For Quick Alerts
  ALLOW NOTIFICATIONS  
  For Daily Alerts

  ಸಿನಿಮಾಕ್ಕಾಗಿ ಪ್ರಭಾಸ್-ಸೈಪ್ ಅಲಿ ಖಾನ್ ತೆಗೆದುಕೊಳ್ಳುತ್ತಿದ್ದಾರೆ ದೊಡ್ಡ ರಿಸ್ಕ್

  |

  ನಟ ಪ್ರಭಾಸ್ ರಾಮಾಯಣ ಕತೆ ಆಧರಿಸಿದ 'ಆದಿಪುರುಷ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್ ರಾಂನ ಪಾತ್ರದಲ್ಲಿ ನಟಿಸುತ್ತಿದ್ದರೆ ನಟ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಪ್ರಭಾಸ್ ಹಾಗೂ ಸೈಫ್ ಇಬ್ಬರೂ ಸಹ ತಮ್ಮ ಪಾತ್ರಕ್ಕೆ ತಮ್ಮ ಸರ್ವಸ್ವವನ್ನೂ ಅರ್ಪಿಸುವ ಶ್ರದ್ಧೆಯುಳ್ಳ ನಟರು. ಸ್ವಾಭಾವಿಕವಾಗಿಯೇ ಈ ಇಬ್ಬರೂ ನಟರು ಬಹುನಿರೀಕ್ಷಿತ ಹಾಗೂ ಮುಖ್ಯವಾದ ಸಿನಿಮಾ 'ಆದಿಪುರುಷ್‌'ಗಾಗಿ ಭಾರಿ ಬದಲಾವಣೆಗೆ ತಮ್ಮ ದೇಹವನ್ನು ಒಡ್ಡಿಕೊಂಡಿದ್ದಾರೆ.

  ಇತ್ತೀಚೆಗಷ್ಟೆ ಮಾಧ್ಯಮದೊಟ್ಟಿಗೆ ಮಾತನಾಡಿರುವ 'ಆದಿಪುರುಷ್' ಸಿನಿಮಾ ನಿರ್ದೇಶಕ ಓಂ ರಾವತ್, ಪ್ರಭಾಸ್ ಹಾಗೂ ಸೈಫ್ ಅಲಿ ಖಾನ್ ಅವರುಗಳು ತಮ್ಮ ಪಾತ್ರಕ್ಕಾಗಿ ಮಾಡಿಕೊಳ್ಳುತ್ತಿರುವ ತಯಾರಿಗಳ ಬಗ್ಗೆ ಮಾತನಾಡಿದ್ದಾರೆ.

  'ಪ್ರಭಾಸ್ ಹಾಗೂ ಸೈಫ್ ಅಲಿ ಖಾನ್ ಅವರುಗಳು 'ಆದಿಪುರುಷ್' ಸಿನಿಮಾಕ್ಕಾಗಿ ತಮ್ಮ ದೇಹದಾರ್ಡ್ಯದಲ್ಲಿ ಭಾರಿ ಬದಲಾವಣೆ ಮಾಡಿಕೊಂಡಿದ್ದಾರೆ. ಪೌರಾಣಿಕ ಸಿನಿಮಾ ಆಗಿರುವ ಕಾರಣ ಈ ಸಿನಿಮಾಕ್ಕೆ ಬೇರೆಯದೇ ಮಾದರಿಯ ಅಂಗಸೌಷ್ಟವದ ಅವಶ್ಯಕತೆ ಇತ್ತು, ಇಬ್ಬರೂ ಹೊಸ ರೀತಿಯ ವ್ಯಾಯಾಮ, ಡಯೆಟ್‌ಗಳನ್ನು ಮಾಡುತ್ತಿದ್ದಾರೆ' ಎಂದಿದ್ದಾರೆ ಓಂ ರಾವತ್.

  ಸೀತೆ ಪಾತ್ರ ನಿರ್ವಹಿಸುತ್ತಿರುವ ಕೃತಿ ಸೆನನ್ ಬಗ್ಗೆಯೂ ಮಾತನಾಡಿರುವ ಓಂ ರಾವತ್, ' ಕೃತಿ ಸೆನನ್ ಸಹ ತನ್ನ ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದಾಳೆ. ಆಕೆ ತೆಲಗು, ತಮಿಳು ಭಾಷೆಗಳನ್ನು ಕಲಿಯುತ್ತಿದ್ದಾಳೆ. ಆಕೆಯ ಜೊತೆ ಕೆಲಸ ಮಾಡುವ ಅನುಭವ ಅದ್ಭುತವಾಗಿದೆ' ಎಂದಿದ್ದಾರೆ.

  ತೀವ್ರ ಜ್ವರದ ಹಿನ್ನೆಲೆ ಅಪೋಲೋ ಆಸ್ಪತ್ರೆಗೆ ದಾಖಲಾದ ನಿಖಿಲ್ ಕುಮಾರಸ್ವಾಮಿ | Filmibeat Kannada

  'ಆದಿಪುರುಷ್' ಸಿನಿಮಾ ಭಾರತದ ಮೊದಲ ಬಿಗ್‌ಬಜೆಟ್ ಸಿನಿಮಾ ಎನಿಸಿಕೊಳ್ಳಲಿದೆ. ಟಿ ಸೀರೀಸ್‌ನ ಭೂಷಣ್ ಕುಮಾರ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

  English summary
  Actor Prabhas and Saif Ali Khan body transformation for Adipurush movie. Movie is on Ramayana.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X