For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ಪಡುಕೋಣೆ ಹುಟ್ಟುಹಬ್ಬಕ್ಕೆ ವಿಶ್ ಮಾಡಿ 'ಸೂಪರ್ ಸ್ಟಾರ್' ಎಂದು ಕರೆದ ಪ್ರಭಾಸ್

  |

  ಬಾಲಿವುಡ್ ನ ಬ್ಯೂಟಿಫುಲ್ ಅಂಡ್ ಟ್ಯಾಲೆಂಟೆಡ್ ನಟಿ ದೀಪಿಕಾ ಪಡುಕೋಣೆಗೆ ಇಂದು ಹುಟ್ಟುಹಬ್ಬದ ಸಂಭ್ರಮ. 35 ವಸಂತಕ್ಕೆ ಕಾಲಿಟ್ಟಿರುವ ನಟಿ ದೀಪಿಕಾ ಕುಟುಂಬದವರು ಮತ್ತು ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಕೊಳ್ಳುತ್ತಿದ್ದಾರೆ. ದೀಪಿಕಾ ಮತ್ತು ರಣ್ವೀರ್ ದಂಪತಿ ಕಳೆದ ವರ್ಷ ಡಿಸೆಂಬರ್ ಕೊನೆಯಲ್ಲಿ ರಾಜಸ್ಥಾನದ ಪ್ರವಾಸ ಕೈಗೊಂಡಿದ್ದರು. ಹೊಸ ವರ್ಷವನ್ನು ಜೈಪುರದಲ್ಲೇ ಆಚರಣೆ ಮಾಡಿರುವ ಜೋಡಿ ಇದೀಗ ಜನ್ಮದಿನಾಚರಣೆಯನ್ನು ಅಲ್ಲೇ ಸಂಭ್ರಮಿಸಿದ್ದಾರೆ.

  ದೀಪಿಕಾ ಪಡುಕೋಣೆ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು ಮತ್ತು ಸಿನಿಮಾರಂಗದ ಗಣ್ಯರು ವಿಶ್ ಮಾಡಿ, ಪ್ರೀತಿಯ ಸಂದೇಶ ರವಾನಿಸುತ್ತಿದ್ದಾರೆ. ವಿಶೇಷ ಎಂದರೆ ದೀಪಿಕಾ ಹುಟ್ಟುಹಬ್ಬಕ್ಕೆ ಟಾಲಿವುಡ್ ನ ಸ್ಟಾರ್ ನಟ ಬಾಹುಬಲಿ ಪ್ರಭಾಸ್ ವಿಶ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

  ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಸಿನಿಮಾ ಕಥೆ ಏನಾಯಿತು? ಇಲ್ಲಿದೆ ಮಾಹಿತಿಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಸಿನಿಮಾ ಕಥೆ ಏನಾಯಿತು? ಇಲ್ಲಿದೆ ಮಾಹಿತಿ

  ಹೌದು, ದೀಪಿಕಾ ಹುಟ್ಟುಹಬ್ಬಕ್ಕೆ ಪ್ರಭಾಸ್ ಸಾಮಾಜಿಕ ಜಾಲತಾಣದ ಮೂಲಕ ಶುಭಹಾರೈಸಿದ್ದಾರೆ. ದೀಪಿಕಾ ಅವರ ಸುಂದರ ಫೋಟೋವನ್ನು ಹಂಚಿಕೊಂಡು 'ಹುಟ್ಟುಹಬ್ಬದ ಶುಭಾಶಯಗಳು ಗಾರ್ಜಿಯಸ್ ಸೂಪರ್ ಸ್ಟಾರ್ ದೀಪಿಕಾ ಪಡುಕೋಣೆ' ಎಂದು ವಿಶ್ ಮಾಡಿದ್ದಾರೆ. ಪ್ರಭಾಸ್ ವಿಶ್ ಮಾಡುತ್ತಿದ್ದಂತೆ ಅಭಿಮಾನಿಗಳು ಶುಭಾಶಯ ತಿಳಿಸಿ ಸಂಸತ ಪಡುತ್ತಿದ್ದಾರೆ.

  ಭಾರತೀಯ ಸಿನಿಮಾರಂಗದ ಖ್ಯಾತ ಕಲಾವಿದರಾದ ಪ್ರಭಾಸ್ ಮತ್ತು ದೀಪಿಕಾ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಇಬ್ಬರು ಒಟ್ಟಿಗೆ ತೆರೆಹಂಚಿಕೊಳ್ಳುತ್ತಿದ್ದು, ಇಬ್ಬರನ್ನು ನೋಡಿ ಕಣ್ತುಂಬಿ ಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಮಹಾನಟಿ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಸಾರಥ್ಯದಲ್ಲಿ ಸಿನಿಮಾ ಮೂಡಿಬರುತ್ತಿದೆ.

  ಸಿನಿಮಾ ಅನೌನ್ಸ ಆಗಿ ತಿಂಗಳುಗಳೆ ಆಗಿದೆ. ಆದರೆ ಇನ್ನು ಚಿತ್ರೀಕರಣ ಪ್ರಾರಂಭ ಮಾಡಿಲ್ಲ. ಮೂಲಗಳ ಪ್ರಕಾರ ಈ ಸಿನಿಮಾ ಮೇ ತಿಂಗಳಿಂದ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ದೊಡ್ಡ ಮಟ್ಟದಲ್ಲಿ ಸಿನಿಮಾ ಮೂಡಿಬರುತ್ತಿದ್ದು, ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಸಹ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಗ್ ಬಜೆಟ್ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ.

  English summary
  Tollywood Actor Prabhas birthday wishes to Actress Deepika Padukone. He calls her Superstar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X