ಬೆಂಗಳೂರಿನಲ್ಲಿ 100+ ಮುಂಜಾನೆ ಪ್ರದರ್ಶನಗಳು; ಕನ್ನಡದ ನಟರನ್ನೂ ಮೀರಿಸಿದ ಪರಭಾಷಾ ಸ್ಟಾರ್ಸ್!
ಸದ್ಯ ಎಲ್ಲೆಡೆ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಚಿತ್ರ ಆದಿಪುರುಷ್ ಹವಾ ಜೋರಾಗಿದೆ. ಚಿತ್ರ ಇದೇ ಶುಕ್ರವಾರ ( ಜೂನ್ 16 ) ಬಿಡುಗಡೆಯಾಗಲಿದ್ದು, ಪ್ರಭಾಸ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಲು ಕಾತರರಾಗಿದ್ದಾರೆ.
ಇನ್ನು ಈ ಚಿತ್ರದ ಮುಂಗಡ ಬುಕಿಂಗ್ ಭಾನುವಾರವೇ ಆರಂಭಗೊಂಡಿದ್ದು, ಟಿಕೆಟ್ ಖರೀದಿಗಾಗಿ ಫ್ಯಾನ್ಸ್ ಹಾಗೂ ಮೂವಿ ಲವರ್ಸ್ ಮುಗಿಬಿದ್ದಿದ್ದಾರೆ. ಇನ್ನು ಎಲ್ಲಾ ಭಾಷೆಯ ಸಿನಿಮಾಗಳನ್ನು ವೀಕ್ಷಿಸುವಾಗ ಸಿನಿ ರಸಿಕರು ಇರುವ ಬೆಂಗಳೂರಿನಲ್ಲೂ ಸಹ ಆದಿಪುರುಷ್ ಹವಾ ಜೋರಾಗಿದೆ.

ಮೂಲ ಹಿಂದಿ ಚಿತ್ರವಾಗಿರುವ ಆದಿಪುರುಷ್ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆಗೊಳ್ಳುತ್ತಿದ್ದು, ಬೆಂಗಳೂರಿನಲ್ಲಿ ಕನ್ನಡದ ಜತೆಗೆ ತೆಲುಗು ಹಾಗೂ ಹಿಂದಿ ಅವತರಣಿಕೆಗಳ ಬುಕಿಂಗ್ ಅನ್ನೂ ಸಹ ತೆರೆಯಲಾಗಿದೆ.
ಕನ್ನಡಕ್ಕೂ ಮುನ್ನ ತೆಲುಗು ಹಾಗೂ ಹಿಂದಿ ಭಾಷೆಯ ಅವತರಣಿಕೆಗಳ ಬುಕಿಂಗ್ ಅನ್ನೇ ತೆರೆಯಲಾಗಿದ್ದ ಬೆಂಗಳೂರಿನಲ್ಲಿ ಈಗಲೂ ಸಹ ಕನ್ನಡಕ್ಕಿಂತ ಹಿಂದಿ ಹಾಗೂ ತೆಲುಗು ಅವತರಣಿಕೆಗಳಿಗೆ ಹೆಚ್ಚು ಪ್ರದರ್ಶನಗಳನ್ನು ನೀಡಲಾಗಿದೆ.
ಹೀಗೆ ಬೆಂಗಳೂರಿನಲ್ಲಿ ಒಟ್ಟು ಮೂರು ಭಾಷೆಯ ಪ್ರದರ್ಶನಗಳು ಆದಿಪುರುಷ್ ಚಿತ್ರಕ್ಕೆ ತೆರೆಯಲಾಗಿದ್ದು, ಮೊದಲ ದಿನದ ಒಟ್ಟು ಪ್ರದರ್ಶನಗಳ ಸಂಖ್ಯೆ ಈಗಾಗಲೇ 600 ದಾಟಿದೆ. ಬಿಡುಗಡೆಗೆ ಇನ್ನೂ ಎರಡು ದಿನ ಬಾಕಿ ಇರುವಾಗಲೇ ಇಷ್ಟು ದೊಡ್ಡಮಟ್ಟದ ಪ್ರದರ್ಶನಗಳನ್ನು ಆದಿಪುರುಷ್ ಪಡೆದುಕೊಂಡಿದ್ದು, ನಾಳೆ ಈ ಸಂಖ್ಯೆಯಲ್ಲಿ ದೊಡ್ಡ ಏರಿಕೆ ಕಾಣುವ ನಿರೀಕ್ಷೆ ಇದೆ.
ಈ ಮೂಲಕ ಆದಿಪುರುಷ್ ಅರ್ಲಿ ಮಾರ್ನಿಂಗ್ ಶೋ ( Early Morning Show ) ದಾಖಲೆಯನ್ನೂ ಸಹ ಬರೆದಿದೆ. ಹೌದು, ಬೆಂಗಳೂರು ನಗರದಲ್ಲಿ ಬೆಳಗ್ಗೆ 8ರ ಒಳಗೆ 100ಕ್ಕೂ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಚಿತ್ರ ಎನಿಸಿಕೊಂಡಿದೆ. ಮುಂಜಾನೆಯ ವೇಳೆ ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕೆಲವೊಂದಷ್ಟು ಚಿತ್ರಗಳು ಮಾತ್ರ ಪಡೆದುಕೊಂಡಿವೆ.
