Don't Miss!
- Education
Chamarajanagar WCD Recruitment 2021: 223 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ - Sports
ಐಪಿಎಲ್ 2021: ಕೊಲ್ಕತ್ತಾ ಮತ್ತು ಪಂಜಾಬ್ ಮುಖಾಮುಖಿಯ ಅಂಕಿಅಂಶ - Automobiles
ಕೇವಲ 2.7 ಸೆಕೆಂಡ್ನಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ, ಹೊಸ ಫೆರಾರಿ ಕಾರು ಅನಾವರಣ - News
ಪಂಡಿತ್ ರಾಜನ್ ಮಿಶ್ರಾ ನಿಧನಕ್ಕೆ ಪ್ರಧಾನ ಮಂತ್ರಿ ಸಂತಾಪ - Lifestyle
ಈ ನೈಸರ್ಗಿಕ ವಿಷಯಗಳಿಂದ ನಿಮ್ಮ ಬ್ಲಾಕ್ ಹೆಡ್ಸ ನ್ನು ತೆಗೆದುಹಾಕಬಹುದು - Finance
ಚಿನ್ನದ ಬೆಲೆ ಇಳಿಕೆ: 3 ದಿನಗಳಲ್ಲಿ 1,000 ರೂಪಾಯಿ ಕುಸಿತ - Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ! - Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಿನಿಮಾಕ್ಕಾಗಿ ಪ್ರಭಾಸ್-ಸೈಪ್ ಅಲಿ ಖಾನ್ ತೆಗೆದುಕೊಳ್ಳುತ್ತಿದ್ದಾರೆ ದೊಡ್ಡ ರಿಸ್ಕ್
ನಟ ಪ್ರಭಾಸ್ ರಾಮಾಯಣ ಕತೆ ಆಧರಿಸಿದ 'ಆದಿಪುರುಷ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್ ರಾಂನ ಪಾತ್ರದಲ್ಲಿ ನಟಿಸುತ್ತಿದ್ದರೆ ನಟ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಪ್ರಭಾಸ್ ಹಾಗೂ ಸೈಫ್ ಇಬ್ಬರೂ ಸಹ ತಮ್ಮ ಪಾತ್ರಕ್ಕೆ ತಮ್ಮ ಸರ್ವಸ್ವವನ್ನೂ ಅರ್ಪಿಸುವ ಶ್ರದ್ಧೆಯುಳ್ಳ ನಟರು. ಸ್ವಾಭಾವಿಕವಾಗಿಯೇ ಈ ಇಬ್ಬರೂ ನಟರು ಬಹುನಿರೀಕ್ಷಿತ ಹಾಗೂ ಮುಖ್ಯವಾದ ಸಿನಿಮಾ 'ಆದಿಪುರುಷ್'ಗಾಗಿ ಭಾರಿ ಬದಲಾವಣೆಗೆ ತಮ್ಮ ದೇಹವನ್ನು ಒಡ್ಡಿಕೊಂಡಿದ್ದಾರೆ.
ಇತ್ತೀಚೆಗಷ್ಟೆ ಮಾಧ್ಯಮದೊಟ್ಟಿಗೆ ಮಾತನಾಡಿರುವ 'ಆದಿಪುರುಷ್' ಸಿನಿಮಾ ನಿರ್ದೇಶಕ ಓಂ ರಾವತ್, ಪ್ರಭಾಸ್ ಹಾಗೂ ಸೈಫ್ ಅಲಿ ಖಾನ್ ಅವರುಗಳು ತಮ್ಮ ಪಾತ್ರಕ್ಕಾಗಿ ಮಾಡಿಕೊಳ್ಳುತ್ತಿರುವ ತಯಾರಿಗಳ ಬಗ್ಗೆ ಮಾತನಾಡಿದ್ದಾರೆ.
'ಪ್ರಭಾಸ್ ಹಾಗೂ ಸೈಫ್ ಅಲಿ ಖಾನ್ ಅವರುಗಳು 'ಆದಿಪುರುಷ್' ಸಿನಿಮಾಕ್ಕಾಗಿ ತಮ್ಮ ದೇಹದಾರ್ಡ್ಯದಲ್ಲಿ ಭಾರಿ ಬದಲಾವಣೆ ಮಾಡಿಕೊಂಡಿದ್ದಾರೆ. ಪೌರಾಣಿಕ ಸಿನಿಮಾ ಆಗಿರುವ ಕಾರಣ ಈ ಸಿನಿಮಾಕ್ಕೆ ಬೇರೆಯದೇ ಮಾದರಿಯ ಅಂಗಸೌಷ್ಟವದ ಅವಶ್ಯಕತೆ ಇತ್ತು, ಇಬ್ಬರೂ ಹೊಸ ರೀತಿಯ ವ್ಯಾಯಾಮ, ಡಯೆಟ್ಗಳನ್ನು ಮಾಡುತ್ತಿದ್ದಾರೆ' ಎಂದಿದ್ದಾರೆ ಓಂ ರಾವತ್.
ಸೀತೆ ಪಾತ್ರ ನಿರ್ವಹಿಸುತ್ತಿರುವ ಕೃತಿ ಸೆನನ್ ಬಗ್ಗೆಯೂ ಮಾತನಾಡಿರುವ ಓಂ ರಾವತ್, ' ಕೃತಿ ಸೆನನ್ ಸಹ ತನ್ನ ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದಾಳೆ. ಆಕೆ ತೆಲಗು, ತಮಿಳು ಭಾಷೆಗಳನ್ನು ಕಲಿಯುತ್ತಿದ್ದಾಳೆ. ಆಕೆಯ ಜೊತೆ ಕೆಲಸ ಮಾಡುವ ಅನುಭವ ಅದ್ಭುತವಾಗಿದೆ' ಎಂದಿದ್ದಾರೆ.
'ಆದಿಪುರುಷ್' ಸಿನಿಮಾ ಭಾರತದ ಮೊದಲ ಬಿಗ್ಬಜೆಟ್ ಸಿನಿಮಾ ಎನಿಸಿಕೊಳ್ಳಲಿದೆ. ಟಿ ಸೀರೀಸ್ನ ಭೂಷಣ್ ಕುಮಾರ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications






























