮ್ ಬಳಿಕ ಕೆಕೆ ಪಾರ್ಥಿವ ಶರೀರವನ್ನು ಮುಂಬೈಗೆ ತೆಗೆದುಕೊಂಡು ಬರಲಾಗಿತ್ತು. ಬಳಿಕ ಚಿತ್ರರಂಗದ ಗಣ್ಯರು ಹಾಗೂ ಆಪ್ತರಿಗೆ ಅಂತಿಮ ದರ್ಶನ ಮಾಡಲು ಅವಕಾಶ ನೀಡಲಾಗಿತ್ತು. ಶ್ರೇಯಾ ಘೋಷಾಲ್, ಜಾವೆದ್ ಅಕ್ತರ್, ಅಭಿಜಿತ್, ಸಲೀಂ ಮರ್ಚೆಂಟ್, ಹರ್ಷ್‌ದೀಲ್ ಕೌರ್, ಜಾವೆದ್ ಅಲಿ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದಿದ್ದಾರೆ.

    English summary
    Post Mortem Conducted Doctor Said KK Could Have Been Saved With CPR, Know More.
    Thursday, June 2, 2022, 17:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X