ಇನ್ನು ಆದಿಪುರುಷ್ ಬೆಂಗಳೂರಿನಲ್ಲಿ ಬಿಡುಗಡೆಯ ದಿನ ನೂರಕ್ಕೂ ಹೆಚ್ಚು ಮುಂಜಾನೆ ಪ್ರದರ್ಶನ ಪಡೆದುಕೊಳ್ಳುತ್ತಿರುವ ಪ್ರಭಾಸ್ ನಟನೆಯ ಮೂರನೇ ಚಿತ್ರವಾಗಿದ್ದು, ಈ ಮೂಲಕ ಪ್ರಭಾಸ್ ನಗರದಲ್ಲಿ ಅತಿಹೆಚ್ಚು ಮುಂಜಾನೆ ಪ್ರದರ್ಶನಗಳನ್ನು ಹೊಂದಿದ ಅತಿಹೆಚ್ಚು ಚಿತ್ರಗಳನ್ನು ಹೊಂದಿರುವ ನಟ ಎಂಬ ನೂತನ ದಾಖಲೆ ಬರೆದಿದ್ದಾರೆ.
ಹಾಗಿದ್ದರೆ ಬೆಂಗಳೂರಿನಲ್ಲಿ ಅತಿಹೆಚ್ಚು ಮುಂಜಾನೆ ಪ್ರದರ್ಶನಗಳನ್ನು ಹೊಂದಿರುವ ನಟರುಗಳು ಯಾರು ಎಂಬ ಮಾಹಿತಿ ಈ ಕೆಳಕಂಡ ಪಟ್ಟಿಯಲ್ಲಿದೆ.
* ಪ್ರಭಾಸ್ ನಟನೆಯ ಬಾಹುಬಲಿ 2, ಸಾಹೋ ಹಾಗೂ ಆದಿಪುರುಷ್ ಈ ಮೂರು ಚಿತ್ರಗಳು ಬೆಂಗಳೂರು ನಗರದಲ್ಲಿ ನೂರಕ್ಕೂ ಹೆಚ್ಚು ಮುಂಜಾನೆ ಪ್ರದರ್ಶನಗಳನ್ನು ಹೊಂದಿವೆ. ಈ ಮೂಲಕ ಪ್ರಭಾಸ್ ನಟನೆಯ ಒಟ್ಟು 3 ಚಿತ್ರಗಳು ಬೆಂಗಳೂರಿನಲ್ಲಿ ಅತಿಹೆಚ್ಚು ಮುಂಜಾನೆ ಪ್ರದರ್ಶನಗಳನ್ನು ಹೊಂದಿದಂತಾಗಿವೆ.
* ರಜನಿಕಾಂತ್ ನಟನೆಯ ಒಟ್ಟು 2 ಚಿತ್ರಗಳು ಬೆಂಗಳೂರು ನಗರದಲ್ಲಿ ನೂರಕ್ಕೂ ಹೆಚ್ಚು ಮುಂಜಾನೆ ಪ್ರದರ್ಶನಗಳನ್ನು ಹೊಂದಿವೆ.
* ರಾಕಿಂಗ್ ಸ್ಟಾರ್ ಯಶ್ ನಟನೆಯ ಒಟ್ಟು 2 ಚಿತ್ರಗಳು ಬೆಂಗಳೂರು ನಗರದಲ್ಲಿ ನೂರಕ್ಕೂ ಹೆಚ್ಚು ಮುಂಜಾನೆ ಪ್ರದರ್ಶನಗಳನ್ನು ಹೊಂದಿವೆ.
* ಪುನೀತ್ ರಾಜ್‌ಕುಮಾರ್ ನಟನೆಯ 1 ಚಿತ್ರ ಬೆಂಗಳೂರು ನಗರದಲ್ಲಿ ನೂರಕ್ಕೂ ಹೆಚ್ಚು ಮುಂಜಾನೆ ಪ್ರದರ್ಶನಗಳನ್ನು ಹೊಂದಿದೆ.
* ರಾಮ್ ಚರಣ್ ಹಾಗೂ ಜೂನಿಯರ್ ಎನ್‌ಟಿಆರ್ ನಟನೆಯ ಒಂದು ಚಿತ್ರ ಬೆಂಗಳೂರು ನಗರದಲ್ಲಿ ನೂರಕ್ಕೂ ಹೆಚ್ಚು ಮುಂಜಾನೆ ಪ್ರದರ್ಶನಗಳನ್ನು ಹೊಂದಿದೆ.
* ತಮಿಳು ನಟ ವಿಜಯ್ ನಟನೆಯ ಒಂದು ಚಿತ್ರ ಬೆಂಗಳೂರು ನಗರದಲ್ಲಿ ನೂರಕ್ಕೂ ಹೆಚ್ಚು ಮುಂಜಾನೆ ಪ್ರದರ್ಶನಗಳನ್ನು ಹೊಂದಿದೆ.
ಈ ಮೂಲಕ ಪ್ರಭಾಸ್ ಈ ಅಂಕಿಅಂಶದಲ್ಲಿ ಯಶ್ ಹಾಗೂ ರಜನಿಕಾಂತ್ ಈ ಇಬ್ಬರನ್ನೂ ಹಿಂದಿಕ್ಕಿದ್ದು, ಅಗ್ರಸ್ಥಾನಕ್ಕೇರಿದ್ದಾರೆ.


Click it and Unblock the Notifications











