ಸುಶಾಂತ್ ಸಿಂಗ್ ಜೀವನಾಧಾರಿತ ಸಿನಿಮಾದ ನಾಯಕ ಇವರೇ
ಸ್ವಪ್ರತಿಭೆಯಿಂದ, ಒಂದೊಂದೇ ಮೆಟ್ಟಿಲು ಹತ್ತಿ ಬಾಲಿವುಡ್‌ನಲ್ಲಿ ಸ್ಟಾರ್ ಆಗಿ ಮೆರೆದ ಸುಶಾಂತ್ ಸಿಂಗ್ ಅಷ್ಟೇ ಬೇಗ ಜೀವನವನ್ನು ಅಂತ್ಯಗೊಳಿಸಿದರು.
Recommended Video
ಹೀರೋ ಹಿಂದೆ ಹಿಂದಿನ ಸಾಲಿನಲ್ಲಿ ನಿಂತು ಡಾನ್ಸ್ ಮಾಡುವುದರಿಂದ ಆರಂಭಿಸಿ ಕೋಟ್ಯಂತರ ಬಂಡವಾಳದ ಸಿನಿಮಾಗಳಿಗೆ ನಾಯಕ ಆಗುವವರೆಗೆ ಸುಶಾಂತ್ ಸಿಂಗ್ ಸಿನಿ ಪಯಣ ಅದ್ಭುತ ಮತ್ತು ಪ್ರೇರಣಾದಾಯಕ.
ಅವರ ಸಾವೂ ಸಹ ಅಷ್ಟೇ ದಾರುಣ, ಯಶಸ್ಸು, ಕೀರ್ತಿ, ಹಣ ಎಲ್ಲವೂ ಇದ್ದರೂ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾದರು. ಅವರ ಸಾವಿಗೆ ಕಾರಣವೇನು ಎಂಬುದರ ಬಗ್ಗೆ ದೊಡ್ಡ ಮಟ್ಟದ ಚರ್ಚೆಯೇ ಪ್ರಾರಂಭವಾಗಿದೆ. ಬಾಲಿವುಡ್‌ನ ಹಿರಿತಲೆಗಳ ಮೇಲೆ ಅನುಮಾನದ ಕತ್ತಿ ಸುಳಿದಾಡುತ್ತಿದೆ.

ನಟನಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು
ಸುಶಾಂತ್ ಸಿಂಗ್ ನಿಧನ ಹೊಂದಿದ ಕೆಲವೇ ದಿನಕ್ಕೆ ಅವರ ಕುರಿತಾದ ಸಿನಿಮಾ ಮಾಡುವುದಾಗಿ ಘೋಷಿಸಿಯಾಗಿತ್ತು. ಹೆಸರೂ ಸಹ ನೊಂದಣಿ ಆಗಿತ್ತು. ನಿರ್ದೇಶಕರು ಸಹ ನಿಗದಿಯಾಗಿದ್ದರು. ಸುಶಾಂತ್ ಸಿಂಗ್ ಪಾತ್ರವನ್ನು ಶಕ್ತಿವಾಗಿ ನಿರ್ವಹಿಸುವುವರಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು.

ಸುಶಾಂತ್ ಹೋಲುವ ನಟನ ಆಯ್ಕೆ
ಸುಶಾಂತ್ ಸಿಂಗ್ ಜೀವನ ಆಧಾರಿತ ಸಿನಿಮಾದಲ್ಲಿ ತುಸು ಸುಶಾಂತ್ ಅನ್ನೇ ಹೋಲುವ ಸಚಿನ್ ತಿವಾರಿ ಎಂಬ ನಟ ನನ್ನು ಆಯ್ಕೆ ಮಾಡಲಾಗಿದೆ. ಈತ ತುಸು ಸುಶಾಂತ್ ಅನ್ನೇ ಹೋಲುವ ಮುಖಚರ್ಯೆ ಹೊಂದಿದ್ದಾರೆ. ಮತ್ತು ಯಾವುದೇ ಸಿನಿಮಾ ಹಿನ್ನೆಲೆಯುಳ್ಳ ಕುಟುಂಬದ ವ್ಯಕ್ತಿಯಲ್ಲ ಎಂದು ಚಿತ್ರತಂಡ ಹೇಳಿದೆ.

'ಸೂಸೈಡ್ ಆರ್ ಮರ್ಡರ್' ಎಂದು ಹೆಸರು
ಸುಶಾಂತ್ ಸಿಂಗ್ ಜೀವನ ಆಧರಿಸಿ ನಿರ್ಮಾಣವಾಗುತ್ತಿರುವ ಈ ಸಿನಿಮಾಕ್ಕೆ 'ಸೂಸೈಡ್ ಆರ್ ಮರ್ಡರ್; ಎ ಸ್ಟಾರ್ ಲಾಸ್' ಎಂದು ಹೆಸರಿಡಲಾಗಿದ್ದು, ಸಿನಿಮಾದ ಕತೆಯು ಸುಶಾಂತ್ ಅವರ ಆತ್ಮಹತ್ಯೆಯ ಸುತ್ತವೇ ಸುತ್ತಲಿದೆ ಎಂದು ಅಂದಾಜಿಸಬಹದಾಗಿದೆ.

ಪೊಸ್ಟರ್ ಇಂದು ಬಿಡುಗಡೆ
ಸಿನಿಮಾದ ಪೋಸ್ಟರ್ ಸೋಮವಾರ ಬಿಡುಗಡೆ ಆಗಿದ್ದು, ಸಿನಿಮಾವನ್ನು ಶಮಿಕ್ ಮಲ್ಲಿಕ್ ನಿರ್ದೇಶಿಸಿದ್ದಾರೆ. ಸಿನಿಮಾವು ಮುಂಬೈ ಮತ್ತು ಪಂಜಾಬ್‌ಗಳಲ್ಲಿ ಚಿತ್ರೀಕರಣ ಆಗಲಿದ್ದು, ಸಿನಿಮಾವು ಸೆಪ್ಟೆಂಬರ್ ವೇಳೆಗೆ ಚಿತ್ರೀಕರಣ ಪ್ರಾರಂಭಿಸಲಿದೆ.


Click it and Unblock the Notifications