ಸುಶಾಂತ್ ಆತ್ಮಹತ್ಯೆ ಪರಿಣಾಮ ಪ್ರಭಾಸ್‌ಗೆ ಆಯ್ತು ದೊಡ್ಡ ನಷ್ಟ!

ನಟ ಸುಶಾಂತ್ ಸಿಂಗ್ ಆತ್ಮಹತ್ಯೆಗೂ ಪ್ರಭಾಸ್‌ ಗೂ ಎತ್ತಣಿಂದೆತ್ತ ಸಂಬಂಧ. ಖಂಡಿತ ಸಂಬಂಧ ಇಲ್ಲ. ಆದರೆ ಸುಶಾಂತ್ ಸಿಂಗ್ ಸಾವಿನ ಪರಿಣಾಮ ಪ್ರಭಾಸ್‌ ಮೇಲೆ ಆಗಿದೆ.

ಹೌದು, ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪರಿಣಾಮ ನಟ ಪ್ರಭಾಸ್‌ ಮೇಲಾಗಿದೆ. ಸುಶಾಂತ್ ಸಾವಿನಿಂದಾಗಿ ದೊಡ್ಡ ಸಿನಿಮಾ ಒಂದನ್ನು ಕಳೆದುಕೊಂಡಿದ್ದಾರೆ ಪ್ರಭಾಸ್.

ಪ್ರಭಾಸ್‌ ಬಾಲಿವುಡ್‌ ಸಿನಿಮಾಕ್ಕೆ ಪಾದಾರ್ಪಣೆ ಮಾಡುವವರಿದ್ದರು. ಬಾಲಿವುಡ್‌ನ ಭಾರಿ ದೊಡ್ಡ ನಿರ್ಮಾಪಕರೊಬ್ಬರು ಪ್ರಭಾಸ್ ಸಿನಿಮಾಕ್ಕೆ ಬಂಡವಾಳ ಹೂಡಲು ತಯಾರಾಗಿ ತುದಿಗಾಲಲ್ಲಿ ನಿಂತಿದ್ದರು. ಆದರೆ ಸುಶಾಂತ್ ಸಿಂಗ್ ಸಾವಿನಿಂದಾಗಿ ಎಲ್ಲ ಲೆಕ್ಕಾಚಾರ ತಲೆಕೆಳಗಾಗಿದೆ.

ಪ್ರಭಾಸ್-ಕರಣ್ ಜೋಹರ್ ಹತ್ತಿರದ ಸ್ನೇಹಿತರು

ಪ್ರಭಾಸ್-ಕರಣ್ ಜೋಹರ್ ಹತ್ತಿರದ ಸ್ನೇಹಿತರು

ಪ್ರಭಾಸ್ ಹಾಗೂ ಬಾಲಿವುಡ್‌ನ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಬಹು ಹತ್ತಿರದ ಸ್ನೇಹಿತರು. ಪ್ರಭಾಸ್ ಅಭಿನಯದ ಬಾಹುಬಲಿ ಸಿನಿಮಾದ ಹಿಂದಿ ಡಬ್ ಅನ್ನು ವಿತರಿಸಿದ್ದು ಇದೇ ಕರಣ್ ಜೋಹರ್. ಬಾಹುಬಲಿ ಹಿಂದಿ ವರ್ಷನ್‌ನಿಂದ ಸಾಕಷ್ಟು ಒಳ್ಳೆ ಹಣವನ್ನೂ ಮಾಡಿದರು ಕರಣ್ ಜೋಹರ್.

ಪ್ರಭಾಸ್‌ಗೆ ದೊಡ್ಡ ಪಾರ್ಟಿ ಕೊಟ್ಟಿದ್ದ ಕರಣ್

ಪ್ರಭಾಸ್‌ಗೆ ದೊಡ್ಡ ಪಾರ್ಟಿ ಕೊಟ್ಟಿದ್ದ ಕರಣ್

ಬಾಹುಬಲಿ ಗೆಲುವಿನ ನಂತರ ಪ್ರಭಾಸ್‌ ಮುಂಬೈಗೆ ಬಂದಾಗ ಕರಣ್ ಜೋಹರ್ ದೊಡ್ಡ ಪಾರ್ಟಿ ನೀಡಿದ್ದರು. ಅಷ್ಟೆ ಅಲ್ಲದೆ ಪ್ರಭಾಸ್‌ಗಾಗಿ ಹಿಂದಿ ಸಿನಿಮಾ ನಿರ್ಮಿಸುವುದಕ್ಕೆ ತಯಾರೆಂದು ಹೇಳಿದ್ದರು. ದೊಡ್ಡ ಬಜೆಟ್‌ ಸಿನಿಮಾ ಮಾಡುವುದಕ್ಕೆ ಮಾತುಕತೆಯೂ ಸಹ ನಡೆದಿತ್ತು. ಆದರೆ ಈಗ ಸುಶಾಂತ್ ಸಿಂಗ್ ಆತ್ಮಹತ್ಯೆ ನಂತರ ಪರಿಸ್ಥಿತಿ ಬದಲಾಗಿದೆ.

ಸುಶಾಂತ್ ಸಿಂಗ್ ಸಾವಿನಲ್ಲಿ ಕರಣ್ ಪಾತ್ರ?

ಸುಶಾಂತ್ ಸಿಂಗ್ ಸಾವಿನಲ್ಲಿ ಕರಣ್ ಪಾತ್ರ?

ಸುಶಾಂತ್ ಸಿಂಗ್ ಪ್ರಕರಣದಲ್ಲಿ ಕರಣ್ ಜೋಹರ್ ಅನ್ನು ಆರೋಪಿಯಂತೆ ನೋಡಲಾಗುತ್ತಿದೆ. ಕರಣ್ ಜೋಹರ್ ಸ್ವಜನಪಕ್ಷಪಾತ ಸುಶಾಂತ್ ಸಿಂಗ್ ಸಾವಿಗೆ ಕಾರಣವೆಂದು ಕರಣ್ ಮೇಲೆ ಆರೋಪ ಹೊರಿಸಲಾಗಿದೆ. ಕರಣ್ ಜೋಹರ್ ಸಹ ಮಾನಸಿಕವಾಗಿ ಜರ್ಜಿರತರಾಗಿದ್ದಾರೆ.

ಕರಣ್ ಜೋಹರ್‌ನಿಂದ ಅಂತರ ಕಾಯ್ದುಕೊಂಡಿರುವ ಪ್ರಭಾಸ್

ಕರಣ್ ಜೋಹರ್‌ನಿಂದ ಅಂತರ ಕಾಯ್ದುಕೊಂಡಿರುವ ಪ್ರಭಾಸ್

ಇದೆಲ್ಲವನ್ನೂ ಗಮನಿಸಿದ ಪ್ರಭಾಸ್ ಸದ್ಯಕ್ಕೆ ಬಾಲಿವುಡ್‌ನಿಂದ ಹಾಗೂ ಕರಣ್ ಜೋಹರ್ ಇಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರೆ. ಬಾಲಿವುಡ್ ನಿಂದಲೂ ದೂರ ಉಳಿವುಳಿದು, ತೆಲುಗು ಸಿನಿಮಾಕ್ಕೆ ಮಾತ್ರವೇ ಸೀಮಿತವಾಗಿರುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

More from Filmibeat

English summary
Prabhas's Bollywood debut not going to happen because of Sushant Singh. Karan Johar promises to launch Prabhas in Bollywood. but he is facing hard times now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X